ಬೆಂಗಳೂರು: ಕುರುಬರಹಳ್ಳಿಯಲ್ಲಿ ಗುರುವಾರ ರಾತ್ರಿ ಸಿಎನ್ಜಿ ಚಾಲಿತ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಮಲಗಿದ್ದ ಚಾಲಕ ಸಜೀವ ದಹನ ಆಗಿದ್ದಾರೆ. ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ.

ಅಂಬದಾಸ್ (23) ಮೃತಪಟ್ಟ ಕ್ಯಾಬ್ ಚಾಲಕ.

ಕಬ್ಬಿಣ ತುಂಬಿದ ಲಾರಿ, ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು, ಪಕ್ಕದಲ್ಲಿದ್ದ ಗೋದಾಮಿಗೆ ನುಗ್ಗಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಲ್ಲಿ ಮಲಗಿದ್ದ ಅಂಬದಾಸ್ ಅವರು ಹೊರಕ್ಕೆ ಬರಲು ಸಾಧ್ಯವಾಗದೇ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.

ಅಂಬದಾಸ್ ಅವರು ಕುಟುಂಬದವರ ಜತೆಗೆ ಕುರುಬರಹಳ್ಳಿಯಲ್ಲಿ ವಾಸಿಸುತ್ತಿದ್ದರು. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಪ್ರಯಾಣಿಕರನ್ನು ಬಿಟ್ಟು ಕುರುಬರಹಳ್ಳಿಯ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿದ್ರೆ ಮಾಡುತ್ತಿದ್ದರು. ಆಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.

ಘಟನೆಯ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಕ್ಯಾಬ್ ಚಾಲಕನನ್ನು ರಕ್ಷಿಸಲು ಸಾಧ್ಯ ಆಗಲಿಲ್ಲ. ರಾಜಾಜಿನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಕಿರಿದಾದ ರಸ್ತೆಗೆ ಬಂದಿದ್ದ ಲಾರಿ ಚಾಲಕ: ಆಂಧ್ರಪ್ರದೇಶದಿಂದ ಸುಂಕದಕಟ್ಟೆಗೆ ಕಬ್ಬಿಣ ತುಂಬಿಕೊಂಡು ಲಾರಿ ಬರುತ್ತಿತ್ತು. ಲಾರಿ ಚಾಲಕ ಶರ್ಮಾ, ಗೂಗಲ್ ಮ್ಯಾಪ್ ನೋಡಿಕೊಂಡು ಬರುತ್ತಿದ್ದ. ಮ್ಯಾಪ್ನಲ್ಲಿ ಕುರುಬರಹಳ್ಳಿ ಮೂಲಕ ರಸ್ತೆ ತೋರಿಸಿತ್ತು. ಈ ಪ್ರದೇಶದಲ್ಲಿ ಬಹುತೇಕ ಇಳಿಜಾರು ಹಾಗೂ ಕಿರಿದಾದ ರಸ್ತೆಗಳಿವೆ. ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.

‘ಸಾಲ ಮಾಡಿಕೊಂಡು ಕಾರು ಖರೀದಿಸಿದ್ದ. ಪ್ರತಿ ತಿಂಗಳು ₹ 25 ಸಾವಿರ ಇಎಂಐ ಕಟ್ಟುತ್ತಿದ್ದ. ರಾತ್ರಿ ವೇಳೆ ಕ್ಯಾಬ್ ಚಾಲನೆ ಮಾಡಬೇಡ ಎಂದು ತಿಳಿಸಿದ್ದೆವು. ಇಎಂಐ ಕಟ್ಟಬೇಕೆಂದು ರಾತ್ರಿಯೂ ಕ್ಯಾಬ್ ಓಡಿಸುತ್ತಿದ್ದ’ ಎಂದು ಅಂಬದಾಸ್ ತಾಯಿ ಕಣ್ಣೀರಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.