ಬೆಂಗಳೂರು: ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದ ಆರೋಗ್ಯ ಕೇಂದ್ರವು ಮಂಗಳವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗೂ ನೇತ್ರದಾನ ನೋಂದಣಿ ಶಿಬಿರವನ್ನು ಕುಲಪತಿ ಪ್ರೊ.ಬಿ.ರಮೇಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಕರ್ತವ್ಯದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ನೌಕರರು, ಸ್ವಚ್ಛತಾ ಮತ್ತು ಭದ್ರತಾ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ’ ಎಂದರು.

ಯುವ ರೆಡ್ಕ್ರಾಸ್, ಲಯನ್ಸ್ ಕ್ಲಬ್, ಸರ್ಕಾರಿ ದಂತವೈದ್ಯ ಕಾಲೇಜಿನ ಸಹಯೋಗದಲ್ಲಿ ನಡೆದ ದಂತ, ನೇತ್ರ, ಹೃದ್ರೋಗ, ವಾಕ್ ಮತ್ತು ಶ್ರವಣ ಸಮಸ್ಯೆ, ಕ್ಯಾನ್ಸರ್, ಚರ್ಮ ರೋಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಯಿತು. ಅಭಿ ಆಯುರ್ ಸಂಸ್ಥೆಯು ಆಯುರ್ವೇದ ಚಿಕಿತ್ಸೆ ನೀಡಿತು. ರಕ್ತದಾನ ಶಿಬಿರ ಮತ್ತು ನಾರಾಯಣ ನೇತ್ರಾಲಯದಿಂದ ನೇತ್ರದಾನ ನೋಂದಣಿಯೂ ನಡೆಯಿತು.

ಕುಲಸಚಿವ ಎ.ನವೀನ್ ಜೋಸೆಫ್, ಹಣಕಾಸು ಅಧಿಕಾರಿ ಎಂ.ವಿ.ವಿಜಯಲಕ್ಷ್ಮಿ, ಸಿಂಡಿಕೇಟ್ ಸದಸ್ಯರಾದ ಕೃಷ್ಣರಾಮ್, ಕೆ.ಪಿ.ಪಾಟೀಲ್, ಶಿಲ್ಪಶ್ರೀ, ವಿದ್ಯಾವಿಷಯಕ ಪರಿಷತ್ತಿನ ಸದಸ್ಯ ಅಬ್ದುಲ್ ಖಾದರ್. ಬಿ.ಕೆ.ಗಿರಿ, ಉತ್ಕರ್ಷ್ ಲೋಕೇಶ್, ಪ್ರಸಾರಾಂಗ ನಿರ್ದೇಶಕ ಪ್ರೊ.ಟಿ.ಎನ್. ತಾಂಡವಗೌಡ, ಎನ್ಎಸ್ ಎಸ್ ಸಂಯೋಜಕ ಗೋವಿಂದೇಗೌಡ, ಪ್ರೊ.ಕೆ.ಆರ್.ಜಲಜಾ, ಪ್ರೊ.ಜ್ಯೋತಿ ವೆಂಕಟೇಶ್, ಪ್ರೊ.ಎಂ.ನಿರ್ಮಲಾ, ಪ್ರೊ.ರಿತಿಕಾ ಸಿನ್ಹಾ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-1557814222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.