ಬೆಂಗಳೂರು: ಕರ್ತವ್ಯನಿರತ ಹೆಡ್ ಕಾನ್ಸ್ಟೆಬಲ್ಗೆ ನಿಂದಿಸಿ ಹಾಗೂ ಬೆದರಿಕೆ ಹಾಕಿದ್ದ ಆರೋಪದಡಿ ದ್ವಿಚಕ್ರ ವಾಹನ ಸವಾರನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬ್ಬನ್ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಡಿ.ಚಂದ್ರಕುಮಾರ್ ನೀಡಿದ ದೂರಿನ ಮೇಲೆ ಬೆನ್ಸನ್ ಟೌನ್ನ ನಿವಾಸಿ ಹುಸೇನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

ತಿಮ್ಮಯ್ಯ ವೃತ್ತದಲ್ಲಿ ಪಿಎಸ್ಐ ಬಿ.ಸುರೇಶ್ ಅವರೊಂದಿಗೆ ಚಂದ್ರಕುಮಾರ್ ಸಂಚಾರ ನಿರ್ವಹಣೆಯ ಕರ್ತವ್ಯದಲ್ಲಿ ಇದ್ದರು. ನಂಬರ್ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಆರೋಪಿ ಬೈಕ್ನಲ್ಲಿ ಕಾಫಿ ಬೋರ್ಡ್ ಜಂಕ್ಷನ್ನಿಂದ ತಿಮ್ಮಯ್ಯ ವೃತ್ತದ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ. ಬೈಕ್ ನಿಲ್ಲಿಸುವಂತೆ ಸೂಚಿಸಿದ್ದರೂ ಮುಂದೆ ಹೋಗಲು ಪ್ರಯತ್ನಿಸಿದ್ದ. ಆಗ ಬೈಕ್ ತಡೆದಾಗ ಕುಪಿತಗೊಂಡ ಆತ, ‘ಕೈಬೆರಳು ತೋರಿಸುತ್ತಾ ಅವಹೇಳನಕಾರಿಯಾಗಿ ನಿಂದಿಸಿದ್ದ’ ಎಂದು ದೂರು ನೀಡಲಾಗಿದೆ.

‘ನನ್ನ ತಂಟೆಗೆ ಬಂದರೆ ಸಾಯಿಸುತ್ತೇನೆ. ಸಮವಸ್ತ್ರದಲ್ಲಿ ಇರುವ ಕಾರಣಕ್ಕೆ ಬಿಟ್ಟಿದ್ದೇನೆ. ನೀನು ಸಮವಸ್ತ್ರ ಬಿಚ್ಚಿ ಬಾ. ಆಗ ನಾನು ಯಾರೆಂದು ತೋರಿಸುತ್ತೇನೆ ಎಂಬುದಾಗಿ ಬೆದರಿಕೆ ಒಡ್ಡಿದ್ದ’ ಎಂದು ಚಂದ್ರಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.