ಬೆಂಗಳೂರು: ‘ಸಿಕ್ಕಸಿಕ್ಕಿದ್ದಕ್ಕೆಲ್ಲ ತೆರಿಗೆ ಹಾಕಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಯಾವುದೇ ಗ್ಯಾರಂಟಿ ನೀಡಿಲ್ಲ. ಬೆಂಗಳೂರಿನಲ್ಲಿ ಮಳೆ ಬಂದರೆ ಬದುಕುತ್ತೇನೆ ಎಂಬ ಭರವಸೆ ಇಲ್ಲದೇ ಭಯದಲ್ಲೇ ದಿನ ಕಳೆಯುವಂತೆ ಮಾಡಿದೆ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆ ಬಂದರೆ ನಗರದಲ್ಲಿ ನೂರಾರು ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ, ಒಂದೇ ಒಂದು ರೂಪಾಯಿ ಪರಿಹಾರವಿಲ್ಲ’ ಎಂದಿದ್ದಾರೆ.

‘ಸತತ ಮಳೆಗೆ ಬೌರಿಂಗ್ ಆಸ್ಪತ್ರೆ ಸಮೀಪ ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟರು. ನಿನ್ನೆಯೂ ಒಬ್ಬರು ಮೃತಪಟ್ಟಿದ್ದಾರೆ. ಇವೆಲ್ಲ ಲೆಕ್ಕಕ್ಕೆ ಸಿಕ್ಕ ಸಾವು. ಇನ್ನು ಗುಂಡಿಯಲ್ಲಿ ಬಿದ್ದು, ಮರದ ಕೊಂಬೆ ಬಿದ್ದು ಸತ್ತವರ ಲೆಕ್ಕ ಇಲ್ಲ. ಈ ಸರ್ಕಾರ ಜನರ ಸಾವಿಗೆ ತಲೆ ಕೆಡಿಸಿಕೊಂಡಿಲ್ಲ’ ಎಂದು ದೂರಿದರು.

‘ಮುಂಗಾರಿಗೆ ಮುಂಚೆ ನಗರದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸರ್ಕಾರಕ್ಕೆ ಗಮನವೇ ಇಲ್ಲ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಲೇ ಇದೆ. ಮಾರತ್ಹಳ್ಳಿ, ಸಿಲ್ಕ್ಬೋರ್ಡ್, ಕೆ.ಆರ್.ಸರ್ಕಲ್ ಜಂಕ್ಷನ್ಗಳು ಜಲಾವೃತವಾಗುತ್ತಿವೆ. ಇದರ ಬಗ್ಗೆ ಸರ್ಕಾರ ಗಮನವೇ ನೀಡುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಮನೆ ತೆರಿಗೆ, ಘನ ತ್ಯಾಜ್ಯ ತೆರಿಗೆ, ವಿವಿಧ ಬಳಕೆ ಶುಲ್ಕ ಹೀಗೆ ಹಲವಾರು ತೆರಿಗೆಯನ್ನು ನಗರದ ಜನರ ಮೇಲೆ ಹಾಕಿ ಸಾವಿರಾರು ಕೋಟಿ ಸಂಗ್ರಹಿಸುವ ಸರ್ಕಾರ ಜನರಿಗಾಗಿ ಸೇವೆ ನೀಡುವುದು ಏನೂ ಇಲ್ಲ. ಮಳೆ ಬಂದರೆ ಇಡೀ ಬೆಂಗಳೂರು ಮುಳುಗುವಂತೆ ಸರ್ಕಾರ ಮಾಡಿದೆ. ಎಲ್ಲದ್ದಕ್ಕೂ ಕೈಚೆಲ್ಲಿ ಕುಳಿತಿರುವ ಸರ್ಕಾರಕ್ಕೆ ನಾವು ಪದೇ ಪದೇ ಹೇಳಿದರೂ ನಿರ್ಲಕ್ಷ್ಯ ಮಾಡುತ್ತಿದೆ. ಆದ್ದರಿಂದ ತಕ್ಷಣ ಕ್ರಮವಹಿಸಬೇಕು. ಇದಕ್ಕೆ ಹಣದ ಕೊರತೆ ಇಲ್ಲ. ಕಾಂಗ್ರೆಸ್ ಸರ್ಕಾರ ನಗರ ಮತ್ತು ರಾಜ್ಯದ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಸರ್ಕಾರದಲ್ಲಿ ಜನರ ಕಾಳಜಿಗಿಂತ ಕುರ್ಚಿ ಕಚ್ಚಾಟವೇ ದೊಡ್ಡದಾಗಿದೆ. ಜನರ ಸಮಸ್ಯೆಯನ್ನು ಸಂಪೂರ್ಣವಾಗಿ ಮರೆತಿದೆ. ಬ್ರ್ಯಾಂಡ್ ಬೆಂಗಳೂರು ಕೇವಲ ಬ್ರ್ಯಾಂಡ್ಗೆ ಸೀಮಿತವಾಗಿದೆ. ಅವ್ಯವಸ್ಥೆಯ ಬೆಂಗಳೂರು ಆಗಿದೆ. ಇನ್ನೂ ಮಳೆಯ ಆರ್ಭಟ ಆರಂಭವಾಗಿಲ್ಲ. ಸ್ವಲ್ಪ ಮಳೆಗೇ ಈ ರೀತಿ ಆಗಿದೆ. ಮಳೆಗಾಲಕ್ಕೂ ಮುಂಚೆ ಮುನ್ನೆಚ್ಚರಿಕೆ ಕ್ರಮ ಜಾರಿ ಮಾಡಬೇಕು. ಅದಿಲ್ಲದಿದ್ದರೆ ಕೇವಲ ತೆರಿಗೆ ಸಂಗ್ರಹ ಮಾಡಿ ಏನು ಪ್ರಯೋಜನ. ಬೆಸ್ಕಾಂನಿಂದ, ಜಲಮಂಡಳಿಯಿಂದ ಸಾಕಷ್ಟು ತೆರಿಗೆ ಸರ್ಕಾರಕ್ಕೆ ಬರುತ್ತಿದೆ. ಆದರೆ, ಇದನ್ನು ಸದುಪಯೋಗ ಮಾಡುತ್ತಿಲ್ಲ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.