ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಪಠ್ಯಪುಸ್ತಕಕ್ಕೂ ಪರದಾಟ: ವಿದ್ಯಾರ್ಥಿಗಳಿಗೆ ಸಿಗದ ಕನ್ನಡ ಪಠ್ಯ

Last Updated 7 ಜುಲೈ 2022, 3:16 IST
ಅಕ್ಷರ ಗಾತ್ರ

ಬೆಂಗಳೂರು: ತರಗತಿಗಳು ಆರಂಭವಾಗಿ ಎರಡು ತಿಂಗಳಾದರೂಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಪದವಿ ತರಗತಿಗಳ ಎರಡನೇ ಸೆಮಿಸ್ಟರ್‌ನ ಕನ್ನಡ ವಿಷಯದ ಪಠ್ಯಪುಸ್ತಕಗಳು ಇನ್ನೂ ದೊರೆಯುತ್ತಿಲ್ಲ.

ಈ ಬಾರಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕಾರಣಕ್ಕೆ ಪಠ್ಯಕ್ರಮ ರೂಪಿಸುವುದು ವಿಳಂಬವಾಯಿತು. ಪಠ್ಯ
ಕ್ರಮಕ್ಕೆ ಅಂತಿಮ ರೂಪುರೇಷೆ ನೀಡುವ ಪ್ರಕ್ರಿಯೆ ತಡವಾಗಿದ್ದರಿಂದ ಪಠ್ಯಪುಸ್ತಕಗಳು ದೊರೆಯುವುದು ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಮಿಸ್ಟರ್‌ ಅವಧಿಗೆ ತಕ್ಕಂತೆ ಪಠ್ಯಕ್ರಮ ರೂಪಿಸಬೇಕು. ಪಠ್ಯಕ್ರಮದ ಸ್ವರೂಪವೂ ಗೊತ್ತಿರಬೇಕು. ಆದರೆ, ಈ ಬಾರಿ ಎಲ್ಲವೂ ಗೊಂದಲಗಳಲ್ಲೇ ನಡೆದಿದೆ. ವ್ಯವಸ್ಥಿತವಾಗಿ ನಡೆಯದ ಕಾರಣ ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎನ್ನುವುದು ಪ್ರಾಧ್ಯಾಪಕರ ಅಭಿಪ್ರಾಯ.

‘ಈ ಬಾರಿ ಪಠ್ಯಕ್ರಮದ ಪಿಡಿಎಫ್‌ ಸಹ ನೀಡಿಲ್ಲ. ಪಠ್ಯಕ್ರಮದ ಅಂತಿಮ ರೂಪುರೇಷೆಯೇ ಗೊತ್ತಿಲ್ಲದಿದ್ದರೆ
ಅಧ್ಯಾಪಕರು ವಿದ್ಯಾರ್ಥಿಗಳಿಗೆ ಏನು
ಬೋಧನೆ ಮಾಡುವುದು? ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿದ್ದಾರೆ’ ಎಂದು ಕನ್ನಡ ಪ್ರಾಧ್ಯಾಪಕ ಶಿವಪ್ರಸಾದ್‌ ಎನ್ನುವವರು ದೂರಿದ್ದಾರೆ.

‘ಕಳೆದ ಸೆಮಿಸ್ಟರ್‌ನಲ್ಲೂ ಪರೀಕ್ಷೆ ಇನ್ನು ಒಂದು ವಾರ ಇರುವಾಗ ಪುಸ್ತಕಗಳು ದೊರೆತವು. ಈ ಬಾರಿಯೂ ಇದೇ ಪರಿಸ್ಥಿತಿಯಾಗಿದೆ. ಸುಮಾರು ಎರಡು ತಿಂಗಳಾಗುತ್ತ ಬಂದಿದ್ದರೂ ಪಠ್ಯಪುಸ್ತಕಗಳು ಇಲ್ಲ. ಸೆಮಿಸ್ಟರ್‌ನ ಆರಂಭದಲ್ಲೇ ದೊರೆತರೆ ಅನು
ಕೂಲವಾಗುತ್ತದೆ. ವಿಶ್ವವಿದ್ಯಾಲಯದಲ್ಲಿಯಾರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಪಠ್ಯಕ್ರಮವನ್ನಾದರೂ ತಿಳಿಸಿ ಎಂದು ಕೋರಿದರೂ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

‘ಕೆಲ ತಾಂತ್ರಿಕ ಸಮಸ್ಯೆಗಳಿಂದ ಪಠ್ಯಪುಸ್ತಕಗಳು ದೊರೆಯುವುದು ತಡವಾಗಿದೆ. ಎಲ್ಲ ಸಮಸ್ಯೆಗಳು ನಿವಾರಣೆಯಾಗಿವೆ. ಇನ್ನು ಒಂದು ವಾರದಲ್ಲಿ ಎಲ್ಲ ಪಠ್ಯಪುಸ್ತಕಗಳು ದೊರೆಯುತ್ತವೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಆರ್‌. ಅಮರೇಂದ್ರ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT