ಬೆಂಗಳೂರು: ಅಸೆಟ್ಜ್ ಸಂಸ್ಥೆಯ ಸಹಯೋಗದೊಂದಿಗೆ ನಗರದಲ್ಲಿ ಭಾನು ವಾರ ಆಯೋಜಿಸಿದ್ದ ರೆಡ್ ಎಫ್ಎಂ ವಾಕಥಾನ್ ಯಶಸ್ವಿಯಾಗಿ ನಡೆಯಿತು.

ಆರೋಗ್ಯ ಪಾಲನೆ ಮತ್ತು ಸಮಾಜದ ಒಳಿತಿಗಾಗಿ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆಯಲ್ಲಿ ನಡೆದ ಈ ನಡಿಗೆಯಲ್ಲಿ 5,000ಕ್ಕೂ ಹೆಚ್ಚು ಮಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ವೇಗವಾಗಿ ಬೆಳೆಯುತ್ತಿರುವ ನಗರ ಜೀವನದಲ್ಲಿ ಆರೋಗ್ಯದ ಮಹತ್ವ ಸಾರಲು 3 ಕಿ.ಮೀ., 5 ಕಿ.ಮೀ. ಮತ್ತು 10 ಕಿ.ಮೀ. ವಿಭಾಗಗಳಲ್ಲಿ ವಾಕಥಾನ್ ಆಯೋಜಿಸಲಾಗಿತ್ತು. ಬೆಳಗಿನ 5.30ರ ಹೊತ್ತಿಗೆ ಉತ್ಸಾಹದಿಂದಲೇ ಆರಂಭವಾದ ಕಾರ್ಯಕ್ರಮದಲ್ಲಿ ಲೈವ್ ಮ್ಯೂಸಿಕ್ ಮತ್ತು ಜುಂಬಾ ಸೆಷನ್ಗಳು ಗಮನ ಸೆಳೆದವು.

ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ವಾಕಥಾನ್ಗೆ ಚಾಲನೆ ನೀಡಿ, ಪಾಲ್ಗೊಂಡವರಲ್ಲಿ ಫಿಟ್ನೆಸ್ ಬಗ್ಗೆ ಉತ್ಸಾಹ ತುಂಬಿದರು. ‘ಹಿಂದುಳಿದ ಮಕ್ಕಳಿಗೆ ಎಐ ಚಾಲಿತ ಶಿಕ್ಷಣ ಸೌಲಭ್ಯವನ್ನು ಒದಗಿಸಲು ಸಹಾಯ ಮಾಡಲಿರುವ ಈ ಆಂದೋಲನದ ಭಾಗವಾಗಲು ನನಗೆ ಹೆಮ್ಮೆ ಎನಿಸುತ್ತದೆ’ ಎಂದು ಹೇಳಿದರು.

‘ದೈಹಿಕ ಸಾಮರ್ಥ್ಯ ಯಾವಾಗಲೂ ನನ್ನ ಜೀವನದ ಪ್ರಮುಖ ಭಾಗವಾಗಿದೆ. ಪ್ರತಿಯೊಂದು ಸಣ್ಣ ಹೆಜ್ಜೆಯೂ ನಮ್ಮನ್ನು ದೊಡ್ಡ ಗುರಿಯತ್ತ ಕೊಂಡೊಯ್ಯುತ್ತದೆ ಎಂಬುದನ್ನು ಬ್ಯಾಡ್ಮಿಂಟನ್ ಕೋರ್ಟ್ ನನಗೆ ಕಲಿಸಿದೆ’ ಎಂದು ಸೈನಾ ಹೇಳಿದರು.

ಅಸೆಟ್ಜ್ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಪಾರೀಕ್ ಮಾತನಾಡಿ, ‘ಉತ್ತಮ ಭವಿಷ್ಯವು ಅತ್ಯಾಧುನಿಕ ಕಟ್ಟಡಗಳಿಂದ ಗುರುತಿಸಲ್ಪಡುವುದಿಲ್ಲ, ಬದಲಿಗೆ ಅಲ್ಲಿನ ಜನರು ಎಷ್ಟು ಸಕ್ರಿಯವಾಗಿರುತ್ತಾರೆ ಎಂಬ ಅಂಶದ ಮೇಲೆ ನಿರ್ಧಾರವಾಗುತ್ತದೆ ಎಂಬುದು ಅಸೆಟ್ಜ್ ನಂಬಿಕೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-4-230080828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.