ಬೆಂಗಳೂರು: ಉತ್ತರ ವಿಭಾಗದ 13 ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳಿಂದ ₹21.4 ಲಕ್ಷ ಮೌಲ್ಯದ 107 ಮೊಬೈಲ್ ಫೋನ್ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

ಕಳ್ಳತನವಾದ ಮೊಬೈಲ್ಗಳ ಮಾಹಿತಿಯನ್ನು ‘ಇ–ಲಾಸ್ಟ್’ ಆ್ಯಪ್ ಮತ್ತು ಕೇಂದ್ರ ಸರ್ಕಾರ ರೂಪಿಸಿರುವ ‘ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್’ (ಸಿಇಐಆರ್) ಜಾಲತಾಣದಲ್ಲಿ ದಾಖಲು ಮಾಡಲಾಗುತ್ತದೆ. ತಾಂತ್ರಿಕ ಸುಳಿವು ಆಧರಿಸಿ, ಪೊಲೀಸರು ತನಿಖೆ ನಡೆಸಿ ಮೊಬೈಲ್ ಪತ್ತೆ ಮಾಡಿ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

ಫೆಬ್ರುವರಿ 1ರಿಂದ ಮಾರ್ಚ್ 8ರ ತನಕ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.

ಪತ್ತೆ ಮಾಡಿದ ಮೊಬೈಲ್ ಫೋನ್ಗಳ ವಿವರ:
ಆರ್.ಟಿ. ನಗರ ಠಾಣೆಯ ಪೊಲೀಸರು 21, ಜಾಲಹಳ್ಳಿ 14, ಜೆ.ಸಿ ನಗರ 12, ಮಹಾಲಕ್ಷ್ಮಿ ಲೇಔಟ್ 8, ಸಂಜಯನಗರ 8, ರಾಜಾಜಿನಗರ 7, ಸುಬ್ರಹ್ಮಣ್ಯನಗರ 6, ನಂದಿನಿಲೇಔಟ್ 6, ಮಲ್ಲೇಶ್ವರ 6, ಹೆಬ್ಬಾಳ 6, ಯಶವಂತಪುರ 5, ಆರ್ಎಂಸಿ ಯಾರ್ಡ್ 4, ಶ್ರೀರಾಮಪುರ 4 ಸೇರಿದಂತೆ ಒಟ್ಟು 107 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಅವರ ನೇತೃತ್ವದಲ್ಲಿ 13 ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.