ಬೆಂಗಳೂರು: ಬೆಂಗಳೂರು ಜಲಮಂಡಳಿ ಅಳವಡಿಸಿ ಕೊಂಡಿರುವ ರೋಬೋಟಿಕ್ ತಂತ್ರಜ್ಞಾನ ಮೂಲಕ ಆರು ತಿಂಗಳಲ್ಲಿ 32.66 ಕಿ.ಮೀ. ಪರಿಶೀಲನೆ ನಡೆಸಿ 399 ಸ್ಥಳಗಳಲ್ಲಿ ರಸ್ತೆ ಅಗೆಯುವುದನ್ನು ತಪ್ಪಿಸಲಾಗಿದೆ.

ನಗರದ ಸಂಚಾರ ದಟ್ಟಣೆಗೆ ಕಿರಿಕಿರಿ ಆಗದಂತೆ, ವಾಹನ ಸವಾರರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿರುವ ಜಲಮಂಡಳಿ, ಕಳೆದ ನವೆಂಬರ್ನಲ್ಲಿ ರೋಬೋಟಿಕ್ ತಂತ್ರಜ್ಞಾನ ಬಳಸಿ ಪೈಪ್ಲೈನ್, ಒಳಚರಂಡಿ ದೋಷಗಳನ್ನು ಪತ್ತೆಹಚ್ಚುವ ಚಟುವಟಿಕೆ ಆರಂಭಿಸಿತ್ತು. ರೋಬೋಟಿಕ್ ತಪಾಸಣೆ ವೇಳೆ ದೋಷಗಳನ್ನು ಅತ್ಯಂತ ನಿಖರವಾಗಿ ಗುರುತಿಸಿ, ರಸ್ತೆಗಳಿಗೆ ಹೆಚ್ಚು ಹಾನಿಯಾಗದಂತೆ ಕರಾರುವಕ್ಕಾಗಿ ಪರಿಹಾರ ಕಲ್ಪಿಸಲಾಗಿದೆ.

‘ಈ ಅವಧಿಯಲ್ಲಿ ಬಂದಿದ್ದ ಒಟ್ಟು 404 ದೂರುಗಳ ಪೈಕಿ 399 ಇತ್ಯರ್ಥಪಡಿಸಲಾಗಿದೆ. ಬಾಕಿಉಳಿದಿರುವ ಕೇವಲ ಐದು ದೂರುಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಜೊತೆಗೆ ಮೂಲ ಸೌಕರ್ಯಗಳಿಗೆ ಧಕ್ಕೆ ಆಗದಂತೆ ಎಚ್ಚರವಹಿಸುವುದು ಜಲಮಂಡಳಿಯ ಬದ್ಧತೆಯಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-4-939580291

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.