ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ‘ಗಾಬ್ಲರ್’ (ಸ್ಮಾರ್ಟ್ ಕಸ ಸಂಗ್ರಹಿಸುವ ಯಂತ್ರ) ಯಂತ್ರವನ್ನು ಪ್ರಾಯೋಗಿಕವಾಗಿ ಬಳಸಿ ವರದಿ ನೀಡಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವಿಭಾಗದ ಕಮರ್ಷಿಯಲ್ ಸ್ಟ್ರೀಟ್ ರಸ್ತೆಯಲ್ಲಿ ಗಾಬ್ಲರ್ ಯಂತ್ರವನ್ನು ಪರಿಶೀಲಿಸಿ, ಚಲಾಯಿಸಿದರು.

ನಂತರ ಮಾತನಾಡಿದ ಅವರು, ‘ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ನಗರದ ರಸ್ತೆಗಳನ್ನು ಸ್ವಚ್ಛವಾಗಿಡಬೇಕು. ಈ ನಿಟ್ಟಿನಲ್ಲಿ ಗಾಬ್ಲರ್ ಯಂತ್ರವನ್ನು ಪ್ರಾಯೋಗಿಕವಾಗಿ ಬಳಸಿ, ಅದರ ಕಾರ್ಯನಿರ್ವಹಣೆಯ ಆಧಾರದ ಮೇಲೆ ಎಲ್ಲಾ ನಗರ ಪಾಲಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಗಾಬ್ಲರ್ ಯಂತ್ರ’ ಸ್ಮಾರ್ಟ್ ಯಂತ್ರವಾಗಿದ್ದು, ಸರಿಯಾದ ತರಬೇತಿ ಪಡೆದ ಚಾಲಕನು ಅದರ ಮೇಲೆ ನಿಂತುಕೊಂಡೇ ಚಾಲನೆ ಮಾಡಬಹುದು. ಅಲ್ಲದೆ, ಚಾಲಕನು ನಡೆದುಕೊಂಡು ಹೋಗುತ್ತಾ ಯಂತ್ರವನ್ನು ನಿಯಂತ್ರಿಸಬಹುದಾದ ವ್ಯವಸ್ಥೆಯೂ ಇದರಲ್ಲಿದೆ. ಒಬ್ಬ ವ್ಯಕ್ತಿ ಇದನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಈ ಯಂತ್ರವು ವಿದ್ಯುತ್ ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುತ್ತದೆ. ಮೂರು ಗಂಟೆ ಚಾರ್ಜ್ ಮಾಡಿದರೆ, 8 ಗಂಟೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಯಂತ್ರಕ್ಕೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದ್ದು, ಮೇಲ್ವಿಚಾರಣೆ ಮಾಡಲು ಅನುಕೂಲವಾಗಲಿದೆ. ಇದು ಕಿರಿದಾದ ಜಾಗಗಳಲ್ಲಿಯೂ ಸುಲಭವಾಗಿ ಬಳಸಬಹುದಾಗಿದೆ.

ಗಾಬ್ಲರ್ ಯಂತ್ರದಲ್ಲಿ 240 ಲೀಟರ್ ತ್ಯಾಜ್ಯ ಸಂಗ್ರಹಿಸುವ ಕಂಟೈನರ್, ದೂಳಿನ ಫಿಲ್ಟರ್, ಕಂಟ್ರೋಲ್ ಬಟನ್ಗಳು, ಕಸ ಹೆಕ್ಕಲು ಜಾಯ್ಸ್ಟಿಕ್, ಫ್ಲಾಷಿಂಗ್ ಎಚ್ಚರಿಕೆ ದೀಪ, ರಾತ್ರಿ ವೇಳೆ ಕಾರ್ಯನಿರ್ವಹಿಸಲು ಎಲ್.ಇ.ಡಿ ದೀಪ, ಹಿಂಬದಿ ಚಲನೆಯ ಎಚ್ಚರಿಕೆಯ ಅಲಾರಂ ಹಾಗೂ ಅಗ್ನಿಶಾಮಕ ಸಾಧನಗಳಿವೆ. ಕಸ ಸಂಗ್ರಹವಾದ ಬಳಿಕ ಬಯೋಡಿಗ್ರೇಡಬಲ್ ಬ್ಯಾಗ್ಗಳ ಮೂಲಕ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಬಹುದಾಗಿದೆ.

ಯಂತ್ರವು ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ದೂಳು, ಮರದ ತುಂಡುಗಳು, ಪ್ಲಾಸ್ಟಿಕ್, ಅಲ್ಯೂಮಿನಿಯಂ, ಕಾಗದ, ಗಾಜು, ಒಣ ಎಲೆಗಳು, ಪ್ಲಾಸ್ಟಿಕ್ ಚೀಲಗಳು, ರ್ಯಾಪರ್ಗಳು ಹಾಗೂ ಪ್ಲಾಸ್ಟಿಕ್ ಮತ್ತು ಲೋಹದ ಬಾಟಲಿಗಳು ಸೇರಿದಂತೆ ಇತರೆ ತ್ಯಾಜ್ಯವನ್ನು ಸುಲಭವಾಗಿ ಹೀರಿಕೊಂಡು ರಸ್ತೆಗಳನ್ನು ಸ್ವಚ್ಛಗೊಳಿಸಲಿದೆ. ಅಲ್ಲದೆ, 12 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿದ್ದು, ಪ್ರೆಶರ್ ಪೈಪ್ ಮೂಲಕ ಸ್ವಚ್ಛಗೊಳಿಸುವ ವ್ಯವಸ್ಥೆಯೂ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಮಾತನಾಡಿ, ‘ಕೆ.ಆರ್. ಮಾರುಕಟ್ಟೆ, ರಸಲ್ ಮಾರುಕಟ್ಟೆ, ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಇತರೆ ಸಿಬಿಡಿ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಬಳಸಿ, ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರಿಶೀಲಿಸಬೇಕು. ಗಾಬ್ಲರ್ ಯಂತ್ರದ ಕಾರ್ಯಕ್ಷಮತೆ ಪರಿಶೀಲಿಸಿ ಯಾವುದೇ ಸಮಸ್ಯೆ ಇಲ್ಲದಿದ್ದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.