ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾದರಿ ವಿದ್ಯುತ್‌ ವಿತರಣಾ ವ್ಯವಸ್ಥೆ’ಗೆ ಪಿಆರ್‌ಡಿಸಿ ಜೊತೆ ಬೆಸ್ಕಾಂ ಒಪ್ಪಂದ

Last Updated 25 ಜೂನ್ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾದರಿ ವಿದ್ಯುತ್‌ ವಿತರಣಾ ವ್ಯವಸ್ಥೆ’ಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಇಂಟರ್‌ನ್ಯಾಷನಲ್‌ ಕಾಪರ್‌ ಅಸೋಸಿಯೇಷನ್‌ ಇಂಡಿಯಾ (ಐಸಿಎಐ) ಹಾಗೂ ಪವರ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ಸ್‌ ಪ್ರೈವೇಟ್ ಲಿಲಿಟೆಡ್‌ (ಪಿಆರ್‌ಡಿಸಿ) ಜೊತೆಗೆ ಬೆಸ್ಕಾಂ ಮಂಗಳವಾರ ಒಪ್ಪಂದ ಮಾಡಿಕೊಂಡಿದೆ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಬೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ ಜಿ.ಅಶೋಕ್‌ಕುಮಾರ್‌,ಪಿಆರ್‌ಡಿಸಿವ್ಯವಸ್ಥಾಪಕ ನಿರ್ದೇಶಕ ಆರ್‌.ನಾಗರಾಜ್‌ ಹಾಗೂ ಐಸಿಎಐ ನಿರ್ದೇಶಕಿ ಮಾನಸ ಕುಂದು ಉಪಸ್ಥಿತಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.

ದಕ್ಷ ಕಾರ್ಯಾಚರಣೆಗೆ ಆಯ್ದ ವಿತರಣಾ ಫೀಡರ್‌ಗಳನ್ನು ಮಾದರಿ ವ್ಯವಸ್ಥೆಗೆ ಅಭಿವೃದ್ಧಿಪಡಿಸಲು ಈಗಿನ ಫೀಡರ್‌ಗಳ ಅಧ್ಯಯನ ನಡೆಸಲಿದೆ. ಈ ಒಪ್ಪಂದದಿಂದ ಇಲಾಖೆಯ ತಾಂತ್ರಿಕ ನಷ್ಟ ಕಡಿಮೆಯಾಗುವುದರ ಜೊತೆಗೆ ವಿದ್ಯುತ್‌ ಪರಿವರ್ತಕ ವೈಫಲ್ಯ ಪ್ರಮಾಣ ಕಡಿಮೆ ಮಾಡಿ ಗ್ರಾಹಕರು ಮತ್ತು ಬೆಸ್ಕಾಂ ಸಿಬ್ಬಂದಿ ಸುರಕ್ಷತೆಗೆ ಒತ್ತು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT