ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ: ವಾರಕ್ಕೆ 5 ಟನ್‌ ನಿರ್ಬಂಧಿತ ವಸ್ತು ಸಂಗ್ರಹ

Last Updated 27 ನವೆಂಬರ್ 2020, 21:32 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಾರಕ್ಕೆ 5 ಟನ್‌ನಷ್ಟು ನಿರ್ಬಂಧಿತ ವಸ್ತುಗಳು ಸಂಗ್ರಹವಾಗುತ್ತಿವೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್‌) ಹೇಳಿದೆ.

ಹ್ಯಾಂಡ್ ಟೂಲ್‍, ಬ್ಲೇಡ್‍, ಲೈಟರ್‌, ತೆಂಗಿನಕಾಯಿ, ಟಾಯ್‌ಗನ್, ತುಪ್ಪದ ಪ್ಯಾಕೆಟ್‌, ಮಸಾಲೆ ಪದಾರ್ಥಗಳು ಈ ನಿರ್ಬಂಧಿತ ವಸ್ತುಗಳ ಪಟ್ಟಿಯಲ್ಲಿ ಇವೆ. ಭದ್ರತಾ ಪರೀಕ್ಷೆಯ ಪ್ರದೇಶದಲ್ಲಿ ಸಿಐಎಸ್‌ಎಫ್‌ನಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

‘ಪ್ರಯಾಣಿಕರಿಗೆ ನಿರ್ಬಂಧಿತ ವಸ್ತುಗಳ ಕುರಿತು ತಿಳಿದಿರುವುದಿಲ್ಲ. ಈ ವಸ್ತುಗಳು ಭದ್ರತಾ ಪರೀಕ್ಷಾ ಪ್ರಕ್ರಿಯೆಯ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಸಿಬ್ಬಂದಿ ಸ್ವತಃ ಪರೀಕ್ಷೆ ಮಾಡಬೇಕಾಗಿರುವುದರಿಂದ ಕೆಲಸದಲ್ಲಿ ವಿಳಂಬವಾಗುತ್ತದೆ’ ಎಂದು ಬಿಐಎಎಲ್‌ ಹೇಳಿದೆ.

ನಿರ್ಬಂಧಿತ ವಸ್ತುಗಳು: ಲೈಟರ್‌, ಕತ್ತರಿ, ಆಟಿಕೆ, ಚೂಪಾದ ಲೋಹ, ಕ್ರೀಡಾ ವಸ್ತುಗಳು, ಗನ್‌, ಹತಾರ, ಆತ್ಮರಕ್ಷಣೆಯ ಉಪಕರಣ, ವಿಸ್ಫೋಟಕ, ಉರಿಯುವ ವಸ್ತು, ರಾಸಾಯನಿಕ, ದ್ರವಗಳು, ಸ್ಥಳೀಯ ಕಾನೂನಿನಿಂದ ಭದ್ರತಾ ಅಪಾಯಗಳೆಂದು ಗುರುತಿಸಲಾದ ಇತರೆ ಯಾವುದೇ ಇತರೆ ವಸ್ತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT