ಬೆಂಗಳೂರು: ‘ನಗರದಲ್ಲಿನ ಅಪಾರ್ಟ್ಮೆಂಟ್ ನಿವಾಸಿಗಳು ಪಿಎಮ್ ಸೂರ್ಯಘರ್ ಯೋಜನೆಯಡಿ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಜತೆ ಕೈ ಜೋಡಿಸಬೇಕು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ್ ಹೇಳಿದರು.

ಪಿಎಮ್ ಸೂರ್ಯಘರ್ ಯೋಜನೆ ಅನುಷ್ಠಾನ ಕುರಿತು ನಿಗಮದ ಕಚೇರಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳ ಜತೆ ಅವರು ಚರ್ಚೆ ನಡೆಸಿದರು.

‘ಬೆಸ್ಕಾಂ ಕ್ಷೇತಾಧಿಕಾರಿಗಳು ಮುಂದಿನ ದಿನಗಳಲ್ಲಿ ಅಪಾರ್ಟ್ಮೆಂಟ್ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಿ ಯೋಜನೆ ಅನುಷ್ಠಾನಕ್ಕೆ ಅವರ ಮನವೊಲಿಸಲಿದ್ದಾರೆ. ಗ್ರಾಹಕರು ಮೇಲ್ಛಾವಣಿ ಸೌರ ಘಟಕ ಅಳವಡಿಸಿಕೊಳ್ಳಲು ಅಗತ್ಯ ಸಹಾಯ ನೀಡಲು ಬೆಸ್ಕಾಂ ಸದಾ ಸಿದ್ದವಿದೆ’ ಎಂದು ತಿಳಿಸಿದರು.

ಯೋಜನೆಗೆ ಕೇಂದ್ರ ಸರ್ಕಾರದಿಂದ ದೊರೆಯುವ ಆರ್ಥಿಕ ಸಹಾಯ, ರಾಷ್ಟ್ರೀಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ವಿದ್ಯುತ್ ಬಿಲ್ ಉಳಿತಾಯ, ಪರಿಸರ ಸಂರಕ್ಷಣೆಗೆ ನೀಡುವ ಕೊಡುಗೆ ಕುರಿತು ಮಾಹಿತಿ ನೀಡಲಾಯಿತು. ಮೇಲ್ಛಾವಣಿ ಸೌರ ಘಟಕಗಳಿಗೆ ಗ್ರಿಡ್ ಸಂಪರ್ಕ ಹಾಗೂ ನೆಟ್ ಮೀಟರಿಂಗ್ ವ್ಯವಸ್ಥೆ ಒದಗಿಸುವಲ್ಲಿ ವಿದ್ಯುತ್ ವಿತರಣೆ ಸಂಸ್ಥೆಗಳ ಪಾತ್ರವನ್ನೂ ವಿವರಿಸಲಾಯಿತು.

ಅಪಾರ್ಟ್ಮೆಂಟ್ಗಳ ಸಾಮೂಹಿಕ ಪ್ರದೇಶಗಳಾದ ಲಿಫ್ಟ್, ನೀರಿನ ಪಂಪ್ ಮತ್ತು ಬೆಳಕು ವ್ಯವಸ್ಥೆಗಳಿಗೆ ಸೌರ ವಿದ್ಯುತ್ ಬಳಕೆ ಮಾಡಿದರೆ ವಿದ್ಯುತ್ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು.

137 ಅರ್ಜಿ ಸ್ವೀಕಾರ:

ಈ ಯೋಜನೆಯಡಿ ಬೆಸ್ಕಾಂ ವ್ಯಾಪ್ತಿಯಲ್ಲಿ 4.87 ಮೆಗಾವಾಟ್ ಸಾಮರ್ಥ್ಯದ ಮೇಲ್ಛಾವಣಿ ಸೌರ ವಿದ್ಯುತ್ ಘಟಕಗಳು ಅಳವಡಿಕೆಯಾಗಿದ್ದು, ಇದುವರೆಗೆ 137 ಅರ್ಜಿಗಳು ಬಂದಿವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.