ಬೆಂಗಳೂರು: ಗಂಗೊಂಡನಹಳ್ಳಿಯ ಮಹಿಳೆಯನ್ನು ಡ್ರಾಗರ್ನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗಂಗೊಂಡನಹಳ್ಳಿ ನಿವಾಸಿ ಫಿರ್ದೋಸ್ ಬಾನು (34) ಕೊಲೆಯಾದ ಮಹಿಳೆ. ಆರೋಪಿ ಹಫೀಜ್ನನ್ನು ಬಂಧಿಸಲಾಗಿದೆ.

ಅವಿವಾಹಿತನಾದ ಹಫೀಜ್, ಆಟೊ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಫಿರ್ದೋಸ್ ಬಾನು ಅವರು ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಆ ಸಂದರ್ಭದಲ್ಲಿ ಗಂಗೊಂಡನಹಳ್ಳಿಯ ಸಮೀಪ ಅವರನ್ನು ಅಡ್ಡಗಟ್ಟಿದ್ದ. ನಂತರ, ಡ್ರಾಗರ್ನಿಂದ ಏಳು ಬಾರಿ ದೇಹದ ವಿವಿಧ ಭಾಗಗಳಿಗೆ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾರೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಪೊಲೀಸರು ಹೇಳಿದರು.

ಅಲ್ತಾಫ್ ಪಾಷಾ ಎಂಬುವವರನ್ನು ಮದುವೆಯಾಗಿದ್ದ ಫಿರ್ದೋಸ್ ಬಾನು ಅವರಿಗೆ ಮೂವರು ಮಕ್ಕಳಿದ್ದು ಅವರು ಪತಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು. ಗಂಗೊಂಡನಹಳ್ಳಿಯ ಸುತ್ತಮುತ್ತಲ ಮನೆಗಳಲ್ಲಿ ಮನೆಗೆಲಸ ಮಾಡುತ್ತಿದ್ದ ಫಿರ್ದೋಸ್ ಬಾನು ಅವರಿಗೆ ಆರೋಪಿ ಹಫೀಜ್ ಪರಿಚಯವಾಗಿತ್ತು. ಹಫೀಜ್ ಜತೆಗೆ ಫಿರ್ದೋಸ್ ಬಾನು ಅವರು ಓಡಾಟ ನಡೆಸುತ್ತಿದ್ದರು. ಈ ವಿಚಾರವು ಕುಟುಂಬದ ಸದಸ್ಯರಿಗೆ ಗೊತ್ತಾಗಿ ಫಿರ್ದೋಸ್ ಬಾನುಗೆ ಬುದ್ಧಿಮಾತು ಹೇಳಿದ್ದರು. ನಂತರ, ಅವರು ಹಫೀಜ್ನಿಂದ ದೂರವಾಗಿದ್ದರು ಎಂದು ಪೊಲೀಸರು ಹೇಳಿದರು.

ಕೆಲ ದಿನಗಳಿಂದ ಫಿರ್ದೋಸ್ ಬಾನು ಅವರನ್ನು ಆರೋಪಿ ಹಿಂಬಾಲಿಸಿ ಕಿರುಕುಳ ಕೊಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಫೆ.28ರಂದು ಜಗಳವಾಗಿತ್ತು. ಬಳಿಕ ಫಿರ್ದೋಸ್ ಬಾನು ಮತ್ತು ಕುಟುಂಬ ಸದಸ್ಯರು ಹಫೀಜ್ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದರು. ನಂತರ, ಹಫೀಜ್ನನ್ನು ಠಾಣೆಗೆ ಕರೆಸಿ ಎಚ್ಚರಿಕೆ ಕೊಟ್ಟು, ಪೊಲೀಸರು ಬಿಟ್ಟು ಕಳುಹಿಸಿದ್ದರು.

ಈ ಬೆಳವಣಿಗೆಯ ನಂತರ ಫಿರ್ದೋಸ್ ಬಾನು ಮೇಲೆ ಮತ್ತಷ್ಟು ಕೋಪಗೊಂಡಿದ್ದ ಹಫೀಜ್, ಸಂಚು ರೂಪಿಸಿ ಕೊಲೆ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.