ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ‘ನಾರಿ ಪವರ್ ಟೀಂ’ ಆಯೋಜಿಸಿದ್ದ ‘ವುಮೆನ್-ಆಥಾನ್ 4 ನೇ ಆವೃತ್ತಿ’ ಯಲ್ಲಿ 1,500 ಮಹಿಳೆಯರು ಪಾಲ್ಗೊಂಡು, ಮಹಿಳೆಯರು ತಮ್ಮ ಆರೈಕೆ ಬಗ್ಗೆ ಕಾಳಜಿ ವಹಿಸಿ ಎಂಬ ಸಂದೇಶದೊಂದಿಗೆ ವಾಕಥಾನ್ ನಡೆಸಿದರು.

ಕಲ್ಯಾಣ ನಗರದಿಂದ ಪ್ರಾರಂಭಗೊಂಡ ಆಥಾನ್, ಸುಮಾರು 3 ಕಿ.ಮೀ.ವರೆಗೂ ಮಹಿಳಾ ಆರೈಕೆ ಬಗ್ಗೆ ಸಂದೇಶ ಹೊಂದಿರುವ ಫಲಕಗಳನ್ನು ಹಿಡಿದು ಸಾಗಿದರು. ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರು ನೇರಳೆ ಬಣ್ಣದ ಬಟ್ಟೆ ಧರಿಸಿ, ಎಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಸಾಗಿದರು. ಈ ವೇಳೆ ಹಲವು ಆಸ್ಪತ್ರೆ ಸಿಬ್ಬಂದಿಗಳು, ಮಕ್ಕಳು ಸಹ ಇದರಲ್ಲಿ ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಡೆಂಟಲ್ ಡೆನ್ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಲಕ್ಷ್ಮಿ ರೂಪೇಶ್, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು, ಹೊರಗೆ-ಒಳಗೆ ಎಲ್ಲೆಡೆ ಶ್ರಮವಹಿಸಿ ದುಡಿಯುತ್ತಾರೆ. ಈ ವೇಳೆ ತಮ್ಮ ಆರೈಕೆ ಬಗ್ಗೆಯೇ ಕಾಳಜಿ ವಹಿಸುವುದಿಲ್ಲ. ಪ್ರತಿಯೊಬ್ಬ ಮಹಿಳೆಯೂ ಸ್ವಆರೈಕೆಗೆ ಗಮನ ನೀಡಿ. ಈ ಆಥಾನ್ನ ಮೂಲಕ ಮಹಿಳೆಯರು ಇನ್ನಾದರೂ ಜಾಗೃತಿ ವಹಿಸಲು ಎಂಬ ಸಂದೇಶ ಸಾರಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.