ಬೆಂಗಳೂರು: ಲಾಲ್ಬಾಗ್ನಲ್ಲಿ ಹಾಗೂ ಅದರ ಕೆಳಗೆ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಯಿಂದ ಜಿಯೊ–ಪಾರಂಪರಿಕ ತಾಣದ ನಿಯಮಗಳು ಉಲ್ಲಂಘನೆಯಾಗುವ ಜತೆಗೆ, ನಗರದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಲಿದೆ ಎಂದು ನಾಗರಿಕರ ಸಂಘಗಳು ಹಾಗೂ ಪರಿಸರ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದರು.

ಉತ್ತರ–ದಕ್ಷಿಣ ಸುರಂಗ ರಸ್ತೆ ಯೋಜನೆ ಬಗ್ಗೆ ಭಾರತೀಯ ಭೂವಿಜ್ಞಾನ ಸಮೀಕ್ಷೆಯ (ಜಿಎಸ್ಐ) ಹಿರಿಯ ಅಧಿಕಾರಿಗಳನ್ನು ಗುರುವಾರ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.

ಸುರಂಗ ರಸ್ತೆಯಿಂದ ಲಾಲ್ಬಾಗ್ನ ಐತಿಹಾಸಿಕ ಬಂಡೆಯ ಮೇಲಾಗುವ ಪರಿಣಾಮವನ್ನು ಜಿಎಸ್ಐನ ಉನ್ನತ ಮಟ್ಟದ ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಲಾಲ್ಬಾಗ್ನೊಳಗೆ 60 ಮೀಟರ್ ಕೆಳಗೆ ಸುರಂಗ ಕೊರೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಬಂಡೆ ಪಾರಂಪರಿಕ ತಾಣವಾಗಿದ್ದು, 1975ರಲ್ಲಿ ಜಿಎಸ್ಐ ಅಧಿಸೂಚನೆಯಾಗಿದೆ. ಪಾರಂಪರಿಕ ತಾಣಗಳ ಕಾಯ್ದೆ ಪ್ರಕಾರ ಇದನ್ನು ರಕ್ಷಿಸಬೇಕು. ಈ ಪ್ರದೇಶವನ್ನು ನಿರ್ಮಾಣರಹಿತ ವಲಯವನ್ನಾಗಿ ಘೋಷಿಸಬೇಕು’ ಎಂದು ನಾಗರಿಕರು ಆಗ್ರಹಿಸಿದರು.

‘ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕಡಿಮೆಯಾಗುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಲಾಲ್ಬಾಗ್ನಂತಹ ಹಸಿರು ಪ್ರದೇಶವನ್ನು ನಗರ ಮೂಲಸೌಕರ್ಯಕ್ಕಾಗಿ ಉಪಯೋಗಿಸಿಕೊಂಡರೆ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ’ ಎಂದರು.

‘ಲಾಲ್ಬಾಗ್ ಪ್ರದೇಶದ ಜಿಯೊ–ಪಾರಂಪರಿಕ ತಾಣಕ್ಕೆ ಸಂಬಂಧಿಸಿದ ಅತ್ಯುನ್ನತ ಚಿತ್ರಗಳು ಸೇರಿದಂತೆ ಎಲ್ಲ ಮಾಹಿತಿಗಳನ್ನು ಜಿಎಸ್ಐನ ಪ್ರಧಾನ ಕಚೇರಿ ಹಾಗೂ ನವದೆಹಲಿಯಲ್ಲಿರುವ ಯುನೆಸ್ಕೊ ತಂಡಕ್ಕೆ ನೀಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನ ತಜ್ಞರ ತಂಡವು ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಪರಿಶೀಲನೆ ನಡೆಸಿತ್ತು. ಕೆಎಂಎಲ್ ಕಡತ ಸಿದ್ಧವಾಗುವುದಕ್ಕೆ ಅಧಿಕಾರಿಗಳು ಕಾಯುತ್ತಿದ್ದು, ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ (ಬಿಎಂಆರ್ಸಿಎಲ್) ಹಾಗೂ ಬಿ–ಸ್ಮೈಲ್ನಿಂದ ಸಂಪೂರ್ಣ ಮೌಲ್ಯಮಾಪನದ ವರದಿಯನ್ನು ನಿರೀಕ್ಷಿಸುತ್ತಿದ್ದಾರೆ.

ಸಿಟಿಜನ್ 4 ಸಿಟಿಜನ್ಸ್, ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಗ್ರೂಪ್, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್, ಪರಿಸರಕ್ಕಾಗಿ ನಾವು, ಹಸಿರು ರಥ, ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಲಾಲ್ಬಾಗ್ ವಾಕರ್ಸ್, ಬೆಂಗಳೂರು ಟೌನ್ ಹಾಲ್ನ ಪ್ರತಿನಿಧಿಗಳು ಲಾಲ್ಬಾಗ್ ಉಳಿಸುವಂತೆ ಮನವಿ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-4-1834096281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.