ಬೆಂಗಳೂರು: ರಾಜ್ಯಪಾಲರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ 30 ನಿಮಿಷ ಸಾರ್ವಜನಿಕ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವೇಳೆ ಆಕ್ರೋಶಗೊಂಡ ವ್ಯಕ್ತಿಯೊಬ್ಬರು, ‘ಗರ್ಭಿಣಿ ಪತ್ನಿ ವಾಹನದೊಳಗೆ ಸಿಲುಕಿಕೊಂಡಿದ್ದಾಳೆ, ಹೋಗಲು ದಾರಿಬಿಡಿ’ ಎಂದು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದಾರೆ.

ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಕುಳಿತು, ಸಂಚಾರ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಪರ–ವಿರೋಧ ಚರ್ಚೆಗಳು ಆರಂಭವಾಗಿವೆ. ಈಗಾಗಲೇ ವಿಐಪಿ ಸಂಸ್ಕೃತಿಯಿಂದಾಗಿ ಬೆಂಗಳೂರಿನ ರಸ್ತೆಗಳು ಇಕ್ಕಟ್ಟಾಗಿವೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಬೆಂಗಳೂರು ನಗರ ಸಂಚಾರ ಪೊಲೀಸರು ಹಳೇ ವಿಮಾನ ನಿಲ್ದಾಣ ರಸ್ತೆಯನ್ನು ಭಾನುವಾರ ಅರ್ಧ ಗಂಟೆ ಸಂಪೂರ್ಣವಾಗಿ ಬಂದ್ ಮಾಡಿದ್ದರು. ರಸ್ತೆಯ ಈ ಭಾಗದಲ್ಲಿ ಈಗಾಗಲೇ ಅಂಡರ್ಪಾಸ್ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಓಡಾಡಲು ಇಕ್ಕಟ್ಟಾಗಿದೆ. ಇದರ ಮಧ್ಯೆ ಇದ್ದಕ್ಕಿದ್ದ ಹಾಗೆ ನಿರ್ಬಂಧ ವಿಧಿಸಿದ್ದರ ಪರಿಣಾಮ ದಟ್ಟಣೆ ಉಂಟಾಗಿ, ನೂರಾರು ಪ್ರಯಾಣಿಕರು ಪರದಾಡಬೇಕಾಯಿತು.

ರಸ್ತೆಯಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಪೊಲೀಸರು, ‘ಎದ್ದೇಳುತ್ತೀಯಾ, ಇಲ್ಲ ಬೇರೆ ಕೆಲಸ ಮಾಡಬೇಕಾ’ ಎಂದು ಗದರಿದ್ದಾರೆ. ಇದಕ್ಕೆ ಉತ್ತರಿಸಿದ ವ್ಯಕ್ತಿ, ‘ಸರ್ ನನ್ನ ಪತ್ನಿ ಗರ್ಭಿಣಿ, ಕಾರಿನಲ್ಲಿ ಕುಳಿತು ಒದ್ದಾಡುತ್ತಿದ್ದಾರೆ, ದಾರಿ ಬಿಡಿ’ ಎಂದು ಕಿರುಚಿದ್ದಾರೆ, ಇದಕ್ಕೆ ಮತ್ತೆ ಪೊಲೀಸರು ‘ 2 ನಿಮಿಷ ಹೊರಗೆ ನಿಲ್ಲಿ’ ಎಂದಿದ್ದಾರೆ.

ಈ ಸಂಭಾಷಣೆಯ ದೃಶ್ಯವನ್ನು ಸಾರ್ವಜನಿಕರು ವಿಡಿಯೊ ಮಾಡಿದ್ದಾರೆ. ಸದ್ಯ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿದ್ದು, ವೈದ್ಯಕೀಯ ತುರ್ತು ಇದ್ದಾಗಲೂ ಹೀಗೆ ರಸ್ತೆ ನಿರ್ಬಂಧಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.