ಬೆಂಗಳೂರು: ಗ್ರಾಹಕರ ದತ್ತಾಂಶ ರಕ್ಷಣೆ ಮತ್ತು ಸೈಬರ್ ದಾಳಿಯಿಂದ ಸಿಬ್ಬಂದಿಯ ಲ್ಯಾಪ್ಟಾಪ್, ಕಂಪ್ಯೂಟರ್ಗಳನ್ನು ರಕ್ಷಿಸುವ ಉದ್ದೇಶದಿಂದ ಸೈಬರ್ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ಆರಂಭಿ
ಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮುಂದಾಗಿದೆ.

ತನ್ನ ಪ್ರಮುಖ ಐ.ಟಿ ಮೂಲಸೌಕರ್ಯ ಹಾಗೂ ಡಿಜಿಟಲ್ ಕಾರ್ಯಾಚರಣೆ ವ್ಯವಸ್ಥೆಯ ರಕ್ಷಣೆಗಾಗಿ ಬೆಸ್ಕಾಂನ ಕಾರ್ಪೊರೇಟ್ ಕಚೇರಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸುತ್ತಿದ್ದು ಈಗಾಗಲೇ ಟೆಂಡರ್ ಕರೆಯಲಾಗಿದೆ.

ಈ ಯೋಜನೆಗೆ ಸುಮಾರು ₹30 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕೇಂದ್ರದ ಪ್ರಾಥಮಿಕ ವ್ಯವಸ್ಥೆಗೆ ಹಾಗೂ ಅಧಿಕೃತ ಪರವಾನಗಿ ಪಡೆಯಲು ₹3.6 ಕೋಟಿ, ಕೇಂದ್ರದ ನಿರ್ವಹಣೆ ಮತ್ತು ತಾಂತ್ರಿಕ ಚಂದಾದಾರಿಕೆ ವ್ಯವಸ್ಥೆಗಾಗಿ ₹16.1 ಕೋಟಿ ಹಾಗೂ ಮಾನವ ಸಂಪನ್ಮೂಲಕ್ಕೆ ₹9.9 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ.

ಸೈಬರ್ ಭದ್ರತಾ ಕಾರ್ಯಾಚರಣೆ ಕೇಂದ್ರವು ಬೆಸ್ಕಾಂನ ಐ.ಟಿ ಮೂಲಸೌಕರ್ಯಗಳಾದ ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್ ಹಾಗೂ ಕ್ಲೌಡ್ನಲ್ಲಿರುವ ಸೇವೆಗಳೊಂದಿಗೆ ಸಂಯೋಜನೆಗೊಳ್ಳಲಿದೆ. ಟೆಂಡರ್ ದಾಖಲೆಯ ಪ್ರಕಾರ, ಈ ಕೇಂದ್ರವು ಪೋರ್ಟ್ ಮತ್ತು ಅನುಮಾನಾಸ್ಪದ ಸ್ಕ್ಯಾನಿಂಗ್, ಪಾಸ್ವರ್ಡ್ ಹ್ಯಾಕಿಂಗ್ಗೆ ಯತ್ನ, ಅನಧಿಕೃತವಾಗಿ ಸಿಸ್ಟಂ ನಿಯಂತ್ರಣ, ಸಿಸ್ಟಂ ಸ್ಥಗಿತಗೊಳಿಸುವ ಪ್ರಯತ್ನ ಹಾಗೂ ಸೈಬರ್ ದಾಳಿಯಂತಹ ಪ್ರಕರಣಗಳ ಬಗ್ಗೆ ನಿಗಾವಹಿಸಿ, ಅವುಗಳನ್ನು ತಡೆಯಲಿದೆ.

ಸೈಬರ್ ದಾಳಿ, ವಂಚನೆ, ಬೆದರಿಕೆಯಂಥ ಅಪಾಯಗಳನ್ನು ಪತ್ತೆಹಚ್ಚಿ ಅದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದ್ದು, ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನದ ನೆರವಿನೊಂದಿಗೆ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಸೈಬರ್ ದಾಳಿ ತಡೆಗೆ ಈ ರೀತಿಯ ಕೇಂದ್ರವನ್ನು ತೆರೆಯುವಂತೆ ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ಕೂಡ ಎಸ್ಕಾಂಗಳಿಗೆ ನಿರ್ದೇಶನ ನೀಡಿತ್ತು.

‘ಬೆಸ್ಕಾಂ ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದು ಅವರ ದತ್ತಾಂಶಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಗ್ರಾಹಕರು ಮಾಸಿಕ ಬಿಲ್ ಅನ್ನು ಆನ್ಲೈನ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಪಾವತಿಸುತ್ತಿದ್ದು, ಇದರಲ್ಲಿ ಯಾವುದೇ ರೀತಿಯ ವಂಚನೆ ಆಗದಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಲಿದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ್ ಅಭಿಪ್ರಾಯಪಟ್ಟರು.

ವಿದ್ಯುತ್ ಸಂಪರ್ಕ ಪಡೆಯುವಾಗ ಗ್ರಾಹಕರು ವಿಳಾಸ ದಾಖಲೆಗೆ ಆಧಾರ್ ಕಾರ್ಡ್, ಭಾವಚಿತ್ರ, ಕಟ್ಟಡದ ವಿವರ ಇತ್ಯಾದಿ ಮಾಹಿತಿ ಒದಗಿಸಿರುತ್ತಾರೆ. ಅದನ್ನು ರಕ್ಷಿಸುವುದು ಬಹಳ ಮುಖ್ಯ.ಸ್ಮಾರ್ಟ್ ಮೀಟರ್ ಅಳವಡಿಕೆ ಬಳಿಕ ಗ್ರಾಹಕರಿಗೆ ಎಲ್ಲ ಮಾಹಿತಿಗಳು ಸುಲಭವಾಗಿ ಸಿಗುತ್ತಿವೆ. ಇವುಗಳ ರಕ್ಷಣೆಯಲ್ಲಿ ಈ ಕೇಂದ್ರವು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ತಿಳಿಸಿದರು.

ಬಹು ಹಂತದ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಒಳಗೊಂಡಿರಲಿದೆ. ಹತ್ತು ಜನರ ತಂಡವು ಬೆಸ್ಕಾಂನ ಎರಡು ಸಾವಿರ ಕಂಪ್ಯೂಟರ್ಗಳ ಮೇಲೆ ನಿಗಾವಹಿಸಲಿದೆ. ಬೆದರಿಕೆ ಅಥವಾ ಸೈಬರ್ ದಾಳಿ ಕೆಲವೊಮ್ಮೆ ಸಣ್ಣ ಪ್ರಮಾಣದಾಗಿರಬಹುದು. ಆದರೆ, ಅದರಿಂದ ಆಗುವ ಪರಿಣಾಮದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುವಾಗ, ಅದಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಕೂಡ ಮುಖ್ಯವಾಗಿರುತ್ತದೆ ಎಂದರು.

ಮುಂದಿನ ತಿಂಗಳು ಟೆಂಡರ್ ಅಂತಿಮ

ಈಗಾಗಲೇ ಟೆಂಡರ್ ಪರಿಶೀಲನೆ ಕಾರ್ಯ ನಡೆದಿದ್ದು, ಮೇ ತಿಂಗಳ 15ರ ವೇಳೆಗೆ ಅಂತಿಮಗೊಳಿಸುವ ಸಾಧ್ಯತೆ ಇದೆ. ಟೆಂಡರ್ ಅಂತಿಮಗೊಂಡ ನಂತರ, ಅನುಷ್ಠಾನಕ್ಕೆ ಆರು ತಿಂಗಳು ಕಾಲಾವಕಾಶ ನೀಡಲಾಗುತ್ತದೆ.

ಗೃಹ ಇಲಾಖೆ, ಬ್ಯಾಂಕಿಂಗ್, ಐ.ಟಿ ವಲಯ ಇತ್ಯಾದಿ ಕ್ಷೇತ್ರಗಳಲ್ಲಿ ಸೈಬರ್ ಭದ್ರತಾ ಕಾರ್ಯಾಚರಣೆ ಕೇಂದ್ರ ಇದೆ. ಇಂಧನ ಇಲಾಖೆಯಲ್ಲಿ ಆರಂಭ ಮಾಡುತ್ತಿರುವುದು ಇದೇ ಮೊದಲು. ಬೆಸ್ಕಾಂನಲ್ಲಿ ಶುರುವಾಗುವ ಈ ಕೇಂದ್ರದ ಸಾಧಕ–ಬಾಧಕಗಳನ್ನು ನೋಡಿಕೊಂಡು ಬೇರೆ ಕಂಪನಿಗಳು ಕೂಡ ಈ ರೀತಿಯ ಕೇಂದ್ರವನ್ನು ಆರಂಭಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.