ಬೆಂಗಳೂರು: ‘ಬೆಂಗಳೂರು ಜಲಮಂಡಳಿಯ ಕಾವೇರಿ 5ನೇ ಹಂತದ ಯೋಜನೆಯ ಅಡಿ ಸಂಪರ್ಕ ಪಡೆಯುವ ಬಳಕೆದಾರರ ಶುಲ್ಕವನ್ನು ಶೇ 50ರಷ್ಟು ತಗ್ಗಿಸಬೇಕು. ಮುಖ್ಯಮಂತ್ರಿ ಅವರು ಸಭೆ ಕರೆದು ಶೀಘ್ರ ತೀರ್ಮಾನ ಕೈಗೊಳ್ಳಬೇಕು’ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

‘ನಗರದ ಹೊರವಲಯದ 110 ಹಳ್ಳಿಗಳ 2.5 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಜಾರಿಗೊಳಿಸಿರುವ ಯೋಜನೆ ನಾಗರಿಕರಿಗೆ ನೀರನ್ನು ತಲುಪಿಸುವಲ್ಲಿ ವಿಫಲವಾಗಿದೆ. ಜಲ ಮಂಡಳಿ ವಿಧಿಸುತ್ತಿರುವ ಬಳಕೆದಾರರ ಶುಲ್ಕ ದುಬಾರಿ ಆಗಿದೆ’ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ತಿಳಿಸಿದ್ದಾರೆ.

‘ಯೋಜನೆಗೆ ಈಗಾಗಲೇ ₹5,500 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆ ಮುಗಿದು 2 ವರ್ಷ ಆಗುತ್ತಿದೆ. ಆದರೆ, ಸಾರ್ವಜನಿಕರು ಜಲಮಂಡಳಿ ಶುಲ್ಕ ಭರಿಸಲಾಗದೇ ಸಂಪರ್ಕ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಕುಡಿಯುವ ನೀರಿನ ಯೋಜನೆಗೆ ವಿದೇಶದಲ್ಲಿ ಸಾಲ ಮಾಡಿದೆ. ಸಾಲವ ತೀರಿಸಬೇಕೆಂಬ ನೆಪದಲ್ಲಿ ನಾಗರಿಕರಿಂದ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುವ ಹುನ್ನಾರದಲ್ಲಿ ತೊಡಗಿದೆ’ ಎಂದು ಟೀಕಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-4-1632143021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.