ಬೆಂಗಳೂರು: ‘ಸೇಡಿಗಾಗಿ ಹೋರಾಡಿ ಯಾರೂ ಗೆದ್ದಿಲ್ಲ, ಕ್ಷಮಾದಾನದಿಂದ ಯಾರೂ ಸೋತಿಲ್ಲ’, ‘ನಿಮ್ಮ ಶತ್ರುಗಳಿಗಾಗಿ ಪ್ರಾರ್ಥಿಸಿರಿ, ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿರಿ’, ‘ದಯೆಯೇ ಧರ್ಮದ ಮೂಲವಯ್ಯ’, ‘ಕಣ್ಣಿಗೆ ಕಣ್ಣು ಎಂಬ ಸಿದ್ಧಾಂತ ಮುಂದುವರಿದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು...’

ಸಮಾನ ಮನಸ್ಕರು ಸೇರಿ ಪುರಭವನದ ಮುಂದೆ ಬುಧವಾರ ಹಮ್ಮಿಕೊಂಡಿದ್ದ ‘ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ–ಭೂಮಿ ರಕ್ಷಿಸಿ’ ಜಾಗೃತಿ ಅಭಿಯಾನದಲ್ಲಿ ಕಂಡುಬಂದ ಬುದ್ಧ, ಯೇಸು, ಬಸವಣ್ಣ, ಮಹಾತ್ಮ ಗಾಂಧೀಜಿ ಮುಂತಾದ ದಾರ್ಶನಿಕರ ಮಾತುಗಳನ್ನು ಒಳಗೊಂಡ ಭಿತ್ತಿಪತ್ರಗಳು ಇವು.

ಯುದ್ಧ ಎಂಬುದೇ ಜೀವವಿರೋಧಿ ಕ್ರಿಯೆ. ಭಾರತ ಎಂದಿಗೂ ಯಾವುದೇ ಯುದ್ಧದ ಪರ ನಿಂತಿರಲಿಲ್ಲ. ಭಾರತದ ವಿದೇಶಾಂಗ ನೀತಿಗೆ ತಿಲಾಂಜಲಿ ಇಡುವ ಮೂಲಕ ದೇಶವು ಜಗತ್ತಿನ ಎದುರು ತಲೆತಗ್ಗಿಸುವಂತೆ ಮೋದಿ ಸರ್ಕಾರ ಮಾಡಿದೆ. ವಿದೇಶಾಂಗ ನೀತಿ ಅಪಮೌಲ್ಯಗೊಂಡಿದೆ ಎಂದು ಸಮಾನ ಮನಸ್ಕರು ದೂರಿದರು.

‘ಯುದ್ಧವು ಇಸ್ರೇಲ್–ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರಬಹುದು. ಅದರ ಪರಿಣಾಮವನ್ನು ನಾವೂ ಅನುಭವಿಸುವಂತಾಗಿದೆ. ಎಲ್ಪಿಜಿ ಸಿಲಿಂಡರ್ ಇಲ್ಲದೇ ಹೋಟೆಲ್ ನಡೆಸುವವರು ಪರದಾಡುವಂತಾಗಿದೆ. ಆಟೊಗಳು ನಿತ್ಯ ಸಾಲುಗಟ್ಟಿ ನಿಂತು ಗ್ಯಾಸ್ ತುಂಬಿಸಲು ಕಾಯುವಂತಾಗಿದೆ’ ಎಂದು ಬೇಸರಪಟ್ಟರು.

‘ಭಾರತಕ್ಕೂ ಇರಾನ್ಗೂ ನಾಲ್ಕು ಸಾವಿರ ವರ್ಷಗಳಿಂದ ಸಂಬಂಧವಿದೆ. ಸ್ವತಂತ್ರ ಭಾರತ ಮತ್ತು ಇರಾನ್ ನಡುವಿನ ಬಾಂಧವ್ಯವೂ ಚೆನ್ನಾಗಿತ್ತು. ಆದರೆ, ಯುದ್ಧದ ಆರಂಭದ ದಿನಗಳಲ್ಲೇ ಈಗಿನ ಸರ್ಕಾರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿತ್ತು’ ಎಂದು ಆಪಾದಿಸಿದರು.

ಸಮಾನ ಮನಸ್ಕರಾದ ಎಲ್.ಎನ್.ಮುಕುಂದರಾಜ್, ಶಿವಸುಂದರ್, ಮಂಜುನಾಥ್, ಕೆ.ಪ್ರಕಾಶ್, ಮಹಾಂತೇಶ್, ಬಾಲಕೃಷ್ಣ ಶೆಟ್ಟಿ, ಜಿಪಿಒ ಚಂದ್ರು, ನಗರಗೆರೆ ರಮೇಶ್, ವಿವೇಕಾನಂದ ಎಚ್.ಕೆ., ರೂಪೇಶ್ ಪುತ್ತೂರು, ಉಮೇಶ್, ಯುವರಾಜ್, ಪ್ರಕಾಶಮೂರ್ತಿ, ಬ್ಯಾಡರಹಳ್ಳಿ ಶಿವರಾಜ್, ಕೆ.ವಿ.ನಾಗರಾಜಮೂರ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-4-1786842851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.