ಬೆಂಗಳೂರು: ಉದ್ದೇಶಿತ ಉತ್ತರ–ದಕ್ಷಿಣ ಕಾರಿಡಾರ್ ಸುರಂಗ ರಸ್ತೆ ಯೋಜನೆಯ ಸ್ಥಳಗಳಲ್ಲಿ ಅದಾನಿ ಗ್ರೂಪ್ನ ಸಿಬ್ಬಂದಿ, ಸರ್ವೆ ಕಾರ್ಯವನ್ನು ಮುಂದುವರಿಸಿದ್ದಾರೆ.

ಹೆಬ್ಬಾಳ– ಸಿಲ್ಕ್ಬೋರ್ಡ್ ನಡುವಿನ 16.75 ಕಿ.ಮೀ. ಉದ್ದದ ಸುರಂಗ ರಸ್ತೆಗೆ ಕರೆಯಲಾಗಿದ್ದ ಟೆಂಡರ್ನಲ್ಲಿ ಅತ್ಯಂತ ಕಡಿಮೆ ಬಿಡ್ ಸಲ್ಲಿಸಿರುವ ಅದಾನಿ ಗ್ರೂಪ್ ಸಂಸ್ಥೆ, ಯೋಜನೆಯ ಸ್ಥಳಗಳಲ್ಲಿ ಸರ್ವೆ, ಮಣ್ಣು ಪರೀಕ್ಷೆ ಸೇರಿದಂತೆ ಹಲವು ತಪಾಸಣೆ ನಡೆಸುವುದನ್ನು ಮುಂದುವರಿಸಿದೆ.

ಉತ್ತರ– ದಕ್ಷಿಣ ಕಾರಿಡಾರ್ ಸುರಂಗ ರಸ್ತೆ ಯೋಜನೆಗೆ ಅಂದಾಜು ₹17,698 ಕೋಟಿ ವೆಚ್ಚಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಆದರೆ, ಟೆಂಡರ್ನಲ್ಲಿ ಇದಕ್ಕೂ ಮೀರಿದ ಬಿಡ್ ದಾಖಲಾಗಿದೆ. ಅತ್ಯಂತ ಕಡಿಮೆ ಬಿಡ್ ಸಲ್ಲಿಸಿರುವ ಅದಾನಿ ಗ್ರೂಪ್ ₹22,267 ಕೋಟಿಯನ್ನು (ಶೇ 25.87) ನಮೂದಿಸಿದೆ. ಅದಾನಿ ಗ್ರೂಪ್ ಹಾಗೂ ಹೈದರಾಬ್ನ ವಿಶ್ವ ಸಮುದ್ರ ಎಂಜಿನಿಯರಿಂಗ್ ಲಿಮಿಟೆಡ್ ಬಿಡ್ನಲ್ಲಿ ಅರ್ಹತೆ ಗಳಿಸಿವೆ. ದಿಲೀಪ್ ಬಿಲ್ಡ್ಕಾನ್ ಹಾಗೂ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್ವಿಎನ್ಎಲ್) ತಾಂತ್ರಿಕ ಅರ್ಹತೆಯಲ್ಲಿ ವಿಫಲವಾಗಿವೆ.

‘ಟೆಂಡರ್ ಆಹ್ವಾನದ ನಂತರ ಬಿಡ್ ಸಲ್ಲಿಸಿದ ನಾಲ್ಕೂ ಸಂಸ್ಥೆಗಳು ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ, ಸರ್ವೆ ಹಾಗೂ ತಪಾಸಣೆ ಕಾರ್ಯಗಳನ್ನು ಕೈಗೊಂಡಿದ್ದವು. ಎರಡು ಸಂಸ್ಥೆಗಳು ಮಾತ್ರ ಅಂತಿಮ ಸುತ್ತಿನಲ್ಲಿ ಉಳಿದ ನಂತರ, ಎರಡು ಸಂಸ್ಥೆಗಳು ಸರ್ವೆ ಕೈಬಿಟ್ಟವು. ವಿಶ್ವಸಮುದ್ರ ಸಂಸ್ಥೆಯೂ ಸರ್ವೆ–ತಪಾಸಣೆಯನ್ನು ನಡೆಸಿದೆ. ಆದರೆ, ಅದಾನಿ ಸಂಸ್ಥೆ ಆರಂಭಿಸಿದ್ದ ಸರ್ವೆ–ತಪಾಸಣೆ ಕಾರ್ಯವನ್ನು ಈಗಲೂ ಮುಂದುವರಿಸಿದೆ. ಇದಕ್ಕೆ ಟೆಂಡರ್ನಲ್ಲೇ ಅವಕಾಶವಿದೆ. ಆದರೆ, ಅವರೊಂದಿಗೆ ಯಾವುದೇ ರೀತಿಯ ಒಪ್ಪಂದ ಆಗಿಲ್ಲ. ಇವೆಲ್ಲ ಪ್ರಕ್ರಿಯೆಗಳು ಸರ್ಕಾರದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ’ ಎಂದು ಸುರಂಗ ರಸ್ತೆ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಬಿ–ಸ್ಮೈಲ್ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ಮಾಹಿತಿ ನೀಡಿದರು.

‘ಸುರಂಗ ರಸ್ತೆ ಅತಿದೊಡ್ಡ ನಿರೀಕ್ಷೆಯ ಯೋಜನೆಯಾಗಿದ್ದು, ಇದರ ಬಗ್ಗೆ ಪರೀಕ್ಷೆ, ವಿನ್ಯಾಸ ಸೇರಿದಂತೆ ಹಲವು ರೀತಿಯ ಪ್ರಕ್ರಿಯೆ, ವಿವರಣೆ, ದಾಖಲಾತಿಗಳನ್ನು ಸಂಗ್ರಹಿಸಬೇಕಾಗಿರುತ್ತದೆ. ಸರ್ವೆ– ತಪಾಸಣೆಗಳೆಲ್ಲವೂ ಟೆಂಡರ್ ಪ್ರಕ್ರಿಯೆಯ ಭಾಗ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-4-509403931

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.