ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಅಂಚೆ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆಗಳನ್ನು ಇತ್ಯರ್ಥ ಪಡಿಸಲು ಜೂನ್ 8ರ ಬೆಳಿಗ್ಗೆ 11ಕ್ಕೆ ‘ಅಂಚೆ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಅಂಚೆ ಅಧೀಕ್ಷಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಯನಗರದ ಪ್ರಧಾನ ಅಂಚೆ ಕಚೇರಿಯ 2ನೇ ಮಹಡಿಯಲ್ಲಿ ಇರುವ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಅಂಚೆ ಅದಾಲತ್ ನಡೆಯಲಿದೆ.

ಸ್ಪೀಡ್ ಪೋಸ್ಟ್, ಪಾರ್ಸೆಲ್, ಮನಿ ಆರ್ಡರ್, ಉಳಿತಾಯ ಬ್ಯಾಂಕ್ ಖಾತೆ, ನಗದು ಪ್ರಮಾಣ ಪತ್ರಗಳು ಹಾಗೂ ಕೌಂಟರ್ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು ಜೂನ್ 6ರ ಸಂಜೆ 4 ಗಂಟೆಯೊಳಗಾಗಿ ಹಿರಿಯ ಅಂಚೆ ಅಧೀಕ್ಷಕರು, ಬೆಂಗಳೂರು ದಕ್ಷಿಣ ವಿಭಾಗ, ಬೆಂಗಳೂರು–560041 ಈ ವಿಳಾಸಕ್ಕೆ ಅಂಚೆ ಅಥವಾ dobangaloresouth.ka@indiapost.gov.in ಇ–ಮೇಲ್ ವಿಳಾಸಕ್ಕೆ ಕಳಿಸಬಹುದು ಎಂದು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-4-1794813930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.