ಬೆಂಗಳೂರು: ವಿಧಾನಸೌಧದಲ್ಲಿ ‘ಡಿ’ ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ₹24 ಲಕ್ಷ ಪಡೆದು ವಂಚಿಸಿದ್ದ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರಾಜಾಜಿನಗರದ ನಿವಾಸಿ ಪುಷ್ಪಾ ನೀಡಿದ ದೂರಿನ ಮೇಲೆ ಡಾಲರ್ಸ್ ಕಾಲೊನಿ ಆರ್.ಎಂ.ವಿ ಎರಡನೇ ಹಂತದ ಎಚ್.ಜೆ.ಪವಿತ್ರಾಗೌಡ ಹಾಗೂ ಅವರ ಸಹೋದರ ಚರಣ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.

‘15 ವರ್ಷದಿಂದ ದೂರುದಾರೆ ಪುಷ್ಪಾ ಹಾಗೂ ಹಾಸನದ ಎಚ್.ಜಿ.ಪವಿತ್ರಾಗೌಡ ಪರಸ್ಪರ ಪರಿಚಯ ಇದ್ದರು. ಕೆಲಸದ ನಿಮಿತ್ತ ಪವಿತ್ರಾಗೌಡ ಆಗಾಗ್ಗೆ ವಿಧಾನಸೌಧಕ್ಕೆ ಬರುತ್ತಿದ್ದರು. ‘ಎಲ್ಲ ಸಚಿವರೂ ನನಗೆ ಪರಿಚಯವಿದ್ದು, ವಿಧಾನಸೌಧದಲ್ಲಿ ಯಾರಿಗಾದರೂ ಕೆಲಸ ಬೇಕಿದ್ದರೆ ಕೊಡಿಸುತ್ತೇನೆ’ ಎಂದು ನಂಬಿಸಿದ್ದರು. ಒಂದು ಹುದ್ದೆಗೆ ₹15 ಲಕ್ಷಆಗಲಿದೆ ಎಂದೂ ತಿಳಿಸಿದ್ದರು.

ಆರೋಪಿ ಮಾತು ನಂಬಿದ್ದ ಪುಷ್ಪಾ, ತಮಗೆ ಪರಿಚಯವಿದ್ದ ಶಶಾಂಕ್ ಹಾಗೂ ಶಾಲಿನಿಗೂ ಮಾಹಿತಿ ನೀಡಿದ್ದರು. ಶಶಾಂಕ್ ತಮ್ಮ ಅಜ್ಜಿಗೆ ಸೇರಿದ ಚಿನ್ನಾಭರಣವನ್ನು ಅಡಮಾನವಿಟ್ಟು ಆರೋಪಿಗಳಿಗೆ ಹಣ ನೀಡಿದ್ದರು. ಶಾಲಿನಿ ಸಹ ಆಭರಣ ಗಿರವಿಯಿಟ್ಟು ಹಣ ಹೊಂದಿಸಿ, ಆರ್ಟಿಜಿಎಸ್ ಮೂಲಕ ಪವಿತ್ರಾಗೌಡಗೆ ವರ್ಗಾವಣೆ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.

ಹಣ ವಾಪಸ್ ಕೇಳಿದ್ದಕ್ಕೆ ನಿಂದನೆ: ಹಲವು ತಿಂಗಳು ಕಳೆದರೂ ಕೆಲಸವನ್ನು ಕೊಡಿಸದೇ ಇದ್ದಾಗ ಹಣ ವಾಪಸ್ ಕೊಡುವಂತೆ ಪುಷ್ಪಾ ಮನವಿ ಮಾಡಿದ್ದರು. ಹಣ ವಾಪಸ್ ಕೊಡದಿದ್ದರೆ ಪೊಲೀಸರಿಗೆ ದೂರು ನೀಡಲಾಗುವುದು ಎಂಬುದಾಗಿ ಹೇಳಿದ್ದರು. ಆಗ ₹10 ಲಕ್ಷವನ್ನು ಬ್ಯಾಂಕ್ ಖಾತೆಗೆ ವಾಪಸ್ ಹಾಕಿದ್ದರು. ಉಳಿದ ಹಣವನ್ನು ಮನೆಗೆ ಬಂದರೆ ಕೊಡುವುದಾಗಿ ಪವಿತ್ರಾಗೌಡ ಹೇಳಿದ್ದರು. ಅದರಂತೆ, ಡಾಲರ್ಸ್ ಕಾಲೊನಿಯಲ್ಲಿರುವ ಮನೆಯ ಬಳಿಗೆ ಹೋದಾಗ ದೂರುದಾರೆಯ ಮೊಬೈಲ್ ಕಸಿದುಕೊಂಡು ನಿಂದಿಸಿದ್ದರು. ಪುಷ್ಪಾ ಅವರನ್ನು ಕತ್ತರಿಸಿ ಹಾಕುವುದಾಗಿಯೂ ಆರೋಪಿ ಬೆದರಿಕೆ ಹಾಕಿದ್ದರು ಎಂದು ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ದತ್ತಾಂಶ ಅಳಿಸಿರುವ ಆರೋಪ: ದೂರುದಾರರ ಮೊಬೈಲ್ನಲ್ಲಿದ್ದ ಚಾಟ್ ಗಳು, ಫೋಟೊಗಳು, ದಾಖಲೆಗಳನ್ನು ಆರೋಪಿ ಅಳಿಸಿಹಾಕಿದ್ದು, ಸಾಕ್ಷ್ಯ ನಾಶ ಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-4-1627584242

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.