ಬೆಂಗಳೂರು: ಪೂಜೇನಹಳ್ಳಿ ಸಮಗ್ರ ಶೀತಲ ಸರಪಳಿ ಘಟಕವನ್ನು ಕೆಪೆಕ್ ಸಂಸ್ಥೆಯ ಸ್ವಾಧೀನಕ್ಕೆ ಪಡೆಯಲು ಕೃಷಿ ಇಲಾಖೆಯು ಸ್ವಾಧೀನ ಅಧಿಕಾರಿಯನ್ನು ನೇಮಿಸಿದೆ.

ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಬೆಂಗಳೂರು ಇವರನ್ನು ತೆರವು ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆಪೆಕ್ ಸಂಸ್ಥೆಯು ತನ್ನ ಆಂತರಿಕ ಸಂಪನ್ಮೂಲ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆಯ, ದೇವನಹಳ್ಳಿ ಸಮೀಪದ ಪೂಜೇನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಸಮಗ್ರ ಶೀತಲ ಸರಪಳಿ ಘಟಕವನ್ನು ನಿರ್ಮಿಸಿತ್ತು. 2024ರಲ್ಲಿ ಮೆ. ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಸಂಸ್ಥೆಗೆ ಒಡಂಬಡಿಕೆ ಮೂಲಕ ವಹಿಸಲಾಗಿತ್ತು.

ಈ ಸಂಸ್ಥೆಯು ಕಾಲಕಾಲಕ್ಕೆ ಬಾಡಿಗೆ ಪಾವತಿ ಮಾಡಿರಲಿಲ್ಲ. ಘಟಕವನ್ನು ಒಪ್ಪಂದದ ಹೊರತಾಗಿ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿತ್ತು. ಈ ಬಗ್ಗೆ ನೋಟಿಸ್ ನೀಡಲಾಗಿತ್ತು. ಈ ಘಟಕವನ್ನು ಕೆಪೆಕ್ಗೆ ಹಿಂದಿರುಗಿಸಲು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದರು.

ಈ ಘಟಕವನ್ನು ಮೆ. ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ನಿಂದ ಮುಕ್ತಗೊಳಿಸಲು ಅಧಿಕಾರಿಗಳನ್ನು ನೇಮಿಸಲು ಕೆಪೆಕ್ ಸಂಸ್ಥೆ ಕೋರಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.