ಬೆಂಗಳೂರು: ಸೌಜನ್ಯ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ಹಾಗೂ ನ್ಯಾಯಯುತವಾಗಿ ಮರು ತನಿಖೆ ನಡೆಸುವುದರ ಜೊತೆ ಸಾರ್ವಜನಿಕವಾಗಿ ಬೆಂಬಲ ನೀಡಬೇಕು ಎಂದು ‘ಕೊಂದವರು ಯಾರು ಆಂದೋಲನ’ ಆಗ್ರಹಿಸಿದೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ಬಾಲನ್, ಆಂದೋಲನದ ಮುಖಂಡರಾದ ಗೌರಮ್ಮ, ಎ. ಜ್ಯೋತಿ, ಮಲ್ಲಿಗೆ ಸಿರಿಮನೆ, ಮಧು ಭೂಷಣ್, ಮಮತಾ ಯಜಮಾನ್ ಅವರು ಸೌಜನ್ಯ ಅವರ ತಾಯಿ ಕುಸುಮಾವತಿಯವರ ಹೋರಾಟಕ್ಕೆ ಬೆಂಬಲ ಸೂಚಿಸುವ ಪತ್ರವನ್ನು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಬಾಲನ್, ‘ಕುಸುಮಾವತಿ ಅವರು 14 ವರ್ಷಗಳ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ನಲ್ಲಿ ಸೌಜನ್ಯ ಪ್ರಕರಣದ ಅರ್ಜಿಯನ್ನು ವಿಚಾರಣೆ ನಡೆಸಲು ಅನುಮತಿ ನೀಡಿದ್ದು, ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ’ ಎಂದರು.

‘ಧರ್ಮಸ್ಥಳ ಸುತ್ತಮುತ್ತಲು 74 ಮಹಿಳೆಯರ ಅತ್ಯಾಚಾರ, ಕೊಲೆ, ನಾಪತ್ತೆ ಅಸಹಜ ಸಾವುಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತ್ವರಿತವಾಗಿ ಹೈಕೋರ್ಟ್ಗೆ ಸಲ್ಲಿಸಬೇಕು. ಇದರ ಜೊತೆಗೆ ಸಾರ್ವಜನಿಕ ಪರಿಶೀಲನೆಗೂ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

‘ವ್ಯವಸ್ಥೆಯ ವೈಫಲ್ಯ’: ‘ಧರ್ಮಸ್ಥಳದಲ್ಲಿ ವ್ಯಾಪ್ತಿಯಲ್ಲಿ ನಡೆದ ದೌರ್ಜನ್ಯಗಳ ಪ್ರಕರಣಗಳ ವಿಚಾರದಲ್ಲಿ ವ್ಯವಸ್ಥೆಯ ವೈಫಲ್ಯವಿದೆ. ಸ್ಥಳೀಯ ಪೊಲೀಸ್, ಸಿಒಡಿ, ಸಿಬಿಐ ಎಲ್ಲರೂ ತನಿಖೆ ಮಾಡಿದ್ದಾರೆ, ಆದರೆ ಎಲ್ಲವೂ ವಿಫಲವಾಗಿವೆ’ ಎಂದು ವಕೀಲ ಬಾಲನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.