ಬೆಂಗಳೂರು: ನಗರದಲ್ಲಿ ಪ್ರತಿ ವರ್ಷವೂ ಭಾರಿ ಮಳೆಗೆ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲೆಲ್ಲಿ ಯಾವ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂಬ ಅರಿವು ಜಿಬಿಎ, ನಗರ ಪಾಲಿಕೆಗಳ ಅಧಿಕಾರಿಗಳಿಗೆ ಇದ್ದರೂ, ಮುನ್ನೆಚ್ಚರಿಕೆ ವಹಿಸದೆ, ನಿರ್ಲಕ್ಷ್ಯಭಾವ ತೋರುವುದರಿಂದ ಪ್ರತಿಬಾರಿ ಸಂಕಷ್ಟ ವೃದ್ಧಿಯಾಗುತ್ತಲೇ ಇದೆ.

ಮಳೆ ಬಂದಾಗ ಯಾವ ಪ್ರದೇಶಗಳಲ್ಲಿ ಯಾವ ರೀತಿಯ ಸಮಸ್ಯೆ ಎದುರಾಗುತ್ತದೆ ಎಂಬುದರ ಕುರಿತು ಕಳೆದ ಐದಾರು ವರ್ಷಗಳಿಂದ ಬಿಬಿಎಂಪಿ/ ಜಿಬಿಎ ಪಟ್ಟಿಯನ್ನೇ ತಯಾರಿಸಿದೆ. 209 ಸ್ಥಳಗಳನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದ್ದು, ಇದರಲ್ಲಿ 49 ಪ್ರದೇಶಗಳಲ್ಲಿ ಇನ್ನೂ ಸಮಸ್ಯೆ ಮುಂದುವರಿದಿದೆ ಎಂದು ಏಪ್ರಿಲ್ 2ರ ಜಿಬಿಎ ಸುತ್ತೋಲೆಯಲ್ಲಿಯೇ ತಿಳಿಸಲಾಗಿದೆ.

ಪ್ರವಾಹ ತಡೆಗಟ್ಟಲು ಶಾಶ್ವತ ಪರಿಹಾರ ಕ್ರಮಗಳನ್ನು ತೆಗೆದುಕೊಂಡು, ಯಾವುದೇ ಸಮಸ್ಯೆ ಉಂಟಾಗದಂತೆ ಅಗತ್ಯ ಕಾಮಗಾರಿಗಳನ್ನು ನಡೆಸಬೇಕು ಎಂದು ಜನವರಿಯಿಂದಲೂ ನಗರ ಪಾಲಿಕೆಗಳಿಗೆ ಜಿಬಿಎ ಸೂಚನೆ ನೀಡುತ್ತಿದೆ. ಯಾವ ಕೆಲಸವನ್ನು ಯಾರು ನಿರ್ವಹಿಸಬೇಕು ಎಂಬ ಬಗ್ಗೆಯೂ ಮಾರ್ಗಸೂಚಿ ಇದೆ. ಆದರೆ, ಮಳೆ ಬರುವವರೆಗೂ ಈ ಕೆಲಸಗಳು ಆಗಿರುವುದಿಲ್ಲ. ಹೀಗಾಗಿ, ಇಂತಹದ್ದೇ ಸೂಚನೆ/ ಮಾರ್ಗಸೂಚಿಯನ್ನು ಏಪ್ರಿಲ್ 30ರಂದು ಕೂಡ ಜಿಬಿಎ ಮುಖ್ಯ ಆಯುಕ್ತರು ಹೊರಡಿಸಿದ್ದಾರೆ.

ನಗರ ಪಾಲಿಕೆಗಳ ಆಯುಕ್ತರು ಹಾಗೂ ಜಿಬಿಎ ಅಧಿಕಾರಿಗಳಿಗೆ ಮಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನೀಡಿದ್ದ ಸೂಚನೆಗಳಲ್ಲಿ ಶೇ 50ರಷ್ಟು ಜಾರಿಯಾಗಿದ್ದರೂ, ನಗರದಲ್ಲಿ ಮಳೆಯಿಂದ ಇಷ್ಟೊಂದು ಸಮಸ್ಯೆ ಎದುರಾಗುತ್ತಿರಲಿಲ್ಲ. ‘ಒಂದು ಗಂಟೆಯಲ್ಲಿ ಅತಿಹೆಚ್ಚು ಮಳೆ ಬಂದಿದೆ’ ಎಂಬ ಸಬೂಬು ಹೇಳುತ್ತಿದ್ದಾರೆ. ಆದರೆ, ‘ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಎರಡು ವಾರದ ಹಿಂದೆ ಹೇಳಿದ್ದನ್ನು ಹೇಗೆ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

