ಬೆಂಗಳೂರು: ಪ್ರಮುಖ ರಸ್ತೆಗಳ ಜಂಕ್ಷನ್ಗಳಲ್ಲಿ ರಸ್ತೆ ದಾಟಲು ನಾಗರಿಕರು ಪರದಾಡುವುದನ್ನು ತಪ್ಪಿಸಲು ಹಾಗೂ ಸುಗಮ ವಾಹನ ಸಂಚಾರಕ್ಕಾಗಿ ಒಂಬತ್ತು ಸ್ಕೈವಾಕ್ಗಳನ್ನು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲು ಕೇಂದ್ರ ನಗರ ಪಾಲಿಕೆ ನಿರ್ಧರಿಸಿದೆ.

ಸ್ಕೈವಾಕ್ ನಿರ್ಮಿಸಲು ಗುತ್ತಿಗೆ ಪಡೆಯುವ ಸಂಸ್ಥೆಗೆ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಜಾಹೀರಾತು ನೀತಿ ಅನ್ವಯ ಅವಕಾಶವನ್ನು ನಗರ ಪಾಲಿಕೆ ನೀಡಲಿದೆ. ಐದು ವರ್ಷದ ಅವಧಿಗೆ ಗುತ್ತಿಗೆ ನೀಡಲು ನಿರ್ಧರಿಸಿ, ಟೆಂಡರ್ ಆಹ್ವಾನಿಸಲಾಗಿದೆ.

ಸ್ಕೈವಾಕ್ನ ಎರಡೂ ಬದಿ ಲಿಫ್ಟ್ ಅಳವಡಿಸಬೇಕು. ಈ ಲಿಫ್ಟ್ಗಳು ಕನಿಷ್ಠ 16 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಬೇಕು. ಈ ಲಿಫ್ಟ್ಗಳಿರುವ ಪ್ರದೇಶದಲ್ಲಿ ಆಂಬುಲೆನ್ಸ್, ಸಮೀಪದ ಆಸ್ಪತ್ರೆ, ಪೊಲೀಸ್ ಠಾಣೆ, ಸಂಚಾರ ಪೊಲೀಸರು, ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಹಾಯವಾಣಿ, ನಿಯಂತ್ರಣ ಕಚೇರಿಯ ಮಾಹಿತಿಯನ್ನು ಸಂಪರ್ಕ ಸಂಖ್ಯೆಯೊಂದಿಗೆ ನಮೂದಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಮೆಟ್ಟಿಲುಗಳ ಜೊತೆಗೆ ಎಕ್ಸಲೇಟರ್ಗಳನ್ನು ಅಳವಡಿಸಬೇಕು. ಇದರ ನಿರ್ವಹಣೆ ಕೂಡ ಗುತ್ತಿಗೆದಾರರ
ದ್ದಾಗಿದ್ದು, ಯಾವುದಾದರೂ ಸಮಸ್ಯೆ ಆದರೆ 24 ಗಂಟೆಯೊಳಗೆ ಪರಿಹರಿಸಬೇಕು. ಇಲ್ಲದಿದ್ದರೆ ದಿನಕ್ಕೆ ₹10 ಸಾವಿರ ದಂಡ ವಿಧಿಸಲಾಗುತ್ತದೆ. ಲಿಫ್ಟ್ ಹಾಗೂ ಎಕ್ಸಲೇಟರ್ಗಳು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸಬೇಕು. ಇವು 24 ಗಂಟೆಯೂ ಕಾರ್ಯನಿರ್ವಹಿಸುವ ವ್ಯವಸ್ಥೆ ಇರಬೇಕು.

ಸ್ಕೈವಾಕ್, ರಸ್ತೆಯಿಂದ ಆರು ಮೀಟರ್ ಎತ್ತರದಲ್ಲಿರಬೇಕು. ಯಾವ ಪ್ರದೇಶದಲ್ಲಿ ಕಾಮಗಾರಿ ಆಗಬೇಕು ಎಂಬುದನ್ನು ಕೇಂದ್ರ ನಗರ ಪಾಲಿಕೆ ವತಿಯಿಂದ ಗುರುತು ಮಾಡಿಕೊಡಲಾಗುತ್ತದೆ. ಸಿಸಿ ಟಿವಿ ಕ್ಯಾಮೆರಾಗಳನ್ನು ಲಿಫ್ಟ್, ಎಕ್ಸಲೇಟರ್, ಸ್ಕೈವಾಕ್ನ ಮಾರ್ಗದಲ್ಲಿ ಅಳವಡಿಸಿ, ಎಲ್ಲ ರೀತಿಯಲ್ಲೂ ನಿಗಾವಹಿಸಬೇಕು. ಈ ಮೂಲಕ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸಬೇಕು.

ಸ್ಕೈವಾಕ್ನ ನೆಲಹಾಸು ಜಾರುರಹಿತ ವ್ಯವಸ್ಥೆ ಹೊಂದಿರಬೇಕು. ಸ್ಕೈವಾಕ್ ಪ್ರದೇಶದಲ್ಲಿ ಅವಕಾಶವಿರುವ ಸ್ಥಳದಲ್ಲಿ ಕುಂಡದಲ್ಲಿ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡಬೇಕು. ಸಂಪೂರ್ಣ ಸ್ವಚ್ಛತೆ ಕಾಪಾಡಿಕೊಂಡು, ಭದ್ರತಾ ಸಿಬ್ಬಂದಿ ಪೂರ್ಣಾವಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಷರತ್ತುಗಳನ್ನು ಕೇಂದ್ರ ನಗರ ಪಾಲಿಕೆ ವಿಧಿಸಿದೆ.

ಸ್ಕೈವಾಕ್ನಲ್ಲಿ ವಾಣಿಜ್ಯ ಜಾಹೀರಾತುಗಳನ್ನು ರಸ್ತೆಯ ಎರಡೂ ಬದಿ ಪ್ರದರ್ಶಿಸಬಹುದು. ಸ್ಕೈವಾಕ್ನ ಒಳಬದಿಯಲ್ಲೂ ಜಾಹೀರಾತಿಗೆ ಅವಕಾಶ ನೀಡಲಾಗುತ್ತದೆ. ನೆಲದಿಂದ ಒಂದು ಮೀಟರ್ ಎತ್ತರದವರೆಗೆ ಯಾವುದೇ ರೀತಿಯ ಜಾಹೀರಾತು ಪ್ರದರ್ಶಿಸುವಂತಿಲ್ಲ. ನಾಲ್ಕು ವರ್ಷದವರೆಗೆ ರಿಯಾಯಿತಿ ದರದಲ್ಲಿ ಶುಲ್ಕವನ್ನು ಪಾಲಿಕೆಗೆ ಪಾವತಿಸಬೇಕಾಗುತ್ತದೆ. ಐದನೇ ವರ್ಷ ಶೇ 5ರಷ್ಟು ಶುಲ್ಕ ಹೆಚ್ಚಾಗುತ್ತದೆ. ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ, ವರ್ಗಾವಣೆ (ಡಿಬಿಎಫ್ಒಟಿ) ಆಧಾರದಲ್ಲಿ ಈ ಗುತ್ತಿಗೆ ನೀಡಲಾಗುತ್ತದೆ. ಹೀಗಾಗಿ, ಐದು ವರ್ಷದ ನಂತರ, ವಾಣಿಜ್ಯ ಬಿಡ್ ಕರೆಯಲಾಗುತ್ತದೆ. ಅದರಂತೆ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ಟೆಂಡರ್ನಲ್ಲಿ ತಿಳಿಸಲಾಗಿದೆ.

ಪಾದಚಾರಿ ಮಾರ್ಗಕ್ಕೆ ಹೊಸ ರೂಪ

‘ಕೇಂದ್ರ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಲಾ 10 ಕಿ.ಮೀ ಉದ್ದದ ಪಾದಚಾರಿ ಮಾರ್ಗಕ್ಕೆ ಶೀಘ್ರವೇ ಹೊಸ ರೂಪ ಕೊಡಲಾಗುವುದು. ಪಾದಚಾರಿ ಮಾರ್ಗದ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಸ್ವಚ್ಛತೆ ಕಾಪಾಡಿಕೊಳ್ಳಲಾಗುತ್ತದೆ. ಅಲ್ಲದೆ, ಆಕರ್ಷಕ ವಿನ್ಯಾಸ ಮೂರು ಅಡಿ ಎತ್ತರದ ‘ರೈಲಿಂಗ್’ ಅನ್ನು ಅಳವಡಿಸಲಾಗುತ್ತದೆ. ಇದರಿಂದ ಒತ್ತುವರಿಗೆ ಆಸ್ಪದ ಇರುವುದಿಲ್ಲ’ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇಲ್ಸೇತುವೆಗಳ ವಿಭಜಕಗಳಲ್ಲಿ ದೊಡ್ಡ ಕುಂಡಗಳನ್ನು ಇಟ್ಟು, ಅದರಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ಈ ಹಿಂದೆ ಇಂತಹ ಯೋಜನೆ ಮಾಡಲಾಗಿತ್ತಾದರೂ ನಿರ್ವಹಣೆ ಕೊರತೆಯಿಂದ ಗಿಡಗಳು ಹಾಳಾಗಿದ್ದವು. ಅದನ್ನೆಲ್ಲ ಪರಿಶೀಲಿಸಿಯೇ ವಿಭಜಕಗಳಲ್ಲಿ ಗಿಡಗಳನ್ನು ಹಾಕಲಾಗುತ್ತಿದೆ. ಇವುಗಳ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗಿದ್ದು, ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮೊದಲ ಹಂತವಾಗಿ, ಸಿರ್ಸಿ–ಮೈಸೂರು ರಸ್ತೆ ಮೇಲ್ಸೇತುವೆಯ ವಿಭಜಕಗಳಲ್ಲಿ ದೊಡ್ಡ ಕುಂಡಗಳನ್ನು ಇರಿಸಿ, ಗಿಡಗಳನ್ನು ಹಾಕಲಾಗುತ್ತಿದೆ. ನಮ್ಜ ಪಾಲಿಕೆ ವ್ಯಾಪ್ತಿಯ ಎಲ್ಲ ಮೇಲ್ಸೇತುವೆಗಳಲ್ಲೂ ಈ ರೀತಿಯ ಹಸಿರೀಕರಣ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಸ್ಕೈವಾಕ್?

ಬಿಡಿಎ ಕಾಂಪ್ಲೆಕ್ಸ್ ಸಮೀಪ, ಹಳೆ ಮದ್ರಾಸ್ ರಸ್ತೆ

ಡೈಮಂಡ್ ಡಿಸ್ಟ್ರಿಕ್ಟ್, ಹಳೆ ವಿಮಾನ ನಿಲ್ದಾಣ ರಸ್ತೆ

ಕಾಮರಾಜ ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್

ಕಿಮ್ಸ್ ಜಂಕ್ಷನ್, ಕೃಷ್ಣರಾಜೇಂದ್ರ ರಸ್ತೆ

ಸ್ಟಾಕ್–35 ಜಂಕ್ಷನ್, ಕೆಂಗಲ್ ಹನುಮಂತಯ್ಯ ರಸ್ತೆ ಮತ್ತು ಡಾ. ಮರಿಗೌಡ ರಸ್ತೆ

ಶಿವಶಂಕರ್ ವೃತ್ತ, ಕೃಷ್ಣರಾಜೇಂದ್ರ ರಸ್ತೆ ಮತ್ತು ಲಾಲ್ಬಾಗ್ ಫೋರ್ಟ್ ರಸ್ತೆ

ಅಮರ್ ಜಂಕ್ಷನ್, ಧನ್ವಂತ್ರಿ ರಸ್ತೆ

ಮೈಸೂರು ಬ್ಯಾಂಕ್ ಜಂಕ್ಷನ್, ಕೆಂಪೇಗೌಡ ರಸ್ತೆ– ಅರಮನೆ ರಸ್ತೆ–ಪೋಸ್ಟ್ ಆಫೀಸ್ ರಸ್ತೆ, ಅವೆನ್ಯೂ ರಸ್ತೆ

ಕ್ವೀನ್ಸ್ ಜಂಕ್ಷನ್, ಎಂ.ಜಿ ರಸ್ತೆ– ಕಸ್ತೂರಬಾ ರಸ್ತೆ, ಲ್ಯಾವೆಲ್ಲೆ ರಸ್ತೆ, ಕ್ವೀನ್ಸ್ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.