ಬೆಂಗಳೂರು: ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ಸತತ ಆರನೇ ವರ್ಷವೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಾವು ಸಂಭವಿಸಿವೆ ಎಂದು ಈ ವಾರ ಬಿಡುಗಡೆಯಾದ 2024ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶ ತಿಳಿಸಿದೆ.

ಜೋತುಬಿದ್ದಿರುವ ವಿದ್ಯುತ್ ತಂತಿಗಳು, ಪಾದಚಾರಿ ಮಾರ್ಗ ಸರಿ ಇಲ್ಲದ ಕಾರಣಕ್ಕೆ ನಗರದಲ್ಲಿ 17 ಜನ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಕೇವಲ 4 ಸಾವು ಸಂಭವಿಸಿದ್ದು, ಮುಂಬೈ, ಅಹಮದಾಬಾದ್, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾ ಸೇರಿದಂತೆ ಬೇರೆ ಯಾವುದೇ ನಗರಗಳು ಒಂದೇ ಒಂದು ಸಾವನ್ನು ದಾಖಲಾಗಿಲ್ಲ.

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ 2023 ರಲ್ಲಿ 20, 2022 ರಲ್ಲಿ 22, 2021 ರಲ್ಲಿ 31, 2020 ರಲ್ಲಿ 18 ಮತ್ತು 2019 ರಲ್ಲಿ 49 ಸಾವುಗಳು ವರದಿಯಾಗಿವೆ.

ಈ ಬಗ್ಗೆ ಮಾತನಾಡಿರುವ ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು, ‘ಗಾಳಿ ಮಳೆಯಿಂದಾಗಿ ಅನೇಕ ಸಂದರ್ಭಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುತ್ತವೆ. ಇವುಗಳಿಂದ ಸಾವು ಸಂಭವಿಸುತ್ತವೆ. ನಾವು ನಿಯಮಿತವಾಗಿ ಪರೀಕ್ಷಿಸುತ್ತಿದ್ದೇವೆ, ಆದರೂ ಕೆಲವೊಮ್ಮೆ ಮಳೆಗಾಲದ ಸಮಯದಲ್ಲಿ ಈ ರೀತಿಯ ಅನೀರಿಕ್ಷಿತ ಘಟನೆಗಳು ಸಂಭವಿಸುತ್ತವೆ. ಪಾದಚಾರಿ ಮಾರ್ಗಗಳಲ್ಲಿ ನೇತಾಡುವ ಕೇಬಲ್ ಮತ್ತು ವಿದ್ಯುತ್ ತಂತಿಗಳನ್ನು ಗಮನದಲ್ಲಿಟ್ಟುಕೊಂಡು ಜನರು ಓಡಾಡಬೇಕು’ ಎಂದಿದ್ದಾರೆ.

‘ಕೇಬಲ್ ಮತ್ತು ಹಾಳಾದ ಪಾದಚಾರಿ ಮಾರ್ಗಗಳಿಂದಾಗಿ ರಸ್ತೆಗಳಲ್ಲಿ ನಡೆಯುವಾಗ ಅಪಘಾತ ಸಂಭವಿಸುತ್ತವೆ, ಹೀಗಾಗಿ ಓಡಾಡುವಾಗ ಅಪಾಯ ಸಂಭವಿಸಬಹುದೆಂಬ ಆತಂಕವಿದೆ’ ಎಂದು ಜೆಪಿ ನಗರದ ನಿವಾಸಿ ಮಾನ್ಯ ಹೇಳಿದ್ದಾರೆ.

ಪಾದಚಾರಿ ಮಾರ್ಗಗಳ ಮೂಲಸೌಕರ್ಯ ಮತ್ತು ಕಳಪೆ ರಸ್ತೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಬಿಎ ಅಧಿಕಾರಿಯೊಬ್ಬರು, ‘ಪಾದಚಾರಿ ಮಾರ್ಗಗಳಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಿ ಉತ್ತಮ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇವೆ. ಬಿಡಬ್ಲ್ಯೂಎಸ್ ಎಸ್ಬಿ ಮತ್ತು ಬೆಸ್ಕಾಮ್ ನಂತಹ ಇತರ ಸಂಸ್ಥೆಗಳು ರಸ್ತೆಗಳನ್ನು ಅಗೆಯುತ್ತವೆ. ಗುಂಡಿ ಮತ್ತು ಕಳಪೆ ಪಾದಚಾರಿ ಮಾರ್ಗಗಳು ಕೆಲವು ಅನಾನುಕೂಲತೆಯನ್ನು ಉಂಟುಮಾಡಿದರೂ, ಇವುಗಳಿಂದ ಸಾವು ಸಂಭವಿಸುವುದು ಕಡಿಮೆ. ಹೀಗಾಗಿ ಸಾವುಗಳಿಗೆ ಇತರ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಬೇಕಾಗಿದೆ’ಎಂದಿದ್ದಾರೆ.

ಗುಂಡಿಗಳಿಲ್ಲದ ರಸ್ತೆ ಮತ್ತು ಸುರಕ್ಷಿತ ಪಾದಚಾರಿ ಮಾರ್ಗಗಳು ಸರ್ಕಾರ ಒದಗಿಸಬೇಕಾದ ಮೂಲಭೂತ ಸೌಕರ್ಯಗಳಾಗಿವೆ ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಕಳಪೆ ರಸ್ತೆಗಳಿಂದಾಗಿ ಜನರು ಅಪಘಾತಕ್ಕೀಡಾದ ಸಂದರ್ಭಗಳಿವೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ರಿಪೇರಿ ಕಾರ್ಯಕ್ಕೆ ಗಡುವು ನಿಗದಿಪಡಿಸುತ್ತಾರೆ, ಆದರೆ ಯಾವ ಕೆಲಸವೂ ಆಗುವುದಿಲ್ಲ. ರಸ್ತೆ ಕಾಮಗಾರಿ ಮತ್ತು ಪಾದಚಾರಿ ಮಾರ್ಗಗಳಿಗೆ ಆದ್ಯತೆ ನೀಡಬೇಕು’ ಎಂದು ನಗರದ ನಿವಾಸಿ ಜೋಸೆಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.