ಬೆಂಗಳೂರು: ಆರ್ಟ್ ಆಫ್ ಗಿವಿಂಗ್ನ 13ನೇ ವಾರ್ಷಿಕೋತ್ಸವದ (ಮೇ 17) ಅಂಗವಾಗಿ ಬಸವೇಶ್ವರ ನಗರದ ಇಂಡಿಯನ್ ಹೈಸ್ಕೂಲ್ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಸುತ್ತಮುತ್ತ ಕೆಲಸ ಮಾಡುವ ಪೌರಕಾರ್ಮಿಕರು, ಆಯಾಗಳು, ಬಡ ಮಹಿಳೆಯರಿಗೆ ಸೀರೆ ಮತ್ತು ಹಣ್ಣು ವಿತರಿಸಲಾಯಿತು. ಈ ಬಾರಿಯ ಆರ್ಟ್ ಆಫ್ ಗಿವಿಂಗ್ನ ಘೋಷವಾಕ್ಯ ‘ಶೇರ್ ಟು ಶೈನ್’ ಆಗಿದೆ.

ಶಾಲೆಯ ಕಾರ್ಯದರ್ಶಿ ಎಚ್.ಎಂ. ಸೌಭಾಗ್ಯಲಕ್ಷ್ಮಿ ಮಾತನಾಡಿ, ‘ಬಡ ಮಹಿಳೆಯರು, ಪೌರಕಾರ್ಮಿಕರನ್ನು ಗುರುತಿಸಿ ಗೌರವಿಸಿರುವುದು ಒಳ್ಳೆಯ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಪೌರಕಾರ್ಮಿಕರು, ‘ಪರಿಸರದ ಸ್ವಚ್ಛತೆಗಾಗಿ ಕೆಲಸ ಮಾಡುತ್ತೇವೆ. ನಮ್ಮ ಸೇವೆಯನ್ನೂ ಆರ್ಟ್ ಆಫ್ ಗಿವಿಂಗ್ ಗುರುತಿಸಿರುವುದಕ್ಕೆ ಧನ್ಯವಾದಗಳು’ ಎಂದರು.

ಇದೇ ವೇಳೆ ವಿಜ್ಞಾನ ಶಿಕ್ಷಕಿ ಜ್ಯೋತಿ ಪ್ರಿಯಾ ಅವರು, ನೀರನ್ನು ಹೇಗೆ ಕುಡಿಯಬೇಕು, ಯಾವ ನೀರು ಕುಡಿಯುಲು ಯೋಗ್ಯ, ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿ ಕಾರ್ಯದರ್ಶಿ ಜಯಲಕ್ಷ್ಮಿ, ಸಮನ್ವಯಕಾರರಾದ ಮಮತಾ ಎನ್. ಸ್ವಾಮಿ, ಅನಿತಾ ಗುರು ಪ್ರಸಾದ್, ಶಿಕ್ಷಕಿ ವೀಣಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-1163973057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.