ಬೆಂಗಳೂರು: ರಸ್ತೆ ಸುರಕ್ಷತೆ ಜಾಗೃತಿಗಾಗಿ ಸಾರಿಗೆ, ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಮಾರ್ಚ್ 7ರಂದು ‘5–ಕೆ ಸೇಫ್ ಎ ಥಾನ್’ ಓಟ ಹಮ್ಮಿಕೊಂಡಿದ್ದು, ಕಸ್ತೂರಬಾ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಕಂಠೀರವ ಕ್ರೀಡಾಂಗಣದಿಂದ ಆರಂಭವಾಗುವ ಓಟವು ಸಿದ್ದಲಿಂಗಯ್ಯ ಜಂಕ್ಷನ್, ಕ್ವೀನ್ಸ್ ವೃತ್ತ, ಸಿಟಿಒ, ಪೊಲೀಸ್ ತಿಮ್ಮಯ್ಯ ವೃತ್ತ, ವಿಧಾನಸೌಧ ಮುಂಭಾಗ, ಗೋಪಾಲಗೌಡ ಸರ್ಕಲ್, ಕೆ.ಆರ್.ಸರ್ಕಲ್, ಹಡ್ಸನ್ ಸರ್ಕಲ್, ಕಸ್ತೂರಬಾ ರಸ್ತೆ ಮಾರ್ಗವಾಗಿ ಸಾಗಿ ಕಂಠೀರವ ಕ್ರೀಡಾಂಗಣದಲ್ಲಿ ಅಂತ್ಯಗೊಳ್ಳಲಿದೆ.

5–ಕೆ ಸೇಫ್ ಎ ಥಾನ್ ಭಾಗವಾಗಿ ಬೈಕ್ ಮತ್ತು ಸೈಕಲ್ ರ್ಯಾಲಿ, ವಾಕಥಾನ್ ಹಾಗೂ ಮ್ಯಾರಥಾನ್ ಸಹ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶನಿವಾರ ಬೆಳಿಗ್ಗೆ 7ರಿಂದ 10 ಗಂಟೆವರೆಗೆ ಕಸ್ತೂರಬಾ ರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಎಚ್ಎಲ್ಡಿ ಜಂಕ್ಷನ್ನಿಂದ ಕಸ್ತೂರಬಾ ರಸ್ತೆ ಮೂಲಕ ಕ್ವೀನ್ಸ್ ಜಂಕ್ಷನ್ ಮತ್ತು ಶಾಂತಿನಗರದ ಕಡೆಗೆ ಹೋಗುವ ವಾಹನಗಳು, ಎಚ್ಎಲ್ಡಿ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ ಹಡ್ಸನ್ ಜಂಕ್ಷನ್, ದೇವಾಂಗ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಮಿಷನ್ ರಸ್ತೆ, ಶಾಂತಿನಗರ ಮಾರ್ಗವಾಗಿ ರಿಚ್ಮಂಡ್ ಜಂಕ್ಷನ್, ಕ್ವೀನ್ಸ್ ಜಂಕ್ಷನ್ ತಲುಪಬಹುದು ಎಂದು ಸಂಚಾರ ಪೊಲೀಸರು ಹೇಳಿದರು.

ಕೆ.ಆರ್.ಸರ್ಕಲ್ನಿಂದ ಇಂಡಿಯನ್ ಎಕ್ಸ್ಪ್ರೆಸ್ ಕಡೆಗೆ ಹೋಗುವ ವಾಹನಗಳು ಮಹಾರಾಣಿ ಅಪ್ ರ್ಯಾಂಪ್ ಬಳಿ ಎಡಕ್ಕೆ ತಿರುವು ಪಡೆದು ಪ್ಯಾಲೇಸ್ ರಸ್ತೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಇನ್ಫೆಂಟ್ರಿ ರಸ್ತೆ, ಕಾಫಿ ಬೋರ್ಡ್ ಮಾರ್ಗವಾಗಿ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ವಾಹನ ನಿಲುಗಡೆ ನಿರ್ಬಂಧಿತ ರಸ್ತೆಗಳು

* ಕಸ್ತೂರಬಾ ರಸ್ತೆ
* ದೇವಾಂಗ ರಸ್ತೆ
* ವಿಠಲ್ ಮಲ್ಯ ರಸ್ತೆ
* ಎನ್.ಆರ್.ರಸ್ತೆ
* ಆರ್ಆರ್ಎಂಆರ್ ರಸ್ತೆ
* ನೃಪತುಂಗ ರಸ್ತೆ
* ಕೆ.ಜಿ.ರಸ್ತೆ
* ಶೇಷಾದ್ರಿ ರಸ್ತೆ

ಪಾರ್ಕಿಂಗ್ ಸ್ಥಳಗಳು

* ಪಿಡಬ್ಲ್ಯೂಡಿ ಕಚೇರಿ
* ನೃಪತುಂಗ ರಸ್ತೆ
* ವೈಎಂಸಿಎ ಮೈದಾನ

ಸ್ಪರ್ಧಿಗಳ ಪ್ರವೇಶ

* ವಾಕಥಾನ್ ಮತ್ತು ಮ್ಯಾರಥಾನ್ನಲ್ಲಿ ಭಾಗವಹಿಸುವವರು ಕ್ರೀಡಾಂಗಣದ ಗೇಟ್ ಸಂಖ್ಯೆ: 3, 4, 5
* ಬೈಕ್ ಮತ್ತು ಸೈಕಲ್ ರ್ಯಾಲಿಯಲ್ಲಿ ಭಾಗವಹಿಸುವವರು ಗೇಟ್ ಸಂಖ್ಯೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.