ಬೆಂಗಳೂರು: ಆಲೂರು ವಿದ್ಯುತ್ ನಿರ್ವಹಣಾ ಕೇಂದ್ರಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಭಾನುವಾರ (22ರಂದು) ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ನೆಲಮಂಗಲ ತಾಲ್ಲೂಕಿನ ಅಡಕಮಾರನಹಳ್ಳಿ, ದಾಸನಪುರ, ದೇವಣ್ಣಪಾಳ್ಯ, ಹಾರೋಕ್ಯಾತನಹಳ್ಳಿ, ಗೌಡಹಳ್ಳಿ, ಮಾಕಳಿ, ಹೆಗ್ಗಡೆದೇವನಪುರ, ಹುಸ್ಕೂರು, ಟಾಟಾ ಹೌಸಿಂಗ್, ರಾಯಲ್ ಟೌನ್‌ಶಿಪ್, ಕೋಡಿಪಾಳ್ಯ ವಡೇರಹಳ್ಳಿ, ನರಸೀಪುರ, ಗೋವಿಂದಪುರ, ಆಲೂರು ಪಾಳ್ಯ, ನಗರೂರು ಕೈಗಾರಿಕಾ ಪ್ರದೇಶ ಮತ್ತು ಸುತ್ತು–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.