ಬೆಂಗಳೂರು: ಕುರುಬರಹಳ್ಳಿಯ ರಸ್ತೆಬದಿಯಲ್ಲಿ ನಿಂತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಕ್ಯಾಬ್ ಚಾಲಕ ಸಜೀವ ದಹನಗೊಂಡಿದ್ದ ಪ್ರಕರಣದಲ್ಲಿ ಲಾರಿ ಚಾಲಕನನ್ನು ಸಂಚಾರ ಪೊಲೀಸರು ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಶುಕ್ರವಾರ ನಸುಕಿನ ವೇಳೆ ಸಂಭವಿಸಿದ್ದ ದುರಂತದಲ್ಲಿ ಕ್ಯಾಬ್ ಚಾಲಕ ಅಂಬದಾಸ್ (23) ಮೃತಪಟ್ಟಿದ್ದರು. ಲಾರಿ ಚಾಲಕ ಶರ್ಮಾ ಗಾಯಗೊಂಡಿದ್ದರು. ಶರ್ಮಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.

ಶುಕ್ರವಾರ ಬೆಳಗಿನ ಜಾವ ಕುರುಬರಹಳ್ಳಿ ಜೆ.ಸಿ ನಗರದ ಬಳಿ ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ 100 ಮೀಟರ್ವರೆಗೂ ಕಾರನ್ನು ಎಳೆದೊಯ್ದು ರಾಜಕಾಲುವೆ ತಡೆಗೋಡೆಗೆ ಡಿಕ್ಕಿ ಆಗಿತ್ತು. ಅದಾದ ಮೇಲೆ ಲಾರಿಯು ಅಂಗಡಿಯೊಂದಕ್ಕೆ ನುಗ್ಗಿತ್ತು. ಅಪಘಾತದಲ್ಲಿ ಕಾರು ನಜ್ಜುಗೊಂಡಿತ್ತು. ಬಳಿಕ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಅಂಬುದಾಸ್ ಪ್ರಕಾಶ್ ಸಜೀವ ದಹನವಾಗಿದ್ದರು.

ದೀಲಿಪ್ ಅವರ ದೂರು ಆಧರಿಸಿ ಲಾರಿ ಚಾಲಕ ಶರ್ಮಾ ವಿರುದ್ಧ ಬಿಎನ್ಎಸ್ ಕಾಯ್ದೆ ಅಡಿ ಅಜಾಗರೂಕತೆಯಿಂದ ವಾಹನ ಚಾಲನೆ, ಸಾರ್ವಜನಿಕ ಆಸ್ತಿಗೆ ಧಕ್ಕೆ ಹಾಗೂ ನಿರ್ಲಕ್ಷ್ಯದಿಂದ ಸಾವಿಗೆ ಕಾರಣ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

‘ಹೈದರಾಬಾದ್ನಿಂದ ಲಾರಿಯಲ್ಲಿ ಕಬ್ಬಿಣ ತುಂಬಿಕೊಂಡು ನಗರಕ್ಕೆ ಬಂದಿದ್ದೆ. ಕೊಟ್ಟಿಗೆಪಾಳ್ಯದ ಅಂಗಡಿಯೊಂದಕ್ಕೆ ಕಬ್ಬಿಣ ನೀಡಬೇಕಿತ್ತು. ತಡರಾತ್ರಿಯಾಗಿದ್ದರಿಂದ ನಿಗದಿತ ಸ್ಥಳಕ್ಕೆ ಹೋಗಲು ವಿಳಾಸ ಅರಿಯದೆ ಗೂಗಲ್ ಮ್ಯಾಪ್ ಮೊರೆ ಹೋಗಿದ್ದೆ. ವಾಹನಗಳ ಸಂಖ್ಯೆ ವಿರಳ ಆಗಿದ್ದರಿಂದ ಮ್ಯಾಪ್ ತೋರಿಸಿದಂತೆ ಲಾರಿ ಚಾಲನೆ ಮಾಡಿದ್ದೆ. ಕುರುಬರಹಳ್ಳಿ ಪೈಪ್ರಸ್ತೆಯ ಬಳಿ ಬರುತ್ತಿದ್ದಂತೆ ಲಾರಿ ನಿಯಂತ್ರಣ ತಪ್ಪಿತ್ತು. ಬ್ರೇಕ್ ಹಾಕಿದರೂ ನಿಲ್ಲಿಸಲು ಸಾಧ್ಯ ಆಗಲಿಲ್ಲ. ಆಗ ಕಾರಿಗೆ ಲಾರಿ ಡಿಕ್ಕಿ ಆಯಿತೆಂದು ವಿಚಾರಣೆ ವೇಳೆ ಶರ್ಮಾ ತಿಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಮದ್ಯಪಾನ ಮಾಡಿ ವಾಹನ ಚಾಲನೆ, ಉದ್ದೇಶಪೂರ್ವಕವಾಗಿ ಅಪಘಾತ ಎಸಗಿರುವುದು ತನಿಖೆಯಲ್ಲಿ ಕಂಡು ಬಂದರೆ ಲಾರಿ ಚಾಲಕನನ್ನು ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ಮೃತ ಅಂಬದಾಸ್ ಅವರು ಕುಟುಂಬದವರ ಜತೆಗೆ ಕುರುಬರಹಳ್ಳಿಯಲ್ಲಿ ವಾಸಿಸುತ್ತಿದ್ದರು. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಪ್ರಯಾಣಿಕರನ್ನು ಬಿಟ್ಟು ಕುರುಬರಹಳ್ಳಿಯ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿದ್ರೆ ಮಾಡುತ್ತಿದ್ದರು. ಶುಕ್ರವಾರ ಮುಂಜಾನೆ ಸಂಭವಿಸಿದ್ದ ಅಪಘಾತದಲ್ಲಿ ಅವರು ಸಜೀವದಹನ ಆಗಿದ್ದಾರೆ’ ಎಂದು ಸಂಚಾರ ಪೊಲೀಸರು ಹೇಳಿದರು.

ಲಾರಿ ಚಾಲಕನಿಗೆ ಗಾಯ

ಬೆಂಗಳೂರು: ನಂದಿನಿಲೇಔಟ್ನಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿಯಲ್ಲಿದ್ದ ಇತರೆ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಳಿಕ ಗ್ಯಾಸ್ ಸಿಲಿಂಡರ್ಗಳಿಂದ ಅನಿಲ ಸೋರಿಕೆ ಆಗುವ ಆತಂಕ ನಿರ್ಮಾಣ ಆಗಿತ್ತು. ಸಿಲಿಂಡರ್ಗಳಿಂದ ಅನಿಲ ಸೋರಿಕೆ ಆಗದಂತೆ ಸಿಬ್ಬಂದಿ ತುರ್ತು ಕ್ರಮ ಕೈಗೊಂಡಿದ್ದರಿಂದ ಆತಂಕ ದೂರವಾಯಿತು. ಘಟನೆ ಸಂಬಂಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ರಾಜಾಜಿನಗರ ಬಳಿ ಕಾರು– ಲಾರಿ ನಡುವೆ ಅಪಘಾತ: ಕ್ಯಾಬ್ ಚಾಲಕ ಸಜೀವದಹನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.