ಬೆಂಗಳೂರು: ಉತ್ತರ–ದಕ್ಷಿಣ ಸುರಂಗ ರಸ್ತೆ ಯೋಜನೆಯು ಲಾಲ್ಬಾಗ್ನ ಭೂಮಿಯೊಳಗೆ ಸಾಗುವ ಬಗ್ಗೆ ಅಧ್ಯಯನ ನಡೆಸುತ್ತಿರುವ ಭಾರತೀಯ ಭೂವಿಜ್ಞಾನ ಸಮೀಕ್ಷೆಯ (ಜಿಎಸ್ಐ) ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಆತಂಕವನ್ನು ಹೇಳಿಕೊಳ್ಳಲು ನಾಗರಿಕ ಸಂಘಟನೆಗಳು ನಿರ್ಧರಿಸಿವೆ.

ಜಿಎಸ್ಐನ ದಕ್ಷಿಣ ವಲಯದ ಹೆಚ್ಚುವರಿ ಮಹಾ ನಿರ್ದೇಶಕ ವಿಜಯ್ ವಿಷ್ಣುಪಂತ್ ಅವರು ಗುರುವಾರ ನಾಗರಿಕರನ್ನು ಭೇಟಿ ಮಾಡುವ ನಿರೀಕ್ಷೆ ಇದೆ. ಈ ಭೇಟಿಯ ಸಂದರ್ಭದಲ್ಲಿ, ನಾಗರಿಕರು ಮನವಿ ಸಲ್ಲಿಸಿ, 240 ಎಕರೆ ವಿಸ್ತೀರ್ಣದ ಲಾಲ್ಬಾಗ್ ಅನ್ನು ವಿಶ್ವ ಪಾರಂಪರಿಕ ತಾಣವಾಗಿ ಉಳಿಸಲು ಕೋರಲಿದ್ದಾರೆ.

ಕರ್ನಾಟಕದಲ್ಲಿ, ಉತ್ತರ ಕನ್ನಡದ ಯಾಣ, ಉಡುಪಿಯ ಸೇಂಟ್ ಮೇರಿ ದ್ವೀಪ ಸೇರಿದಂತೆ ಆರು ಸ್ಥಳಗಳನ್ನು ಜಿಯೊ– ಪಾರಂಪರಿಕ ತಾಣಗಳೆಂದು ಜಿಎಸ್ಐ ಗುರುತಿಸಿದೆ. ಇದರಲ್ಲಿ ಲಾಲ್ಬಾಗ್ನಲ್ಲಿರುವ ಹಳೆಯ ಶಿಲಾ ರಚನೆಗಳ ಪೆನಿನ್ಸುಲರ್ ಗ್ನೀಸ್ ಕೂಡಾ ಒಂದಾಗಿದೆ. ಪೆನಿನ್ಸುಲರ್ ಗ್ನೀಸ್ ಸುಮಾರು 3,000 ದಶಲಕ್ಷ ವರ್ಷಗಳ ಅತ್ಯಂತ ಪುರಾತನ ಮತ್ತು ಮಹತ್ವದ ಬಂಡೆ ಎಂದು ಗುರುತಿಸಲಾಗಿದೆ. ಇವುಗಳು ಆರ್ಕಿಯನ್ ಸಮಯದಲ್ಲಿ ರೂಪುಗೊಂಡಿವೆ. ಇವು ಮುಖ್ಯವಾಗಿ ಟೋನಲೈಟ್ - ಟ್ರಾಂಡ್ಜೆಮೈಟ್ - ಗ್ರಾನೋಡಯೋರೈಟ್ (ಟಿಟಿಜಿ) ಶಿಲೆಗಳಿಂದ ರೂಪುಗೊಂಡಿವೆ ಎಂದು ಹೇಳಲಾಗಿದೆ.

ಉದ್ಯಾನದ ಉಸ್ತುವಾರಿ ತೋಟಗಾರಿಕೆ ಇಲಾಖೆಯದ್ದಾಗಿದ್ದು, ಜಿಎಸ್ಐ ಕೂಡ ಜಿಯೊ–ಪಾರಂಪರಿಕ ತಾಣದ ರಕ್ಷಕನ ಜವಾಬ್ದಾರಿ ಹೊಂದಿದೆ.

ಸುರಂಗ ರಸ್ತೆ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಅಂತಿಮಗೊಳಿಸುವ ಮುನ್ನ ಜಿಎಸ್ಐ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ. ಡಿಪಿಆರ್ ಪ್ರಕಾರ, ಸುರಂಗ ರಸ್ತೆ ನಿರ್ಮಿಸುವಾಗ ಲಾಲ್ಬಾಗ್ನ ಆರು ಎಕರೆ ಜಾಗವನ್ನು ಬಳಸಿಕೊಳ್ಳಲಾಗುತ್ತದೆ, ಒಂದು ಎಕರೆ ಶಾಶ್ವತವಾಗಿ ಯೋಜನೆಯ ಭಾಗವಾಗಲಿದೆ. ಅಲ್ಲದೆ, ಬಂಡೆಗಳ ಕೆಳಗೇ ಸುರಂಗ ರಸ್ತೆ ಹಾದುಹೋಗಲಿದೆ.

ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಗಣಿ ಸಚಿವ ಜಿ. ಕೃಷ್ಣಾರೆಡ್ಡಿ ಅವರನ್ನು ಭೇಟಿ ಮಾಡಿ, ನಾಗರಿಕರು ಸುರಂಗ ರಸ್ತೆ ಬಗ್ಗೆ ಹೊಂದಿರುವ ಆತಂಕವನ್ನು ವಿವರಿಸಿದ್ದರು. ಹೀಗಾಗಿ, ಜಿಎಸ್ಐ ತಜ್ಞರ ಸಮಿತಿ ಲಾಲ್ಬಾಗ್ನಲ್ಲಿ ಅಧ್ಯಯನ ನಡೆಸಿ, ಮೂರು ವಾರದಲ್ಲಿ ವರದಿಯನ್ನು ಸಲ್ಲಿಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-4-2114433298

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.