‘ಭೋವಿ ಸಮುದಾಯದವರು ಇನ್ನೊಬ್ಬರ ಹಕ್ಕು ಕಿತ್ತುಕೊಳ್ಳುವುದಿಲ್ಲ’

7

‘ಭೋವಿ ಸಮುದಾಯದವರು ಇನ್ನೊಬ್ಬರ ಹಕ್ಕು ಕಿತ್ತುಕೊಳ್ಳುವುದಿಲ್ಲ’

Published:
Updated:
ರಾಜ್ಯ ಮಟ್ಟದ ಭೋವಿ ಚಿಂತನ ಮಂಥನ ಸಭೆಯಲ್ಲಿ ಐಎಎಸ್ ಅಧಿಕಾರಿ ಟಿ. ಶುಭಮಂಗಳ ಅವರು ಮಾತನಾಡಿದರು. (ಎಡದಿಂದ) ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಿದ್ದರಾಮೇಶ್ವರ ಸ್ವಾಮೀಜಿ ಮತ್ತು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಇದ್ದಾರೆ - - – ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಭೋವಿ ಸಮುದಾಯದವರು ಇನ್ನೊಬ್ಬರ ಹಕ್ಕನ್ನು ಕಿತ್ತುಕೊಂಡು ಜೀವಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನತೆಯಿಂದ ಜೀವಿಸುವ ಹಕ್ಕಿದೆ’ ಎಂದು ಹಿರಿಯ ವಕೀಲ ಶಂಕರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ (ಕ್ರಾಂತಿ) ಆಯೋಜಿಸಿದ್ದ ರಾಜ್ಯಮಟ್ಟದ ಭೋವಿ ಚಿಂತನಾ–ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

‘ಭೋವಿ ಜನಾಂಗದವರು ರಸ್ತೆ, ಕೆರೆ, ಕಟ್ಟೆ, ದೇವಸ್ಥಾನ ಹಾಗೂ ಮನೆ ಕಟ್ಟುತ್ತಾರೆ. ಆದರೆ ಅವರೇ ನಿರಾಶ್ರಿತರು. ಅವರಿಗೊಂದು ನೆಲೆ ಇಲ್ಲ. ಜಾತಿಯನ್ನು ಒಡೆಯುವ ಸದಾಶಿವ ಆಯೋಗವನ್ನು ನಾವು ಒಗ್ಗಟ್ಟಿನಿಂದ ವಿರೋಧಿಸಬೇಕು’ ಎಂದು ಹೇಳಿದರು.

‘ನಮ್ಮ ಸಮುದಾಯದವರನ್ನು ಒಂದು ಜಾತಿಗೆ ಸೀಮಿತವಾಗಬೇಡಿ. ಎಲ್ಲರೊಂದಿಗೂ ಬೆರೆಯಿರಿ, ಎಲ್ಲರನ್ನೂ ಸಮಾನವಾಗಿ ಕಾಣಿ. ಅವಕಾಶ ಸಿಕ್ಕಾಗ ನಮ್ಮ
ಸಮುದಾಯದವರಿಗೆ ಸಹಾಯ ಮಾಡಿ’ ಎಂದು ಕರೆ ನೀಡಿದರು.

ಐಎಎಸ್‌ ಅಧಿಕಾರಿ ಟಿ. ಶುಭಮಂಗಳ, ‘ನಾನು ಕೇವಲ ಐಎಎಸ್‌ ಮಾಡಿದ್ದೇನೆ ಅಷ್ಟೇ. ನಾನು ಇನ್ನೂ ಯಾವುದೇ ಸಾಧನೆ ಮಾಡಿಲ್ಲ. ನಮ್ಮ ಸಮುದಾಯದಲ್ಲಿ ಸಾಧನೆ ಮಾಡಿದವರು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಬೆಂಬಲ ನೀಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !