ನವದೆಹಲಿ: ಬೆಂಗಳೂರು ಸಮಗ್ರ ಘನತ್ಯಾಜ್ಯ ನಿರ್ವಹಣಾ ಟೆಂಡರ್ ಪ್ರಕ್ರಿಯೆಯಲ್ಲಿ ₹39,437 ಕೋಟಿ ಸಾರ್ವಜನಿಕ ವೆಚ್ಚವನ್ನು ಒಳಗೊಂಡ ಗಂಭೀರ ಅಕ್ರಮಗಳ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.

ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಗಂಭೀರ ಪ್ರಕ್ರಿಯಾತ್ಮಕ ಲೋಪಗಳು, ಹಣಕಾಸು ಅಕ್ರಮಗಳು, ಕಾನೂನು ಉಲ್ಲಂಘನೆಗಳು ಹಾಗೂ ಆಡಳಿತಾತ್ಮಕ ಪಕ್ಷಪಾತದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಹಣಕಾಸು ಇಲಾಖೆಯ ಸ್ಪಷ್ಟ ಆಕ್ಷೇಪ ಮತ್ತು ತಿರಸ್ಕಾರವಿದ್ದರೂ ಪ್ರಸ್ತಾವನೆಯನ್ನು ಮುಂದಕ್ಕೆ ತೆಗೆದುಕೊಂಡು ಅನುಮೋದಿಸಿರುವುದು ಪಾರದರ್ಶಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಟೆಂಡರ್ ಸಂಬಂಧಿತ ಎಲ್ಲ ಮುಂದಿನ ಕ್ರಮಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಡಿಪಿಆರ್ ಸಿದ್ಧತೆಯಿಂದ ಅಂತಿಮ ಹಣಕಾಸು ಅನುಮೋದನೆವರೆಗೆ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅಕ್ರಮಗಳು ಸಾಬೀತಾದಲ್ಲಿ, ಪ್ರಕರಣವನ್ನು ಸಿಬಿಐ ಹಾಗೂ ಲೋಕಾಯುಕ್ತ ಸೇರಿದಂತೆ ಸೂಕ್ತ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪತ್ರದಲ್ಲಿ ಉಲ್ಲೇಖಿಸಲಾದ ಪ್ರಮುಖ ಅಂಶಗಳು:

* ತಾಂತ್ರಿಕ ಪರಿಶೀಲನೆಯ ನಂತರ ಡಿಪಿಆರ್ ಸಲಹೆಗಾರರನ್ನು ಕಾನೂನುಬಾಹಿರವಾಗಿ ಬದಲಾಯಿಸಿರುವ ಆರೋಪ

* ಟೆಂಡರ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಅರ್ಹತಾ ಮಾನದಂಡಗಳಲ್ಲಿ ಅಸ್ಪಷ್ಟ ಬದಲಾವಣೆಗಳು

* ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತಾ ನಿಯಮಗಳ ಅಡಿಯಲ್ಲಿ ಕಡ್ಡಾಯ ಪ್ರಕಟಣಾ ನಿಯಮಗಳ ಉಲ್ಲಂಘನೆ

* ಅಂಗೀಕರಿಸಲಾದ ಬಿಡ್ಗಳು ಅನುಮತಿಸಿದ ಹಣಕಾಸು ಮಿತಿಗಳನ್ನು ಮೀರಿರುವುದು

* ಭೂಮಿಯ ಮೌಲ್ಯಮಾಪನ ಮತ್ತು ಪರಿಹಾರ ಮೊತ್ತ ಹೆಚ್ಚಳಕ್ಕೆ ಹಣಕಾಸು ಇಲಾಖೆಯ ಸ್ಪಷ್ಟ ವಿರೋಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.