ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ 33 ಸ್ವತ್ತುಗಳನ್ನು ಕೇಂದ್ರ ನಗರ ಪಾಲಿಕೆ ವಶಪಡಿಸಿಕೊಂಡಿದೆ. ಕೂಡಲೇ ಬಾಕಿ ಪಾವತಿ ಮಾಡಿದರೆ ಕಾನೂನು ಕ್ರಮಗಳಿಂದ ಕೈಬಿಡಲಾಗುವುದು ಎಂದು ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಭಾಗವಾಗಿ ಸಾರ್ವಜನಿಕವಾಗಿ ಹರಾಜು ಮೂಲಕ ಸ್ವತ್ತುಗಳನ್ನು ಮಾರಾಟ ಮಾಡಲು ಪ್ರಕಟಣೆ ಹೊರಡಿಸಲಾಗಿತ್ತು. ನಿಗದಿತ ದಿನಾಂಕದಂದು ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ವ್ಯಕ್ತಿಗಳು ಭಾಗವಹಿಸಿಲ್ಲ.

ಹಾಗಾಗಿ, ಸಂಬಂಧಿತ ನಿಯಮಾವಳಿಗಳ ಪ್ರಕಾರ ಕ್ರಮಕೈಗೊಂಡು, ವಲಯ-1 ವ್ಯಾಪ್ತಿಯ 19 ಸ್ವತ್ತುಗಳ ಖಾತೆಗಳನ್ನು ಹಾಗೂ ವಲಯ-2 ವ್ಯಾಪ್ತಿಯ 14 ಸೇರಿದಂತೆ ಒಟ್ಟು 33 ಸ್ವತ್ತುಗಳನ್ನು ಕೇಂದ್ರ ನಗರ ಪಾಲಿಕೆ ಹೆಸರಿನಲ್ಲಿ ದಾಖಲಿಸಿಕೊಳ್ಳಲು ಆದೇಶಿಸಲಾಗಿದೆ. ತಕ್ಷಣ ಪಾವತಿ ಮಾಡುವವರನ್ನು ಹೊರತುಪಡಿಸಿ ಉಳಿದವುಗಳ ಖಾತೆ ಪಾಲಿಕೆಯ ಹೆಸರಿಗೆ ದಾಖಲಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.