ಬೆಂಗಳೂರು: ವಿಧಾನಸೌಧದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರೆ, ಅದನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತಾಗಿ ರಾಜ್ಯ ಪೊಲೀಸರು ಮತ್ತು ರಾಷ್ಟ್ರೀಯ ಭದ್ರತಾ ಗುಂಪಿನ (ಎನ್ಎಸ್ಜಿ) ಕಮಾಂಡೊಗಳು ಅಣಕು ಕಾರ್ಯಾಚರಣೆ ನಡೆಸಿದರು.

ವಿಧಾನಸೌಧಕ್ಕೆ ಬುಧವಾರ ಸಂಜೆ ಹತ್ತಾರು ಭಯೋತ್ಪಾದಕರು ನುಸುಳಿದ್ದರು. ಮುಖಗವಸು ಹಾಕಿದ್ದ ಅವರ ಕೈಗಳಲ್ಲಿ, ಅತ್ಯಾಧುನಿಕ ಬಂದೂಕುಗಳಿದ್ದವು. ಸಂಜೆಯ ವೇಳೆಯಾಗಿದ್ದರಿಂದ ಅವರ ಕೈಗಳಿಗೆ ಯಾವ ಸಾರ್ವಜನಿಕರೂ ಸಿಲುಕಿರಲಿಲ್ಲ. ಎರಡನೇ ಮಹಡಿ, ಮೂರನೇ ಮಹಡಿಯಲ್ಲಿ ಅಡ್ಡಾಡುತ್ತಾ ವಿಧಾನಸೌಧವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದರು.

ಅದೇ ವೇಳೆಗೆ ಸೇನೆಯ ಹೆಲಿಕಾಪ್ಟರ್ನಲ್ಲಿ ಬಂದ ರಾಷ್ಟ್ರೀಯ ಭದ್ರತಾ ಗುಂಪಿನ (ಎನ್ಎಸ್ಜಿ) ಕಮಾಂಡೊಗಳು, ವಿಧಾನಸೌಧದ ಒಳ ಆವರಣದಲ್ಲಿ ಇಳಿದು, ಕಾರ್ಯಾಚರಣೆ ನಡೆಸಿದರು. ಅವರಿಗೆ ರಾಜ್ಯ ಪೊಲೀಸರು ಜತೆಯಾದರು. ಭಯೋತ್ಪಾದಕರನ್ನು ಸದೆಬಡಿದರು. ಸಂಜೆ 4ರಿಂದ ರಾತ್ರಿ 8ರವರೆಗೆ ಅಣಕು ಕಾರ್ಯಾಚರಣೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-2144890461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.