ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಮರ, ರೆಂಬೆ-ಕೊಂಬೆಗಳನ್ನು ರಾಶಿ ಹಾಕಿದ್ದು, ಇವನ್ನು ವಿಲೇವಾರಿ ಮಾಡಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಆದೇಶಿಸಿದ್ದಾರೆ.

ಇತ್ತೀಚಿಗೆ ಬಿದ್ದ ಮಳೆಯಿಂದಾಗಿ ಬಹಳಷ್ಟು ಮರಗಳು ಧರೆಗುರುಳಿದ್ದು ‘ಟ್ರೀ ಕೆನೊಪಿ ಮ್ಯಾನೇಜ್ಮೆಂಟ್’ ತಂಡಗಳಿಂದ ವಿಲೇವಾರಿ ಆಗುತ್ತಿದೆ. ಆದರೆ, ಮರ ಮತ್ತು ಕೊಂಬೆಗಳನ್ನು ತೆರವುಗೊಳಿಸಿದ ನಂತರ, ಸಣ್ಣಪುಟ್ಟ ಕೊಂಬೆಗಳು ಮತ್ತು ಮರದ ಎಲೆಗಳು ಪಾದಚಾರಿ ಮಾರ್ಗದಲ್ಲಿ ಹಾಗೆಯೇ ರಾಶಿ ಹಾಕಿರುವುದು ಹಲವಾರು ಕಡೆ ಕಂಡುಬಂದಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯ ಸಣ್ಣಪುಟ್ಟ ಮರದ ಕೊಂಬೆಗಳನ್ನು ಶ್ರೇಡಿಂಗ್ ಯಂತ್ರಗಳ ಮೂಲಕ ಪುಡಿಮಾಡಿ, ಆ ತ್ಯಾಜ್ಯವನ್ನು ಕಾಂಪೋಸ್ಟ್ ಘಟಕಕ್ಕೆ ಸಾಗಿಸಲು ಸೂಕ್ತ ಕ್ರಮ ವಹಿಸ ಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಗುರುವಾರ ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದ ನಗರದಾದ್ಯಂತ 157 ಮರಗಳು ಧರೆಗುರುಳಿವೆ. ಏಪ್ರಿಲ್ 29ರಂದು ಸುರಿದ ಭಾರೀ ಮಳೆಯಿಂದ 516 ಮರ ಹಾಗೂ 1,305 ರೆಂಬೆ–ಕೊಂಬೆಗಳು ಉರುಳಿದ್ದವು. ಕೆಲವು ಕಡೆ ತೆರವು ಕಾರ್ಯ ಇನ್ನೂ ಮುಗಿದಿಲ್ಲ.

ಮಾಹಿತಿಗೆ ಮನವಿ: ಮಳೆಗಾಲ ಪೂರ್ವ ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿ ಸರ್ವಜ್ಞನಗರ, ಹೆಬ್ಬಾಳವಿಭಾಗ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಹಾಗೂ ಅಪಾಯಕಾರಿ ಕಾಂಪೌಂಡ್ ಕುರಿತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.

ಸರ್ಕಾರಿ, ಖಾಸಗಿ ಶಾಲೆಗಳು, ಕಟ್ಟಡಗಳು, ಕಾಂಪೌಂಡ್ ಸೇರಿದಂತೆ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡ ಮತ್ತು ಗೋಡೆಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗು ತ್ತಿದೆ. ಸಾರ್ವಜನಿಕರಿಗೆ ಅಪಾಯ ಉಂಟುಮಾಡಬಹುದಾದ ಶಿಥಿಲಾ ವಸ್ಥೆಯ ಕಟ್ಟಡಗಳು ಅಥವಾ ಗೋಡೆಗಳು ಕಂಡುಬಂದಲ್ಲಿ 9008869933, 9035024113, 9845262637, 9535563588, 9945640419ಕ್ಕೆ ವಾಟ್ಸ್ಆ್ಯಪ್ ಮೂಲಕ ಮಾಹಿತಿ ನೀಡಬಹುದು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-4-1471074806

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.