‘ಹೊಸ ಕಟ್ಟಡದಲ್ಲಿ ಒಂದು ಗೋಡೆ ಹೆಚ್ಚಾಗಿ ನಿರ್ಮಿಸುತ್ತಿರುವುದನ್ನು ಮೂರನೇ ಕಣ್ಣಿನಿಂದಲೇ ತಿಳಿದುಕೊಳ್ಳುವ ಎಂಜಿನಿಯರ್ಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಶಿಥಿಲವಾಗಿರುವ ಕಟ್ಟಡ, ಗೋಡೆಗಳ ಅರಿವು ಇರುವುದಿಲ್ಲವೇ? ಇಂತಹ, ಅಪಾಯಕಾರಿ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿತದ ದುರ್ಘಟನೆಯನ್ನು ತಪ್ಪಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಗಳು ಎದುರಾಗಿವೆ. ‘ಅದು ಖಾಸಗಿ ಅಥವಾ ಪಾಲಿಕೆಗೆ ಸಂಬಂಧಿಸಿದ್ದಲ್ಲ’ ಎಂಬ ಉತ್ತರಿಸಬಹುದು. ಆದರೆ, ಜವಾಬ್ದಾರಿ ನಗರ ಪಾಲಿಕೆಗಳದ್ದೇ ಆಗಿರುತ್ತದೆ ಅಲ್ಲವೇ’ ಎಂದು ನಾಗರಿಕರು ಪ್ರಶ್ನಿಸುತ್ತಾರೆ.

ಧರೆಗುರುಳುವ ಮರ, ಮರದ ಕೊಂಬೆ–ರೆಂಬೆಗಳನ್ನು ತುರ್ತಾಗಿ ತೆರವುಗೊಳಿಸಲು ತಂಡ ರಚಿಸಬೇಕು. ನಾಗರಿಕರಿಂದ ದೂರು ಬಂದರೆ ತಕ್ಷಣ ಸ್ಪಂದಿಸಬೇಕು. ಬಾಗಿರುವ ಹಾಗೂ ಬೀಳುವಂತಹ ಸ್ಥಿತಿಯಲ್ಲಿರುವ ರೆಂಬೆ–ಕೊಂಬೆಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಜಿಬಿಎಯಲ್ಲಿರುವ ಅರಣ್ಯ ವಿಭಾಗದ ವಿಶೇಷ ಆಯುಕ್ತರಿಗೆ ಜವಾಬ್ದಾರಿ ವಹಿಸಲಾಗಿದೆ. ಆದರೆ, ಈ ಬಗ್ಗೆ ಕ್ರಮಗಳಾಗಿದ್ದರೆ, ಏಪ್ರಿಲ್ 29ರಂದು ಸುರಿದ ಮಳೆಗೆ ಮರಗಳಿಂದ ಇಷ್ಟೊಂದು ಹಾನಿ ಆಗುತ್ತಿರಲಿಲ್ಲ ಎಂಬ ಅಭಿಪ್ರಾಯವಿದೆ.

