ಬೆಂಗಳೂರು: ನಗರದಲ್ಲಿ ಏಪ್ರಿಲ್ 29ರಿಂದ ಮೇ 29ರವರೆಗೆ ಸುರಿದ ಬಿರುಗಾಳಿ–ಮಳೆಗೆ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 949 ಮರಗಳು ಧರೆಗೆ ಉರುಳಿವೆ.

ನಗರದ ಹಲವು ರಸ್ತೆಗಳಲ್ಲಿ ಮರಗಳ ಅವಶೇಷಗಳು ಇನ್ನೂ ಕಾಣುತ್ತಿದ್ದರೂ, ಬಹುತೇಕ ಎಲ್ಲ ಮರಗಳನ್ನೂ ರಸ್ತೆಗಳಿಂದ ತೆರವು ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದ್ದು, 919 ಸ್ಥಳಗಳಲ್ಲಿ ರೆಂಬೆ–ಕೊಂಬೆಗಳು ಬಿದ್ದಿವೆ. ಅವುಗಳಲ್ಲಿ ಬಹುತೇಕ ಎಲ್ಲವನ್ನೂ ತೆರವು ಮಾಡಲಾಗಿದೆ ಎಂದು ಹೇಳಲಾಗಿದೆ.

ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಉಳಿದಿರುವ ಮರ, ರೆಂಬೆ–ಕೊಂಬೆಗಳನ್ನು ಶೀಘ್ರವೇ ತೆರವು ಮಾಡಿ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದರೂ ಅದು ಫಲಪ್ರದವಾಗಿಲ್ಲ. ಮರಗಳ ತೆರವಿಗೆ ನಿಯಂತ್ರಣ ಕೊಠಡಿ ಸೇರಿದಂತೆ ಅರಣ್ಯ ವಿಭಾಗದ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ನೀಡಿ, ಸಂಪರ್ಕಿಸಲು ಹೇಳಲಾಗಿದೆ. ಆದರೆ, ‘ಆ ಅಧಿಕಾರಿಗಳು ಮೊಬೈಲ್ ಕರೆಯನ್ನು ಸ್ವೀಕರಿಸುವುದೇ ಇಲ್ಲ. ಇನ್ನು ತೆರವು ಎಲ್ಲಿಂದ ಸಾಧ್ಯ’ ಎಂದು ನಾಗರಿಕರು ಪ್ರಶ್ನಿಸಿದರು.

ಕಟಾವು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮರಗಳು/ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದು, ಅವುಗಳನ್ನು ಸ್ಥಳದಲ್ಲಿಯೇ ಕಟಾವು ಮಾಡಿ ಸಾರ್ವಜನಿಕರಿಗೆ ಹಾಗೂ ಸುಗಮ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮರಗಳನ್ನು ಸಾಗಾಣಿಕೆ ಮಾಡುವ ಕಾರ್ಯವನ್ನು ನಿರ್ವಹಿಸಲಾಗುತ್ತಿದ್ದು, ರಸ್ತೆ ಬದಿಗಳಲ್ಲಿ/ಪಾದಚಾರಿ ಮಾರ್ಗಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮರಗಳು ಇರುವುದು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ 1533 ಅಥವಾ ಪಶ್ಚಿಮ ನಗರ ಪಾಲಿಕೆ ನಿಯಂತ್ರಣ ಕೊಠಡಿ 9480685703ಗೆ ಅಥವಾ ಅರಣ್ಯ ವಿಭಾಗದ ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಶನಿವಾರ ಮಳೆ: ನಗರದಲ್ಲಿ ಶುಕ್ರವಾರ ಸಂಜೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಯಿತು. ಕೆಲವು ಭಾಗಗಳಲ್ಲಿ ತಡರಾತ್ರಿಯವರೆಗೂ ಮಳೆ ಮುಂದುವರಿದಿತ್ತು.

ಬಾಣಸವಾಡಿ, ನಾಗಪುರ, ಪೀಣ್ಯ ಕೈಗಾರಿಕೆ ಪ್ರದೇಶದ ಸುತ್ತಮುತ್ತ ಅತಿಹೆಚ್ಚು (3 ಸೆಂ.ಮೀ) ಮಳೆಯಾಯಿತು. ನಂದಿನಿ ಲೇಔಟ್, ಬಸವೇಶ್ವರನಗರ, ರಾಜಮಹಲ್ ಗುಟ್ಟಹಳ್ಳಿ, ಕಮ್ಮನಹಳ್ಳಿ, ಬಾಗಲಗುಂಟೆ, ರಾಜಾಜಿನಗರ, ಸಂಪಂಗಿರಾಮನಗರ, ಹೇರೋಹಳ್ಳಿಯಲ್ಲಿ ತಲಾ 2 ಸೆಂ.ಮೀ ನಷ್ಟು ಮಳೆಯಾಯಿತು.

ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ವಾರಾಂತ್ಯವಾಗಿದ್ದರಿಂದ ಸಂಜೆ ಸುರಿದ ಮಳೆಯಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ಅರಣ್ಯ ವಿಭಾಗದ ಅಧಿಕಾರಿಗಳ ಸಂಪರ್ಕ

* ವಿ. ಜಗದೀಶ್ ಉಪ ವಲಯ ಅರಣ್ಯ ಅಧಿಕಾರಿ ಮೊಬೈಲ್: 9880516322 (ರಾಜರಾಜೇಶ್ವರಿನಗರ ಯಶವಂತಪುರ ಹಾಗೂ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ನಾಲ್ಕು ವಾರ್ಡ್)

* ಸುದರ್ಶನ್ ಎ. ಉಪ ವಲಯ ಅರಣ್ಯ ಅಧಿಕಾರಿ ಮೊಬೈಲ್: 9480683341 (ಮಹಾಲಕ್ಷ್ಮಿ ಬಡಾವಣೆ ರಾಜಾಜಿನಗರ ಗೋವಿಂದರಾಜನಗರ ಹಾಗೂ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರ)

* ಬಿ.ಬಿ. ಮೇಟಿ ಉಪ ವಲಯ ಅರಣ್ಯ ಅಧಿಕಾರಿ ಮೊಬೈಲ್: 9740576919 (ವಿಜಯನಗರ ಬಸವನಗುಡಿ ಹಾಗೂ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ನಾಲ್ಕು ವಾರ್ಡ್)

*ಸಂತೋಷ್ ಕುಮಾರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಬೈಲ್: 7019464699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.