ಬೆಂಗಳೂರು: ‘ಸಮಾಜದ ಅಗತ್ಯಗಳಿಗೆ ತಕ್ಕಂತೆ ಜ್ಞಾನವನ್ನು ಒದಗಿಸುವ ಅಂತರಶಾಖಾ ಶಿಕ್ಷಣ, ತಂತ್ರಜ್ಞಾನ ಆಧಾರಿತ ಬೆಳವಣಿಗೆಯಿಂದ ವಿಕಸಿತ ಭಾರತದ ಗುರಿ ಸಾಧಿಸಬಹುದು’ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಎಸ್.ಆರ್.ನಿರಂಜನ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಸೈನ್ಸ್ ಫೋರಮ್ (ಬಿಯುಎಸ್ಎಫ್) ಹಾಗೂ ಪಿಎಂ ಉಷಾ ಸಹಯೋಗದೊಂದಿಗೆ ಆಯೋಜಿಸಿದ್ದ ವಿಜ್ಞಾನ ಉತ್ಸವ - 2026 ಉದ್ಘಾಟಿಸಿ ಮಾತನಾಡಿದರು.

‘ಮೂಲ ವಿಷಯಗಳೊಂದಿಗೆ ಕೌಶಲ ಶಿಕ್ಷಣ ಒದಗಿಸುವುದು ಇಂದಿನ ಅಗತ್ಯವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಸಿರು ಕ್ರಾಂತಿ, ಅಂತರಿಕ್ಷ ಕ್ಷೇತ್ರ, ಕೋವಿಡ್ ಲಸಿಕೆ ಸೇರಿದಂತೆ ವಿಜ್ಞಾನ ತಂತ್ರಜ್ಞಾನದಲ್ಲಿ ಆಗಿರುವ ಸಾಧನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಧಾರವಾಡದ ಐಐಟಿ ಪ್ರಾಧ್ಯಾಪಕ ಎಸ್.ಎಂ.ಶಿವಪ್ರಸಾದ್ ಮಾತನಾಡಿ, ‘ಪ್ರಸ್ತುತ ವಿಜ್ಞಾನ ವ್ಯಾಪಕವಾಗಿ ಪರಿವರ್ತನೆಯಾಗುತ್ತಿದ್ದು ಶಿಕ್ಷಣ ವ್ಯವಸ್ಥೆ ಕೂಡ ಭವಿಷ್ಯಕ್ಕೆ ತಕ್ಕಂತೆ ಬದಲಾಗಬೇಕು. ಪ್ರಾಯೋಗಿಕ ಹಾಗೂ ಚಿಂತನೆ ಆಧಾರಿತ ಕಲಿಕೆ ಅಗತ್ಯವಾಗಿದೆ’ ಎಂದರು.

ಕುಲಪತಿ ಎಸ್.ಎಂ.ಜಯಕರ ಮಾತನಾಡಿದರು. ಕುಲಸಚಿವರಾದ ಕೆ.ಟಿ.ಶಾಂತಲಾ, ಸಿ.ಎಸ್.ಕರಿಗಾರ್, ವಿಜ್ಞಾನ ನಿಕಾಯದ ಡೀನ್ ನಾಗಯ್ಯ ಉಪಸ್ಥಿತರಿದ್ದರು.

ಬೆಂವಿವಿ ವಿಜ್ಞಾನ ಉತ್ಸವದಲ್ಲಿ ಒಟ್ಟು 1250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿತರಾಗಿದ್ದು ವಿಜ್ಞಾನ ಮಾದರಿ ಸ್ಪರ್ಧೆ, ವಿಜ್ಞಾನ ಪೋಸ್ಟರ್ ಪ್ರಸ್ತುತಿ, ಕ್ಚಿಜ್ ಸ್ಪರ್ಧೆ, ಪ್ರಬಂಧ ಬರವಣಿಗೆ, ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ವಿಜ್ಞಾನಾಸಕ್ತರು ಪ್ರಾಯೋಗಿಕ ಅನುಭವ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.