ಶನಿವಾರ, ಜುಲೈ 24, 2021
23 °C

ಸಿಬ್ಬಂದಿಗೆ ಸೋಂಕು: ಬೆಸ್ಕಾಂ ಸಹಾಯವಾಣಿ ಕಚೇರಿ ಸೀಲ್‌ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಸ್ಕಾಂನ ಸಹಾಯವಾಣಿ 1912ರಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಟು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಎರಡು ದಿನ (48 ಗಂಟೆ) ಸಹಾಯವಾಣಿ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಗ್ರಾಹಕರು ವಿದ್ಯುತ್‌ ಸಂಬಂಧಿಸಿದ ಯಾವುದೇ ದೂರುಗಳಿಗೆ ನೇರವಾಗಿ ಸ್ಥಳೀಯ ಸಿಬ್ಬಂದಿಗೇ ಕರೆ ಮಾಡುವಂತೆ ಬೆಸ್ಕಾಂ ಹೇಳಿದೆ. 

ಬೆಸ್ಕಾಂ ವೆಬ್‌ಸೈಟ್‌ www.bescom.karnataka.gov.in ನಲ್ಲಿ ವಲಯವಾರು ಅಧಿಕಾರಿಗಳ ದೂರವಾಣಿ ಸಂಖ್ಯೆ ನೀಡಲಾಗಿದೆ. 

ಕೋವಿಡ್‌–19ಗೆ ಸಂಬಂಧಿಸಿದ ಮಾಹಿತಿ ಅಥವಾ ದೂರುಗಳಿಗಾಗಿ ವಾಟ್ಸ್‌ಆ್ಯಪ್‌ ಸಂಖ್ಯೆ 9480812450 ಅಥವಾ 1912covidhelpline@gmail.com ಗೆ ಮೇಲ್‌ ಮಾಡುವಂತೆ ಬೆಸ್ಕಾಂ ಕೋರಿದೆ. 

ಬೆಸ್ಕಾಂ ಸಹಾಯವಾಣಿ ಶನಿವಾರ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ವಿದ್ಯುತ್‌ ಗ್ರಾಹಕರು ಮತ್ತು ಕೊರೊನಾ ಸೋಂಕಿತರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು