ಬೆಂಗಳೂರು: ನಗರದಲ್ಲಿ ಬುಧವಾರ ಸುರಿದ ಆಲಿಕಲ್ಲು, ಬಿರುಗಾಳಿ ಮಳೆಯಿಂದ ಉಂಟಾದ ಸಮಸ್ಯೆಗಳಿಗೆ ಜಿಬಿಎ ಅಥವಾ ನಗರ ಪಾಲಿಕೆಗಳಿಂದ ನಿರೀಕ್ಷಿತ ಪರಿಹಾರ ಸಿಗದೆ, ವಾಹನ ಸಂಚಾರಕ್ಕೆ ಅಡ್ಡಿಯಾಗಿ ಜನರು ಸಂಕಷ್ಟ ಎದುರಿಸಿದರು.

ನೂರಾರು ಮರಗಳು– ಕೊಂಬೆಗಳು ಧರೆಗುರುಳಿದ್ದು, ಅವುಗಳನ್ನು ತೆರವು ಮಾಡುವ ಕಾರ್ಯ ಗುರುವಾರ ರಾತ್ರಿವರೆಗೂ ನಡೆಯುತ್ತಲೇ ಇತ್ತು. ಕೆಲವು ಬಡಾವಣೆಗಳಲ್ಲಿ ನಾಗರಿಕರು ಮನೆಯಿಂದ ಹೊರಬರಲು ಸಾಧ್ಯವಿಲ್ಲದಂತಹ ಸ್ಥಿತಿಯಿದ್ದರೂ, ಮರ–ಕೊಂಬೆಗಳನ್ನು ತುರ್ತಾಗಿ ತೆರವುಗೊಳಿಸುವ ಕೆಲಸವನ್ನು ನಗರ ಪಾಲಿಕೆ ಸಿಬ್ಬಂದಿ ಮಾಡಿಲ್ಲ. ‘ದೂರು ನೀಡಿದ ಮೂರು ಗಂಟೆಯೊಳಗೆ ಪರಿಹಾರ ನೀಡುತ್ತೇವೆ’ ಎಂಬ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನೀಡಿದ ಭರವಸೆ ಈಡೇರಿಲ್ಲ.

ಸದಾಶಿವನಗರ ಭಾಷ್ಯಂ ವೃತ್ತ, ಜಯನಗರ 9ನೇ ಮುಖ್ಯರಸ್ತೆ, 32 ಅಡ್ಡರಸ್ತೆ, 23ನೇ ಅಡ್ಡರಸ್ತೆ, ಜಯನಗರದ ಪುಟ್ಟಣ್ಣ ಜಂಕ್ಷನ್, ಕುಮಾರಕೃಪಾ ರಸ್ತೆ, ಮಲ್ಲೇಶ್ವರ ರೈಲ್ವೆ ಪ್ಯಾರಲಲ್ ರಸ್ತೆ, ಚಾಮರಾಜಪೇಟೆ ಪೊಲೀಸ್ ಠಾಣೆ ರಸ್ತೆ, ಚಾಮರಾಜಪೇಟೆ ಮೂರನೇ ಮುಖ್ಯರಸ್ತೆ, ಕಾಡು ಮಲ್ಲೇಶ್ವರ ದೇವಸ್ಥಾನ, ಬನಶಂಕರಿ ಒಂದನೇ ಹಂತದ 5ನೇ ಮುಖ್ಯರಸ್ತೆ, ಶಿರಸಿ ವೃತ್ತ, ದಿಣ್ಣೂರು ಮುಖ್ಯರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಗುರುವಾರ ಸಂಜೆಯಾದರೂ ಮರಗಳು, ಕೊಂಬೆಗಳನ್ನು ತೆರವು ಮಾಡಿರಲಿಲ್ಲ. ಹೀಗಾಗಿ, ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ವಸತಿ ಪ್ರದೇಶಗಳಲ್ಲಿ ಮರಗಳು ಮನೆಯ ಕಾಂಪೌಂಡ್ ಹಾಗೂ ಬಾಗಿಲ ಬಳಿಯೇ ಬಿದ್ದಿದ್ದರಿಂದ ನಿವಾಸಿಗಳು ಹೊರಗೆ ಬರಲು ಸಾಧ್ಯವಾಗದೆ ತೊಂದರೆಗೊಳಗಾದರು.

206 ಮರ ತೆರವು: ಜಿಬಿಎ

ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 287 ಮರಗಳು ಧರೆಗುರುಳಿದ್ದು, 723 ಕೊಂಬೆಗಳು ಮುರಿದು ಬಿದ್ದಿವೆ. ಜೊತೆಗೆ ಮರದ ಸಣ್ಣಪುಟ್ಟ ರೆಂಬೆಗಳು ಹಾಗೂ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಉದುರಿವೆ. ಗುರುವಾರ ಸಂಜೆ ವೇಳೆಗೆ 206 ಮರಗಳು ಹಾಗೂ 456 ರೆಂಬೆಗಳನ್ನು ತೆರವುಗೊಳಿಸಲಾಗಿದೆ.

ನಗರ ಪಾಲಿಕೆಗಳ ವತಿಯಿಂದ 30 ತಂಡಗಳು ಹಾಗೂ ನಾಲ್ಕು ಕ್ರೇನ್ಗಳನ್ನು ತೆರವು ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಅಗ್ನಿಶಾಮಕ ಇಲಾಖೆಯಿಂದ 15 ತಂಡಗಳು, ಎಸ್.ಡಿ.ಆರ್.ಎಫ್ನಿಂದ ನಾಲ್ಕು ತಂಡಗಳು ಹಾಗೂ ಹೆಚ್ಚುವರಿಯಾಗಿ 10 ಖಾಸಗಿ ತಂಡಗಳನ್ನು ಬಾಡಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.

ನಗರದಾದ್ಯಂತ 62ಕ್ಕೂ ಹೆಚ್ಚು ಪ್ರದೇಶಗಳ ರಸ್ತೆಗಳಲ್ಲಿ ನೀರು ನಿಂತಿರುವ ಬಗ್ಗೆ ದೂರುಗಳು ದಾಖಲಾಗಿವೆ. ಮೂರು ಕಡೆ ಗೋಡೆ ಕುಸಿತ, 105 ಮನೆಗಳಿಗೆ ನೀರು ನುಗ್ಗಿರುವುದು ವರದಿಯಾಗಿದೆ ಎಂದು ತಿಳಿಸಲಾಗಿದೆ.

186 ಕಂಬ, 36 ಟ್ರಾನ್ಸ್ಫಾರ್ಮರ್ಗೆ ಹಾನಿ

ಮಳೆ ಹಾಗೂ ಮರಗಳು ಬಿದ್ದ ಪರಿಣಾಮ, ನಗರದ 186 ಕಡೆ ವಿದ್ಯುತ್ ಕಂಬಗಳು ಹಾಗೂ 36 ಕಡೆ ವಿದ್ಯುತ್ ಪರಿವರ್ತಕಗಳು ಹಾನಿಗೊಳಗಾಗಿ, ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ. ಬೆಸ್ಕಾಂನಿಂದ ಈಗಾಗಲೇ 112 ವಿದ್ಯುತ್ ಕಂಬಗಳು ಹಾಗೂ 18 ಟ್ರಾನ್ಸ್ಫಾರ್ಮರ್ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಪರಿಹಾರ ಮೊತ್ತ ಹಸ್ತಾಂತರ

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಹಿಂಭಾಗದ ಕಾಂಪೌಂಡ್ ಕುಸಿದು ಮೃತಪಟ್ಟ ಏಳು ಜನರ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರದ ಚೆಕ್ ಅನ್ನು ಕೇಂದ್ರ ನಗರ ಪಾಲಿಕೆ ವತಿಯಿಂದ ಗುರುವಾರ ವಿತರಿಸಲಾಯಿತು.

ಎಂ.ಜಿ. ರಸ್ತೆಯಲ್ಲಿರುವ ಪಿಯುಬಿ ಕಟ್ಟಡದಲ್ಲಿರುವ ಕೇಂದ್ರ ನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಮೃತರ ಕುಟುಂಬದವರಿಗೆ ಚೆಕ್ ಹಸ್ತಾಂತರಿಸಿದರು. ಕೇಂದ್ರ ನಗರ ಪಾಲಿಕೆಯ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತ ದಲ್ಜಿತ್ ಕುಮಾರ್ ಉಪಸ್ಥಿತರಿದ್ದರು.

ಮಳೆ: ಸಂಚಾರ ಪೊಲೀಸರ ಸಲಹೆ

ಬೆಂಗಳೂರು: ಮಳೆಯಿಂದ ನೀರು ಸಂಗ್ರಹವಾಗುವ ರಸ್ತೆಗಳಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಎಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ಇನ್ನೂ ಎರಡು ದಿನ ಸಂಜೆ ವೇಳೆ ಮಳೆಯಾಗುವ ಸಾಧ್ಯತೆಯಿದ್ದು ವಾಹನ ಸಾವರರು ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ.

* ಪೂರ್ವ ಮುಂಗಾರು ಮಳೆಯ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಮರಗಳು ಬಿದ್ದು ಹಾಗೂ ಮಳೆ ನೀರು ರಸ್ತೆಗಳಲ್ಲಿ ಶೇಖರಣೆಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ

* ಬುಧವಾರ ಸುರಿದ ಮಳೆಯಿಂದ ನಗರದ ಕೆಲವು ಭಾಗಗಳಲ್ಲಿ ರಸ್ತೆಗಳು ಹಾಳಾಗಿವೆ. ಕಡಿಮೆ ವೇಗದಲ್ಲಿ ವಾಹನಗಳನ್ನು ಚಲಾಯಿಸಿದರೆ ಅಪಘಾತ ಸಂಭವಿಸುವ ಸಾಧ್ಯತೆ ಕಡಿಮೆ ಇರುತ್ತದೆ

* ಭಾರಿ ಮಳೆಯ ವೇಳೆ ಅನಾವಶ್ಯಕ ಪ್ರಯಾಣವನ್ನು ತಪ್ಪಿಸಬೇಕು

* ಮಳೆಯಿಂದ ರಕ್ಷಣೆಗಾಗಿ ಮರಗಳ ಆಶ್ರಯ ಪಡೆಯುವುದನ್ನು ತಪ್ಪಿಸಬೇಕು

* ಮಳೆಯಿಂದ ರಕ್ಷಣೆ ಪಡೆಯಲು ಅಂಡರ್ಪಾಸ್ಗಳಲ್ಲಿ ಆಶ್ರಯಿಸುತ್ತಿರುವುದರಿಂದ ಇತರೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಆಗದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು

* ರಸ್ತೆ ಬಳಕೆದಾರರು ಸಂಚಾರ ದಟ್ಟಣೆಯೂ ಸೇರಿದಂತೆ ಹಾಗೂ ಇತರೆ ಘಟನೆಗಳ ನೈಜ ಮಾಹಿತಿಯನ್ನು ಪಡೆಯಲು ಬಿಟಿಪಿ ಅಸ್ತ್ರಂ ಆ್ಯಪ್ ಹಾಗೂ ಬಿಟಿಪಿ ಸಾಮಾಜಿಕ ಜಾಲತಾಣ ಬಳಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.