ಬೆಂಗಳೂರು: ಪೂರ್ವ ವಿಭಾಗದ 14 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳ್ಳತನವಾಗಿದ್ದ ₹1.25 ಕೋಟಿಮೌಲ್ಯದ 385 ಮೊಬೈಲ್ ಫೋನ್ಗಳನ್ನು ‘ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್’ (ಸಿಇಐಆರ್) ಪೋರ್ಟಲ್ ನೆರವಿನಿಂದ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ.

ಮಾರ್ಚ್ ತಿಂಗಳಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಮೊಬೈಲ್ ಫೋನ್ ಜಪ್ತಿ ಮಾಡಿಕೊಳ್ಳಲಾಗಿದೆ.

ಕಳ್ಳತನವಾದ ಮೊಬೈಲ್ಗಳ ಮಾಹಿತಿಯನ್ನು ‘ಇ–ಲಾಸ್ಟ್’ ಆ್ಯಪ್ ಹಾಗೂ ಕೇಂದ್ರ ಸರ್ಕಾರ ರೂಪಿಸಿರುವ ‘ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್’ ಪೋರ್ಟಲ್ನಲ್ಲಿ ದಾಖಲುಮಾಡಲಾಗುತ್ತದೆ. ಪೂರ್ವ ವಿಭಾಗದಪೊಲೀಸರು ತಾಂತ್ರಿಕ ಸುಳಿವು ಆಧರಿಸಿ ತನಿಖೆ ನಡೆಸಿ, ಮೊಬೈಲ್ ಪತ್ತೆ ಮಾಡಿ, ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

ಬಾಣಸವಾಡಿ 87, ಜೆ.ಬಿ ನಗರ 81, ಗೋವಿಂದಪುರ 35, ಕೆ.ಜಿ ಹಳ್ಳಿ 30, ಹಲಸೂರು 30, ಡಿ.ಜೆ ಹಳ್ಳಿ 29, ಹೆಣ್ಣೂರು 19, ಕಮರ್ಷಿಯಲ್ ಸ್ಟ್ರೀಟ್ 16, ಪುಲಕೇಶಿನಗರ 15, ಇಂದಿರಾನಗರ 12, ಆರ್.ಎಂ ನಗರ 10, ಬೈಯಪ್ಪನ ಹಳ್ಳಿ 8, ಶಿವಾಜಿನಗರ 8, ಭಾರತಿನಗರ ಠಾಣೆಯ ಪೊಲೀಸರು 5 ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

ಪೂರ್ವವಿಭಾಗದ ಡಿಸಿಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.