ಬೆಂಗಳೂರು: ನಗರದ ಹನುಮಂತನಗರದಲ್ಲಿ ಜಲಮಂಡಳಿ ನೀರು ಸರಬರಾಜು ಪೈಪ್ಲೈನ್ನಲ್ಲಿ ರಂಧ್ರ ಉಂಟಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ಕಾರಂಜಿಯಂತೆ ನೀರು ಹರಿಯುತ್ತಿದ್ದು, ಅದನ್ನು ಸ್ಥಗಿತಗೊಳಿಸಲಾಗಿದೆ.

ಸೋರಿಕೆ ಹಾಗೂ ತುರ್ತು ಕಾಮಗಾರಿಯಿಂದ ಮೈಸೂರು ರಸ್ತೆಯ ಹಲವು ಭಾಗದಲ್ಲಿ ನೀರಿನ ಸರಬರಾಜಿನಲ್ಲಿ ಶನಿವಾರ ಸಂಜೆಯವರೆಗೂ ವ್ಯತ್ಯಯ ಆಗಲಿದೆ.

ಸೌತ್ ಎಂಡ್ ವೃತ್ತದ ಮುಖಾಂತರ ಮೈಸೂರು ರಸ್ತೆ ಸೇವಾ ಪ್ರದೇಶಗಳಿಗೆ 14 ಎಂಎಲ್ಡಿ ನೀರು ಸರಬರಾಜು ಮಾಡುವ ಪೈಪ್ಲೈನ್ ರಸ್ತೆಯ ಹನುಮಂತನಗರ ಪೊಲೀಸ್ ಕ್ವಾರ್ಟರ್ಸ್ ಎದುರು ಮುಖ್ಯ ಕೊಳವೆಯಲ್ಲಿ ರಂಧ್ರ ಉಂಟಾಗಿ, ಹೆಚ್ಚಿನ ಒತ್ತಡದಲ್ಲಿ ನೀರು ಚಿಮ್ಮುತ್ತಿತ್ತು.

ಇದರಿಂದ ಅಪಾರ ಪ್ರಮಾಣದ ಶುದ್ಧ ಕುಡಿಯುವ ನೀರು ಪೋಲಾಗುವುದರ ಜೊತೆಗೆ, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ತೊಂದರೆಯಾಯಿತು. ಇದನ್ನು ಗಮನಿಸಿದ ನಾಗರಿಕರು ಜಲಮಂಡಳಿ ಪಶ್ಚಿಮ ವಿಭಾಗ ಕಚೇರಿ ಗಮನಕ್ಕೆ ತಂದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಜಲಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಕಾವೇರಿ 2ನೇ ಹಂತದ 600 ಮಿ.ಮೀ. ವ್ಯಾಸದ ಮುಖ್ಯ ಕುಡಿಯುವ ನೀರಿನ ಕೊಳವೆಯಲ್ಲಿ ರಂಧ್ರ ಉಂಟಾಗಿ ಭಾರಿ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ಇದನ್ನು ತಡೆಗಟ್ಟಲು ಜಲಮಂಡಳಿ ಅಧಿಕಾರಿಗಳು ತುರ್ತು ದುರಸ್ತಿ ಕಾಮಗಾರಿ ಕೈಗೊಂಡರು. ಶುಕ್ರವಾರ ಸಂಜೆ ಮಳೆ ಬಂದಿದ್ದರಿಂದ ಹೆಚ್ಚಿನ ಕಾಮಗಾರಿ ಕೈಗೊಳ್ಳಲು ಆಗಲಿಲ್ಲ.

‘ಸಾರ್ವಜನಿಕ ಹಿತದೃಷ್ಟಿ ಹಾಗೂ ನೀರಿನ ಸದ್ಬಳಕೆಯ ಉದ್ದೇಶದಿಂದ ಸೌತ್ ಎಂಡ್ ರಸ್ತೆಯ ಸುರಾನ ಕಾಲೇಜು ಬಳಿ ಇರುವ 24 ಅಂಗುಲದ ಕವಾಟವನ್ನು 8 ಗಂಟೆ ಬಂದ್ ಮಾಡಲಾಗಿದೆ. ಸಮರೋಪಾದಿಯಲ್ಲಿ ಸೋರಿಕೆ ತಡೆಗಟ್ಟುವ ದುರಸ್ತಿ ಕಾಮಗಾರಿಯನ್ನು ಶನಿವಾರ ಬೆಳಿಗ್ಗೆ 9ರಿಂದಲೇ ಆರಂಭಿಸಿ ಸಂಜೆ 5ರವರೆಗೂ ಪೂರ್ಣಗೊಳಿಸಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಎಲ್ಲೆಲ್ಲಿ ಅಡಚಣೆ: ಕಸ್ತೂರಬಾ ನಗರ, ಬಾಪೂಜಿನಗರ, ಶಾಮಣ್ಣ ಗಾರ್ಡನ್, ಮಂಜುನಾಥನಗರ, ಹೊಸಗುಡ್ಡದಹಳ್ಳಿ, ಹಳೇಗುಡ್ಡದಹಳ್ಳಿ, ಅರಾಫತ್ ನಗರದಲ್ಲಿ ನೀರು ಸರಬರಾಜು ವ್ಯತ್ಯಯ ಆಗಲಿದೆ. ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಈ ಪ್ರದೇಶಗಳಿಗೆ ಎಂದಿನಂತೆ ಸುಗಮವಾಗಿ ನೀರು ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.