ಬೆಂಗಳೂರು: ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಪಣ ತೊಟ್ಟಿರುವ ನಗರ ಪೊಲೀಸರು, ಬರೀ ಡ್ರಗ್ ಪೆಡ್ಲರ್ಗಳು ಹಾಗೂ ಖರೀದಿದಾರರ ಮೇಲಷ್ಟೇ ಪ್ರಕರಣ ದಾಖಲಿಸುತ್ತಿಲ್ಲ. ಅವರೊಂದಿಗೆ ‘ಡ್ರಗ್ಸ್ ಬಳಕೆದಾರರ’(ಗ್ರಾಹಕರು) ಮೇಲೂ ಹದ್ದಿನ ಕಣ್ಣಿಟ್ಟು, ಪ್ರಕರಣ ದಾಖಲಿಸುತ್ತಿದ್ದಾರೆ.

ಕಳೆದ ನಾಲ್ಕೂವರೆ ತಿಂಗಳಲ್ಲಿ ಪೆಡ್ಲರ್ಗಳ ವಿರುದ್ಧ ದಾಖಲಾದ ಪ್ರಕರಣಗಳಿಗಿಂತಲೂ ‘ಬಳಕೆದಾರರ’ ವಿರುದ್ಧವೇ ಹೆಚ್ಚಿನ ಪ್ರಕರಣಗಳನ್ನು ದಾಖಲು ಮಾಡಿಕೊಂಡು ಬಿಸಿ ಮುಟ್ಟಿಸಿದ್ದಾರೆ.

ಡ್ರಗ್ಸ್ ತೆಗೆದುಕೊಂಡು ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದರೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸುತ್ತಾರೆ. ಎರಡು ಅಥವಾ ಮೂರನೇ ಬಾರಿ ಸಿಕ್ಕಿಬಿದ್ದರೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿಯೂ ಬರಲಿದೆ. ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು, ಬಳಕೆದಾರರ ಮೇಲೂ ನಿಗಾ ಇಡಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.

2023ರಲ್ಲಿ ಡ್ರಗ್ಸ್ ಬಳಕೆದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. 2024ರಲ್ಲಿ ಬಳಕೆದಾರರ ಮೇಲೂ ಪ್ರಕರಣ ದಾಖಲಿಸಲು ಆರಂಭಿಸಲಾಗಿತ್ತು. ಆ ವರ್ಷ ಕೇವಲ 32 ಪ್ರಕರಣಗಳನ್ನಷ್ಟೇ ದಾಖಲು ಮಾಡಲಾಗಿತ್ತು. ಆದರೆ, ಈ ವರ್ಷ(2026) ಬಳಕೆದಾರರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ಜನವರಿ 1ರಿಂದ ಮೇ 12ರ ತನಕ ಬಳಕೆದಾರರ ವಿರುದ್ಧವೇ 1,800 ಪ್ರಕರಣ ದಾಖಲು ಮಾಡಲಾಗಿದೆ.

ಸಾಫ್ಟ್ವೇರ್ ಉದ್ಯೋಗಸ್ಥರು, ಕಾಲೇಜು ವಿದ್ಯಾರ್ಥಿಗಳು ಮತ್ತು ಶ್ರೀಮಂತ ಕುಟುಂಬದಿಂದ ಬಂದ ಯುವಕ–ಯುವತಿಯರನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಜಾಲ ಕೆಲಸ ಮಾಡುತ್ತಿದೆ. ಕಾಲೇಜು, ಪೇಯಿಂಗ್ ಗೆಸ್ಟ್ಗಳು ಹಾಗೂ ಹಾಸ್ಟೆಲ್ಗಳ ಬಳಿ ಮಾದಕ ವಸ್ತುಗಳ ಮಾರಾಟ ದಂಧೆ ನಡೆಯುತ್ತಿದೆ. ಪೆಡ್ಲರ್ಗಳು ಕದ್ದುಮುಚ್ಚಿ ಮಧ್ಯವರ್ತಿಗಳಿಗೆ ಡ್ರಗ್ಸ್ ಪೂರೈಸುತ್ತಾರೆ. ಅವರು ವಿದ್ಯಾರ್ಥಿಗಳು ಹಾಗೂ ಟೆಕಿಗಳಿಗೆ ಮಾರಾಟ ಮಾಡುತ್ತಾರೆ.

ದಿಢೀರ್ ದಾಳಿಗೆ ಸಿದ್ಧತೆ: ಪಶ್ಚಿಮ ವಿಭಾಗದ ಆರು ಶಿಕ್ಷಣ ಸಂಸ್ಥೆಗಳು, ಎರಡು ಹಾಸ್ಟೆಲ್ಗಳ ಮೇಲೆ ಕಳೆದ ಮಾರ್ಚ್ನಲ್ಲಿ ದಾಳಿ ನಡೆಸಿ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. 1,200 ವಿದ್ಯಾರ್ಥಿಗಳ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ 31 ವಿದ್ಯಾರ್ಥಿಗಳು ಡ್ರಗ್ಸ್ ತೆಗೆದುಕೊಂಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು. ಮುಂದಿನ ದಿನಗಳಲ್ಲಿ ಪೂರ್ವ, ಆಗ್ನೇಯ, ಉತ್ತರ, ದಕ್ಷಿಣ, ಈಶಾನ್ಯ, ವಾಯವ್ಯ ವಿಭಾಗಗಳ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ಗಳು ಹಾಗೂ ಪೇಯಿಂಗ್ ಗೆಸ್ಟ್ಗಳ ಮೇಲೂ ಇದೇ ಮಾದರಿಯಲ್ಲಿ ದಾಳಿ ನಡೆಸಿ ಅಲ್ಲಿನ ನಿವಾಸಿಗಳನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದೇಶಗಳಿಂದಲೇ ಹೆಚ್ಚು ಪೂರೈಕೆ: ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಂಥೆಟಿಕ್ ಮಾದರಿಯ ಡ್ರಗ್ಸ್ ವಿದೇಶದಿಂದ ಪೂರೈಕೆ ಆಗುತ್ತಿದೆ. ವಿಮಾನದ ಕಾರ್ಗೊ ಸೇವೆಯಲ್ಲಿ ಕಳ್ಳ ಸಾಗಣೆಯ ಮೂಲಕ ಬೆಂಗಳೂರಿಗೆ ಡ್ರಗ್ಸ್ ತಂದು, ಇಲ್ಲಿಂದ ದೇಶದ ಬೇರೆ ಬೇರೆ ನಗರಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.

ಥಾಯ್ಲೆಂಡ್ನಲ್ಲಿ ನೆಲಸಿರುವ ಕೆಲವು ಭಾರತೀಯರು ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಥಾಯ್ಲೆಂಡ್ನಲ್ಲಿ ಸುಲಭವಾಗಿ ಸಿಗುವ ಹೈಡ್ರೊ ಗಾಂಜಾವನ್ನು ‘ಎಂಜಿನಿಯರಿಂಗ್ ಪ್ಯಾಕಿಂಗ್’ ಮೂಲಕ ಕಾರ್ಗೊ ಸೇವೆಯ ಮೂಲಕ ಸಾಗಿಸಲಾಗುತ್ತಿದೆ. ಚಿನ್ನದ ಕಳ್ಳ ಸಾಗಣೆಯ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ) ಹಾಗೂ ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಹೀಗಾಗಿ, ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದವರು ಇದೀಗ ಮಾದಕ ವಸ್ತುಗಳ ಪೂರೈಕೆ ದಂಧೆಗೆ ಇಳಿದಿದ್ದಾರೆ. ಹೀಗಾಗಿ, ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಸನ್ಮಿತ್ರ’: ವ್ಯಸನಿಗಳಿಗೆ ಕೌನ್ಸೆಲಿಂಗ್

‘ಮಾದಕ ಪದಾರ್ಥಗಳ ಸೇವನೆ ಮಾಡುವವರನ್ನು ಪತ್ತೆಹಚ್ಚಿ ವ್ಯಸನದಿಂದ ಮುಕ್ತಗೊಳಿಸಲು ಪೊಲೀಸ್ ಇಲಾಖೆ ‘ಸನ್ಮಿತ್ರ’ ಯೋಜನೆ ರೂಪಿಸಿದೆ. ಯಾರೇ ಡ್ರಗ್ಸ್ ವ್ಯಸನಿ ಆಗಿದ್ದರೂ ‘ಸನ್ಮಿತ್ರ’ದ ಮೂಲಕ ಕೌನ್ಸೆಲಿಂಗ್ಗೆ ಒಳಪಡಿಸಲಾಗುವುದು. ಈಗಾಗಲೇ ಹಲವು ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ಗೆ ಒಳಪಡಿಸಲಾಗಿದೆ. ಯಾವ ಕಾರಣಕ್ಕೆ ಮಾದಕ ಪದಾರ್ಥಗಳಿಗೆ ದಾಸರಾಗಿದ್ದಾರೆ ಅವರಿಗೆ ಡ್ರಗ್ಸ್ ಎಲ್ಲಿ ಸಿಗುತ್ತಿದೆ ಎಂಬುದನ್ನೂ ತಿಳಿದುಕೊಂಡು ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

₹190 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಈ ವರ್ಷ ಬೆಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಅದರ ಪರಿಣಾಮವೇ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ಮೂಲಗಳು ಹೇಳಿವೆ. 2026ರ ಜನವರಿ 1ರಿಂದ ಮೇ 12ರ ತನಕ ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ₹190.18 ಕೋಟಿ ಮೌಲ್ಯದ ನೈಸರ್ಗಿಕ ಹಾಗೂ ಸಿಂಥೆಟಿಕ್ ಮಾದರಿಯ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಈ ದಂಧೆಯಲ್ಲಿ ತೊಡಗಿದ್ದ ಸ್ಥಳೀಯ ಹಾಗೂ ವಿದೇಶದ ಪ್ರಜೆಗಳೂ ಸೇರಿ ಒಟ್ಟು 2639 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಅಂದಾಜು 1128 ಕೆ.ಜಿ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಕಳೆದ 15 ದಿನಗಳಲ್ಲಿ ₹65 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.