ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಒಲಿಂಪಿಕ್ ತರಬೇತಿ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ 100 ಎಕರೆ ಭೂಮಿ ನೀಡುವ ಪ್ರಸ್ತಾವವನ್ನು ಬೆಂಗಳೂರು ವಿಶ್ವವಿದ್ಯಾಲಯವು ತಿರಸ್ಕರಿಸಿದೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅಥ್ಲೀಟ್ಗಳಿಗೆ ತರಬೇತಿ ನೀಡಲು ಕೇಂದ್ರ ಯುವ ಮತ್ತು ಕ್ರೀಡಾ ಸಚಿವಾಲಯವು ಜ್ಞಾನಭಾರತಿಯಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಯೋಜಿಸಿತ್ತು.

‘ಜ್ಞಾನಭಾರತಿಗೆ ಸೇರಿದ 81 ಎಕರೆ ಭೂಮಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಮತ್ತು ನೇತಾಜಿ ಸುಭಾಷ್ ದಕ್ಷಿಣ ಕೇಂದ್ರ (ಎನ್ಎಸ್ಎಸ್ಸಿ) ಸ್ಥಾಪನೆಗೆ 1974ರಲ್ಲಿಯೇ ನೀಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಕೇಳಿರುವ 100 ಎಕರೆ ಭೂಮಿ ವಿಶ್ವವಿದ್ಯಾಲಯದಲ್ಲಿ ಲಭ್ಯವಿಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ಕೋರಿಕೆಯನ್ನು ನಿರಾಕರಿಸಲಾಗಿದೆ’ ಎಂದು ಕುಲಪತಿ ಎಸ್.ಎಂ.ಜಯಕರ ಹೇಳಿದ್ದಾರೆ.

ಸ್ಥಳಾವಕಾಶ ಕೊರತೆ: ‘ಅಂತರರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರಗಳಲ್ಲಿ ಮಲ್ಟಿಪಲ್ ಟರ್ಫ್, ಪೂಲ್, ಟ್ರ್ಯಾಕ್ಸ್, ಒಳಾಂಗಣಗಳು, ಕ್ರೀಡಾ ವಿಜ್ಞಾನ ಸೌಲಭ್ಯಗಳು ಇರುತ್ತವೆ. ‘ಸಾಯ್’ನಲ್ಲಿ ಒಲಿಂಪಿಕ್ ಮಟ್ಟದಲ್ಲಿ ತರಬೇತಿ ನೀಡಲು ಸ್ಥಳಾವಕಾಶದ ಕೊರತೆಯಿದೆ. ಅದಕ್ಕೆ ಹೊಂದಿಕೊಂಡಂತೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಬಳಕೆಯಾಗದ 100 ಎಕರೆ ಭೂಮಿಯನ್ನು ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಕೋರಿದ್ದರು.

‘ಹೊಸ ಕೇಂದ್ರ ಸ್ಥಾಪನೆಯಿಂದ ಹೆಚ್ಚುವರಿಯಾಗಿ 500 ರಾಷ್ಟ್ರೀಯ ಕ್ರೀಡಾಪಟುಗಳು, ತರಬೇತುದಾರರು, ಕ್ರೀಡಾ ತಂತ್ರಜ್ಞರಿಗೆ ಅವಕಾಶ ಸಿಗಲಿದೆ. ಅಂತರರಾಷ್ಟ್ರೀಯ ಕ್ರೀಡಾ ಶಿಬಿರಗಳನ್ನು ಆಯೋಜಿಸುವ ಸಾಮರ್ಥ್ಯ ದೊರೆಯಲಿದೆ. ಬೆಂಗಳೂರನ್ನು ರಾಷ್ಟ್ರೀಯ ಒಲಿಂಪಿಕ್ ಉತ್ಕೃಷ್ಟತಾ ಕೇಂದ್ರವಾಗಿ ಪರಿವರ್ತಿಸುವ ಅವಕಾಶ ಸಿಗಲಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಪ್ರಸ್ತಾವ ತಿರಸ್ಕಾರ: ಕೇಂದ್ರ ಕ್ರೀಡಾ ಸಚಿವರ ಪತ್ರದ ಅನುಸಾರ ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಕಾರ್ಯನಿರ್ವಾಹಕ ನಿರ್ದೇಶಕರ ಸೂಚನೆಯಂತೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಅವರೊಂದಿಗೆ ಸಭೆ ನಡೆಸಿದ್ದರು. ಆಗ, ‘300ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ವಿವಿಧ ಶೈಕ್ಷಣಿಕ ಸಂಸ್ಥೆಗಳಿಗೆ ನೀಡಲಾಗಿದೆ. ಹೀಗಾಗಿ, ಯಾವುದೇ ಭೂಮಿ ಇಲ್ಲ’ ಎಂದು ಕುಲಪತಿ ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-4-386499578

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.