ಮಳೆಯಿಂದಾಗುವ ಸಮಸ್ಯೆ ನಿವಾರಣೆಗೆ ಹೊಸದಾಗಿ ಯೋಜನೆ ರೂಪಿಸುವ ಅಗತ್ಯವೇನೂ ಇಲ್ಲ. ಬಿಬಿಎಂಪಿ ಅಥವಾ ಜಿಬಿಎ ಈ ಹಿಂದೆ ರೂಪಿಸಿರುವ ಯೋಜನೆಗಳನ್ನೇ ಅನುಷ್ಠಾನಗೊಳಿಸಿದರೆ, 2026ರ ಜನವರಿಯಿಂದ ನೀಡುತ್ತಿರುವ ಸೂಚನೆ/ ಮಾರ್ಗಸೂಚಿಗಳನ್ನು ಅನುಸರಿಸಿದ್ದರೆ ಜನರಿಗೆ ಮಳೆಯಿಂದ ಇಷ್ಟೊಂದು ಸಂಕಷ್ಟ ಎದುರಾಗುತ್ತಿಲ್ಲ. ಮಳೆಗಾಲ ಶುರುವಾಗುವ ಮೊದಲು ಅಗತ್ಯ ಕ್ರಮಗಳನ್ನು ತುರ್ತಾಗಿ ಜಿಬಿಎ ಹಾಗೂ ನಗರ ಪಾಲಿಕೆಗಳು ಕೈಗೊಂಡರೆ, ಅನಾಹುತಗಳನ್ನು ತಪ್ಪಿಸಬಹುದು.

4 ತಿಂಗಳಿಂದ ಜಿಬಿಎ ನೀಡುತ್ತಿರುವ ಸೂಚನೆ

ರಸ್ತೆಬದಿ ಚರಂಡಿ ಮತ್ತು ಮಳೆನೀರು ಕಾಲುವೆಗಳಲ್ಲಿ ಹೂಳು, ಕಸ ಹಾಗೂ ಇನ್ನಿತರೆ
ಅಡೆತಡೆಗಳನ್ನು ತೆರವುಗೊಳಿಸಬೇಕು. ಚರಂಡಿಗಳು, ಕಾಲುವೆಗಳಿಂದ ಹೊರ ತೆಗೆದ ಹೂಳು, ಮಣ್ಣು ಮತ್ತು ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು

ರಸ್ತೆ ಮೇಲಿನ ಮಳೆ ನೀರು ಸರಾಗವಾಗಿ ಚರಂಡಿಗೆ ಹರಿಯಲು ಕರ್ಬ್ ಪ್ರವೇಶಗಳಲ್ಲಿನ ಗ್ರೇಟಿಂಗ್ ಮತ್ತು ಅಂಡರ್ ಪಾಸ್ ಗ್ರೇಟಿಂಗ್ ಸ್ವಚ್ಛಗೊಳಿಸಬೇಕು

ಎಲ್ಲಾ ಡ್ರೈನೇಜ್ ಚೇಂಬರ್ಗಳನ್ನು ಸ್ವಚ್ಛಗೊಳಿಸಿ ನೀರಿನ ಸರಾಗ ಹರಿವಿಗೆ ಕ್ರಮವಹಿಸಬೇಕು

ನೀರು ನಿಲ್ಲುವ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ಗಮನ ನೀಡಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು

ಚರಂಡಿಗಳು, ಕಾಲುವೆಗಳ ಅಕ್ಕಪಕ್ಕದಲ್ಲಿ ‘ಬ್ಲ್ಯಾಕ್ ಸ್ಪಾಟ್’ ಆಗದಂತೆ ಕ್ರಮವಹಿಸಬೇಕು

ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಮಳೆ ನೀರುಗಾಲುವೆಗಳ ಹೂಳು ತೆಗೆದು, ಪುನಶ್ಚೇತನ ಕಾರ್ಯ ಕೈಗೊಳ್ಳಬೇಕು

ಅಪಾಯದ ಸ್ಥಳಗಳಿವೆಯೇ?

ಮಳೆಯಿಂದ ಸಮಸ್ಯೆಯಾಗುವ ಪ್ರದೇಶಗಳು, ಶಿಥಿಲವಾದ ಗೋಡೆ, ಕಟ್ಟಡಗಳು ನಿಮ್ಮ ಸಮೀಪದ ಸ್ಥಳಗಳಲ್ಲಿ ಇದ್ದರೆ, ಯಾವುದಾದರೂ ಪ್ರದೇಶದಲ್ಲಿ ಮಳೆಯಿಂದ ಸಮಸ್ಯೆ ಆಗುತ್ತಿರುವ ಮಾಹಿತಿ ಇದ್ದರೆ, ಚಿತ್ರ ಸಹಿತ ‘ಪ್ರಜಾವಾಣಿ’ಗೆ ಕಳುಹಿಸಿ ಕೊಡಿ.

ವಾಟ್ಸ್ ಆ್ಯಪ್: 96060 38256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.