ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ಟಿಪಿ) ಕಾರಿಡಾರ್-2 ಮತ್ತು ಕಾರಿಡಾರ್-4ಕ್ಕೆ ಅಗತ್ಯವಿರುವ 153 ಹವಾನಿಯಂತ್ರಿತ ‘ಬ್ರಾಡ್-ಗೇಜ್ ಮೆಟ್ರೊ ಮಾದರಿಯ ಬೋಗಿ’ಗಳನ್ನು ಪೂರೈಸುವಂತೆ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ (ಐಸಿಎಫ್) ಬಿ–ರೈಡ್ ಸಂಸ್ಥೆಯು ಅಧಿಕೃತವಾಗಿ ಕಾರ್ಯಾದೇಶ ನೀಡಿದೆ.

ಈ ಬೃಹತ್ ಕಾರ್ಯಾದೇಶದ ಒಟ್ಟು ಮೊತ್ತ ₹1,513.75 ಕೋಟಿಗಳಾಗಿದ್ದು, ಭವಿಷ್ಯದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನತೆಗೆ ಇದೊಂದು ಅತ್ಯಂತ ವಿಶ್ವಾಸಾರ್ಹ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ.

ಈ ಗುತ್ತಿಗೆ ಅನ್ವಯ, ಮುಂದಿನ 18 ತಿಂಗಳೊಳಗೆ ಐಸಿಎಫ್ ಸಂಸ್ಥೆಬೋಗಿಗಳ ಪೂರೈಕೆಯನ್ನು ಕಡ್ಡಾಯ ವಾಗಿ ಆರಂಭಿಸ ಬೇಕಿದೆ. ಕಾರಿಡಾರ್-2ರ ವ್ಯಾಪ್ತಿಗೆ ಬರುವ ಚಿಕ್ಕಬಾಣಾವರ-ಯಶವಂತಪುರ ಮಾರ್ಗವನ್ನು ನಿಗದಿತ ಸಮಯದಲ್ಲಿಯೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ದೃಷ್ಟಿಯಿಂದ ಈ ಗಡುವು ವಿಧಿಸಲಾಗಿದೆ.

ಅಲ್ಲದೆ, ಡಿಸೆಂಬರ್ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಧಾನಿಸೂಚಿಸಿದ್ದ ಕಾಲಮಿತಿಗೂ ಇದು ಪೂರಕ ವಾಗಿದೆ ಎಂದು ಬಿ–ರೈಡ್ ಸ್ಪಷ್ಟಪಡಿಸಿದೆ. ಶೀಘ್ರದಲ್ಲೇ ಉಭಯ ಸಂಸ್ಥೆಗಳ ನಡುವೆ ಅಧಿಕೃತ ಒಡಂಬಡಿಕೆಗೆ ಸಹಿ ಬೀಳಲಿದೆ.

ಐಸಿಎಫ್ಗೆ ನೀಡಿರುವ ಜವಾಬ್ದಾರಿ: ರೈಲು ಬೋಗಿಗಳ ವಿನ್ಯಾಸ ಮತ್ತು ಸಂಪೂರ್ಣ ಉತ್ಪಾದನೆ, ಗುಣಮಟ್ಟ ಪರಿಶೀಲನೆ, ಜೋಡಣೆ, ಪರೀಕ್ಷೆ ಹಾಗೂ ಕಾರ್ಯಾರಂಭ, ಆರ್ಡಿಎಸ್ಒ ನಿಂದ ಅಗತ್ಯವಿರುವ ಶಾಸನಬದ್ಧ ಅನುಮೋದನೆ ಪಡೆಯುವಿಕೆ, ಸಿಗ್ನಲಿಂಗ್, ವಿದ್ಯುತ್ ಪೂರೈಕೆ ಹಾಗೂ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ ಗುತ್ತಿಗೆಗಳೊಂದಿಗೆ ಸುಗಮ ಸಮನ್ವಯ ಹಾಗೂ ಕಾರಿಡಾರ್ಗಳ ಯಶಸ್ವಿ ಕಾರ್ಯಾಚರಣೆಗೆ ಕಡ್ಡಾಯವಾಗಿರುವ ಆರ್ಎಎಂಎಸ್ (ವಿಶ್ವಾಸಾರ್ಹತೆ, ಲಭ್ಯತೆ, ನಿರ್ವಹಣೆ ಮತ್ತು ಸುರಕ್ಷತೆ) ಮಾನದಂಡ ಪಾಲನೆ ಜವಾಬ್ದಾರಿ ನೀಡಲಾಗಿದೆ.

ಸಂಚಾರ ದಟ್ಟಣೆ ತಗ್ಗಿಸಲು ನೆರವು: ‘ಐಸಿಎಫ್ ಜೊತೆಗಿನ ಈಪಾಲುದಾರಿಕೆಯ ಮೂಲಕ, ಕಾರಿಡಾರ್2 ಮತ್ತು 4ರ ಟ್ರ್ಯಾಕ್ ಮತ್ತು ವ್ಯವಸ್ಥೆಗಳ ಮೂಲಸೌಕರ್ಯ ಕಾಮಗಾರಿಪೂರ್ಣಗೊಳ್ಳುವಷ್ಟರಲ್ಲಿ, ಅಗತ್ಯವಾಗಿ ರುವ ರೈಲು ಬೋಗಿಗಳ ಲಭ್ಯತೆ ಖಚಿತಪಡಿಸಿಕೊಳ್ಳುತ್ತಿದ್ದೇವೆ. ಈ ಸಮನ್ವಯತೆಯು ನಾಗರಿಕರಿಗೆ ವಿಶ್ವದರ್ಜೆಯ ಉಪನಗರ ರೈಲು ಜಾಲವನ್ನು ವಿಳಂಬವಿಲ್ಲದೆ ತಲುಪಿಸಲು, ಸುಸ್ಥಿರ ನಗರ ಸಾರಿಗೆಯ ದೃಷ್ಟಿಕೋನವನ್ನು ಈಡೇರಿಸಲು ಹಾಗೂ ನಗರದ ಟ್ರಾಫಿಕ್ ಸಮಸ್ಯೆ ತಗ್ಗಿಸಲು ನೆರವಾಗಲಿದೆ’ ಎಂದು ಬಿ–ರೈಡ್ (ಕೆ–ರೈಡ್) ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-4-629687870

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.