ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ ದೂರ ಶಿಕ್ಷಣ ಪೂರಕ ಪರೀಕ್ಷೆ: ಶುಲ್ಕ ಪಾವತಿಗೆ ಫೆ.14 ಕಡೆಯ ದಿನ

Last Updated 6 ಫೆಬ್ರುವರಿ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯವು ಈ ವರ್ಷದ ಮಾರ್ಚ್‌–ಏಪ್ರಿಲ್‌ನಲ್ಲಿ ಪೂರಕ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಪರೀಕ್ಷೆ ಬರೆಯಲು ಇಚ್ಛಿಸುವ ಪದವಿ ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಇದೇ 14 ಕೊನೆಯ ದಿನವಾಗಿದೆ.

‘ದೂರ ಶಿಕ್ಷಣ ನಿರ್ದೇಶನಾಲಯದ ಕಚೇರಿಯಲ್ಲಿ ಪರೀಕ್ಷಾ ಶುಲ್ಕಕ್ಕೆ ಸಂಬಂಧಿಸಿದ ಅರ್ಜಿಗಳು ಲಭ್ಯವಿದ್ದು, ₹21 ಶುಲ್ಕ ಪಾವತಿಸಿ ಅವುಗಳನ್ನು ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಇದೇ 14ರೊಳಗೆ ಸಲ್ಲಿಸಬೇಕು. ₹200 ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಇದೇ 19 ಅಂತಿಮ ದಿನ’ ಎಂದು ಪ್ರಕಟಣೆ ತಿಳಿಸಿದೆ.

‘ಮೊದಲ, ಎರಡನೇ ಹಾಗೂ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ ವಿದ್ಯಾರ್ಥಿಗಳಿಗೆ ₹626 ಪರೀಕ್ಷಾ ಶುಲ್ಕ ನಿಗದಿ ಮಾಡಲಾಗಿದೆ. ಬಿಎ ಪೂರಕ ಪರೀಕ್ಷೆ ಬರೆಯುವವರು ವಿಷಯವೊಂದಕ್ಕೆ ₹146 ಶುಲ್ಕ ಭರಿಸಬೇಕು. ಬಿ.ಕಾಂ.ವಿದ್ಯಾರ್ಥಿಗಳು ₹697 ಶುಲ್ಕ ಕಟ್ಟಬೇಕು. ಪೂರಕ ಪರೀಕ್ಷೆಗೆ ಹಾಜರಾಗುವವರು ವಿಷಯವೊಂದಕ್ಕೆ ₹252 ಶುಲ್ಕ ನೀಡಬೇಕಾಗುತ್ತದೆ. ಬಿಬಿಎಂ/ಬಿಬಿಎ ವಿದ್ಯಾರ್ಥಿಗಳಿಗೆ ಒಟ್ಟು ₹2,151 ಶುಲ್ಕ ನಿಗದಿಪಡಿಸಲಾಗಿದೆ. ಪೂರಕ ಪರೀಕ್ಷೆ ಬರೆಯುವವರು ವಿಷಯವೊಂದಕ್ಕೆ ₹420 ಶುಲ್ಕ ಕಟ್ಟಬೇಕು. ಎಲ್ಲರೂ ನಿಗದಿತ ದಿನದೊಳಗೆ ಆನ್‌ಲೈನ್‌ ಮೂಲಕವೇ ಶುಲ್ಕಗಳನ್ನು ಪಾವತಿಸಬೇಕು’ ಎಂದು ಸೂಚಿಸಲಾಗಿದೆ.

‘ಪ್ರಾಯೋಗಿಕ ಪರೀಕ್ಷೆ ಎದುರಿಸುವವರು ವಿಷಯವೊಂದಕ್ಕೆ ₹61 ಶುಲ್ಕ ಪಾವತಿಸಬೇಕು. ವೈವಾ, ಯೋಜನಾ ಮೌಲ್ಯಮಾಪನ ಹಾಗೂ ಪ್ರಬಂಧ ಮಂಡನೆಗೆ ತಲಾ ₹182 ಶುಲ್ಕ ನಿಗದಿ ಮಾಡಲಾಗಿದೆ. ಅಂಕಪಟ್ಟಿ, ಪರೀಕ್ಷಾ ಪ್ರಕ್ರಿಯೆ ಸೇರಿದಂತೆ ಒಟ್ಟು ₹274 ಹೆಚ್ಚುವರಿ ಶುಲ್ಕವನ್ನೂ ವಿದ್ಯಾರ್ಥಿಗಳು ಭರಿಸಬೇಕು’ ಎಂದು ಹೇಳಲಾಗಿದೆ.

ಹೆಚ್ಚಿನ ಮಾಹಿತಿಗೆ www.bangaloreuniversity.ac.in ಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT