ಭಾನುವಾರ, ಜುಲೈ 3, 2022
24 °C

22 ಲಕ್ಷ ಯುನಿಟ್‌ ವಿದ್ಯುತ್ ಉಳಿತಾಯ: ಬಿಐಎಎಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೌರ ಮತ್ತು ಪವನ ವಿದ್ಯುತ್‌ ಶಕ್ತಿ ಬಳಕೆ ಜೊತೆಗೆ ಇತರ ಪರಿಸರ ಸ್ನೇಹಿ ಕ್ರಮಗಳ ಮೂಲಕ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು (ಬಿಐಎಎಲ್‌) 2020–21ರ ಆರ್ಥಿಕ ವರ್ಷದ ಅವಧಿಯಲ್ಲಿ 22 ಲಕ್ಷ ಯುನಿಟ್‌ನಷ್ಟು ವಿದ್ಯುತ್ ಉಳಿತಾಯದ ಸಾಧನೆ ಮಾಡಿದೆ.

ಸುಮಾರು 9 ಸಾವಿರ ಮನೆಗಳು ಒಂದು ತಿಂಗಳವರೆಗೆ ಬಳಸಬಹುದಾದಷ್ಟು ವಿದ್ಯುತನ್ನು (22 ಲಕ್ಷ ಯುನಿಟ್) ಸಂಸ್ಥೆ ಉಳಿತಾಯ ಮಾಡಿದೆ ಎಂದು ಬಿಐಎಎಲ್‌ ತಿಳಿಸಿದೆ.

ನೈಸರ್ಗಿಕ ಬೆಳಕಿನ ವ್ಯವಸ್ಥೆಯಿಂದ ಸುಮಾರು 5 ಲಕ್ಷ ಯುನಿಟ್‍ಗಳಷ್ಟು, ಹವಾನಿಯಂತ್ರಿತ ವ್ಯವಸ್ಥೆಯ ಮೂಲಕ ಸುಮಾರು 17 ಲಕ್ಷ ಯುನಿಟ್‌ಗಳಷ್ಟು ವಿದ್ಯುತ್ ಉಳಿಸಲಾಗಿದೆ. ಅಂದರೆ 2021ರ ಸಾಲಿನ ತನ್ನ ವಿದ್ಯುತ್ ಅಗತ್ಯದ ಶೇ.98ರಷ್ಟು ಭಾಗವನ್ನು ನವೀಕರಿಸಬಹುದಾದ ಮೂಲಗಳ ಮೂಲಕ ಸಂಸ್ಥೆ ಪಡೆದುಕೊಂಡಿದೆ.

‘ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ವಿಮಾನ ನಿಲ್ದಾಣದ ಆವರಣದಲ್ಲಿಯೇ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಸೌರ ಮತ್ತು ಪವನಶಕ್ತಿ ಪೂರೈಕೆದಾರರೊಂದಿಗೆ ವಿದ್ಯುತ್‌ ಖರೀದಿ ಒಪ್ಪಂದ ಮಾಡಿಕೊಂಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು