ಬೆಂಗಳೂರು: ‘ದೇವರು, ದಿಂಡರು ಎಂಬುದನ್ನು ವಿಜ್ಞಾನ ಲೇಖಕ ಜಿ.ಟಿ.ನಾರಾಯಣ ರಾವ್ (ಜಿಟಿಎನ್) ಒಪ್ಪುತ್ತಿರಲಿಲ್ಲ. ವಿಜ್ಞಾನ ಅರ್ಥ ಮಾಡಿಕೊಂಡು, ಮೂಢನಂಬಿಕೆಗೆ ಬಲಿಯಾಗದಿರಿ ಎನ್ನುತ್ತಿದ್ದರು’ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಸಂಚಿ–ಸಂಚಯ ಸಂಸ್ಥೆಶನಿವಾರ ಏರ್ಪಡಿಸಿದ್ದ ಜಿ.ಟಿ.ನಾರಾಯಣ ರಾವ್ ಶತಮಾನೋತ್ಸವ ಸಂಗಮ ಕಾರ್ಯ ಕ್ರಮದಲ್ಲಿ ಮಾತನಾಡಿದರು.

‘ಕನ್ನಡ ವಿಶ್ವಕೋಶ ವಿಜ್ಞಾನ ವಿಭಾಗದ ಸಂಪಾದಕರಾಗಿ ಒಳ್ಳೆಯ ಕೆಲಸ ಮಾಡಿರುವ ಅವರು, ವಿಜ್ಞಾನದಲ್ಲಿ ಬರೆಯಬಲ್ಲ ಲೇಖಕರನ್ನು ಹುಡುಕಿ, ಪತ್ರಿಕೆ ಮತ್ತು ಪ್ರಕಾಶನ ಸಂಸ್ಥೆಗಳಿಗೆ ಪರಿಚಯಿಸುತ್ತಿದ್ದರು. ವಿಜ್ಞಾನ ಲೇಖಕರನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದ್ದರು’ ಎಂದು ಶ್ಲಾಘಿಸಿದರು.

ಜಿಟಿಎನ್ ಅವರು ಗಣಿತ ಪ್ರಾಧ್ಯಾಪಕ ಹಾಗೂ ಎನ್ಸಿಸಿ ಮೇಷ್ಟ್ರು ಆಗಿದ್ದರು. ವಿಜ್ಞಾನ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಂಗೀತದ ಬಗ್ಗೆಯೂ ಆಸಕ್ತಿ ಇತ್ತು. ಹಾಗಾಗಿ ಮೈಸೂರಿನಲ್ಲಿ ಗಾನಭಾರತಿ ಸಂಗೀತ ಸಂಸ್ಥೆ ಆರಂಭಿಸಿ, ಹೆಚ್ಚು ಸಮಯ ಕಳೆಯು ತ್ತಿದ್ದರು ಎಂದು ನುಡಿದರು.

ನೊಬೆಲ್ ಪುರಸ್ಕೃತ ವಿಜ್ಞಾನಿ ಎಸ್. ಚಂದ್ರಶೇಖರ್ ಅವರ ಸಂದರ್ಶನಕ್ಕಾಗಿ ಜಿಟಿಎನ್ ಅವರು ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಕ್ಕ ಸಮ್ಮೇಳನ ನಡೆಯುತ್ತಿತ್ತು. ಬಹುತೇಕರು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ಆದರೆ, ನಾರಾಯಣ ರಾವ್ ಅವರು 15 ನಿಮಿಷ ಶುದ್ಧ ಕನ್ನಡದಲ್ಲಿ ಮಾತನಾಡಿದರು. ಗಾನಭಾರತಿ ಸಂಗೀತ ಸಂಸ್ಥೆಗೆ ದೇಣಿಗೆ ನೀಡುವಂತೆ ಮನವಿ ಮಾಡಿದಾಗ ಯಾರೂ ನೀಡಲಿಲ್ಲ. ಆದರೆ, ಚಂದ್ರಶೇಖರ್ ಅವರು 300 ಡಾಲರ್ ದೇಣಿಗೆ ನೀಡಿದರು. ಈ ವಿಚಾರವನ್ನು ಜಿಟಿಎನ್ ಅವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ವಿವರಿಸಿದರು.

‘ಪರಮಾಣು’ ಕುರಿತು ನನ್ನ ಲೇಖನವು ಪಿಯು ಪಠ್ಯವಾಯಿತು. ಇದಕ್ಕೆ ಜಿಟಿಎನ್ ಅವರೇ ಕಾರಣ. ಆ ಪಾಠ ನನಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ವಿಜ್ಞಾನ ಲೇಖನ ಬರೆಯುವುದರ ಬಗ್ಗೆ ಪ್ರತಿ ವರ್ಷ ಕಮ್ಮಟ ನಡೆಸುತ್ತಿದ್ದರು’ ಎಂದು ನೆನಪಿಸಿಕೊಂಡರು.

ಒಂದು ಕಡೆ ಚಂದ್ರನತ್ತ ತೆರಳಲು ತಯಾರಿ ನಡೆಯುತ್ತಿದೆ. ಮತ್ತೊಂದೆಡೆ ಚಂದ್ರ ಗ್ರಹಣವಾಯಿತು ಎಂದು ಸಂಪ್ ನೀರು ಖಾಲಿ ಮಾಡುತ್ತೇವೆ. ಬದುಕಿನ ಮತ್ತು ನಿಸರ್ಗದ ವಾಸ್ತವಗಳನ್ನು ಹೇಳಬಹುದಾದ ಯಾವ ಮಾಧ್ಯಮಗಳೂ ಇಲ್ಲ. ಎಲ್ಲ ಮಾಧ್ಯಮಗಳೂ ದುರ್ಬಲವಾಗುತ್ತಿವೆ. ವಿಜ್ಞಾನದ ಹೆಸರಿನಲ್ಲಿ ಮೂಢನಂಬಿಕೆ ಪ್ರಸಾರ ಮಾಡುತ್ತಿರುವ ಬಗ್ಗೆ ಕೆಲ ಉದಾಹರಣೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.