ಜೋರು ಮಳೆ; ಹೊಳೆಯಂತಾದ ರಸ್ತೆಗಳು

7
ನೆಲಕ್ಕುರುಳಿದ ಮರಗಳು: ವಾಹನಗಳ ದಟ್ಟಣೆ

ಜೋರು ಮಳೆ; ಹೊಳೆಯಂತಾದ ರಸ್ತೆಗಳು

Published:
Updated:
Deccan Herald

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ ಜೋರಾದ ಮಳೆ ಸುರಿಯಿತು. ಹಲವು ಪ್ರದೇಶಗಳ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. 

ಕೆಲವು ದಿನಗಳಿಂದ ನಗರದಲ್ಲಿ ಬಿಸಿಲಿನ ಧಗೆ ಹೆಚ್ಚಿತ್ತು. ಶುಕ್ರವಾರ ಮಾತ್ರ ಮಧ್ಯಾಹ್ನ 3 ಗಂಟೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆ ಜಿಟಿ ಜಿಟಿಯಾಗಿ ಆರಂಭವಾದ ಮಳೆ, ಗಂಟೆಯವರೆಗೆ ಜೋರಾಗಿಯೇ ಸುರಿಯಿತು.

ಜೋರಾದ ಗಾಳಿ ಬೀಸಿದ್ದರಿಂದ ಕೋರಮಂಗಲ, ಯಲಹಂಕ ಬಳಿಯ ನ್ಯಾಯಾಧೀಶರ ಬಡಾವಣೆ, ಬಾಣಸವಾಡಿಯ ರಾಜಕುಮಾರ್ ಉದ್ಯಾನ ಹಾಗೂ ಲಿಂಗರಾಜಪುರ ಬಳಿ ಮರಗಳು ನೆಲಕ್ಕುರುಳಿದವು.

ಮರಗಳು ಬಿದ್ದಿದ್ದ ರಸ್ತೆಯಲ್ಲಿ ವಾಹನಗಳ ಸಂಚಾರ ಕೆಲ ಕಾಲ ಬಂದ್‌ ಆಗಿತ್ತು. ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು, ಮರಗಳನ್ನು ತೆರವು ಮಾಡಿದರು. ನಂತರವೇ ಸಂಚಾರ ಸ್ಥಿತಿ ಯಥಾಸ್ಥಿತಿಗೆ ಮರಳಿತು.


ಕಾಮರಾಜ ರಸ್ತೆಯಲ್ಲಿ ನೀರಿನಲ್ಲೇ ಸಾಗಿದ ವಾಹನಗಳು  

ಯಶವಂತಪುರ, ಪೀಣ್ಯ, ಹೆಬ್ಬಾಳ, ಶಿವಾಜಿನಗರ, ಎಂ.ಜಿ.ರಸ್ತೆ, ಇಂದಿರಾನಗರ, ಹಲಸೂರು, ಬಸವನಗುಡಿ, ಚಾಮರಾಜಪೇಟೆ, ರಾಜರಾಜೇಶ್ವರಿ ನಗರ, ಹನುಮಂತನಗರ, ರಾಜಾಜಿನಗರ, ವಿಜಯನಗರ, ಎಲೆಕ್ಟ್ರಾನಿಕ್‌ ಸಿಟಿ, ಎಚ್‌ಎಸ್‌ಆರ್‌ ಲೇಔಟ್‌, ಮಡಿವಾಳ, ಸದಾಶಿವನಗರ, ಹೆಬ್ಬಾಳ, ಮೆಜೆಸ್ಟಿಕ್, ಬೈಯಪ್ಪನಹಳ್ಳಿ, ಬನಶಂಕರಿ, ನಾಗರಭಾವಿ, ಚಂದ್ರಾ ಲೇಔಟ್ ಹಾಗೂ ಸುತ್ತಮುತ್ತ ಉತ್ತಮ ಮಳೆ ಆಗಿದೆ.

ಸ್ಯಾಂಕಿ ರಸ್ತೆಯ ಲೀ ಮೆರಿಡಿಯನ್‌ ಹೋಟೆಲ್‌ ಬಳಿಯ ಕೆಳಸೇತುವೆಯಲ್ಲಿ ನೀರು ಹರಿದಿದ್ದರಿಂದ, ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಯಿತು.

ಹೊಸೂರು ಮುಖ್ಯ ರಸ್ತೆ, ಮೆಜೆಸ್ಟಿಕ್‌, ನೃಪತುಂಗ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂತು. 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !